‘ಅರ್ಜೆಂಟೀನಾ’ ಜತೆ ಅಮುಲ್ ಪಾಲುದಾರಿಕೆ ಮತ್ತೆ ವಿಸ್ತರಣೆ

Picture of Savistara

Savistara

Bureau Report

ಬೆಂಗಳೂರು: ಭಾರತದ ಪ್ರತಿಷ್ಠಿತ ಡೇರಿ ಉತ್ಪನ್ನಗಳ ಬ್ರಾಂಡ್ ಅಮುಲ್‌, ಅರ್ಜೆಂಟೀನಾ ಫುಟ್‌ಬಾಲ್ ತಂಡದೊಂದಿಗಿನ ಅಧಿಕೃತ ಪ್ರಾದೇಶಿಕ ಪಾಲುದಾರಿಕೆಯನ್ನು ಇನ್ನೊಂದು ವರ್ಷಕ್ಕೆ ವಿಸ್ತರಿಸಿದೆ. ಫಿಫಾ ಫುಟ್‌ಬಾಲ್ ವಿಶ್ವಕಪ್ 2026ರ ವರೆಗೆ ಈ ಪಾಲುದಾರಿಕೆ ಇರಲಿದೆ.

‘ಫುಟ್‌ಬಾಲ್‌ ಆಟದಂತೆಯೇ ಅಮುಲ್ ಕೂಡ ಗಡಿಯಾಚೆಗಿನ ಹೃದಯಗಳನ್ನು ಬೆಸೆಯುತ್ತದೆ. 2022ರ ವಿಶ್ವ ಚಾಂಪಿಯನ್ ಅರ್ಜೆಂಟೀನಾ ತಂಡದೊಂದಿಗೆ ಪಾಲುದಾರಿಕೆಯನ್ನು ಮುಂದುವರಿಸುತ್ತಿರುವುದು ಸಂತಸದ ವಿಚಾರ’ ಎಂದು ಅಮುಲ್ ಸಂಸ್ಥೆಯ ಕಾರ್ಯಕಾರಿ ನಿರ್ದೇಶಕ ಡಾ.ಜಯನ್ ಮೆಹ್ರಾ ಹೇಳಿದರು.ಅಮುಲ್‌ ಸಂಸ್ಥೆಯು ಅರ್ಜೆಂಟೀನಾ ಫುಟ್‌ಬಾಲ್ ಅಸೋಸಿಯೇಷನ್‌ ಜೊತೆಗೆ 2022ರಿಂದಲೂ ಪ್ರಾದೇಶಿಕ ಪಾಲುದಾರಿಕೆಯನ್ನು ಹೊಂದಿದೆ.

News Updates

ಮಂಗಳೂರಿನಲ್ಲಿ ಸ್ಮರಣಿಕೆ ತಯಾರಿಕಾ ಸಂಸ್ಥೆಯಾದ ‘ಮೈಟ್ರೀ ಕಾರ್ವಿಂಗ್ಸ್’ ನ ನೂತನ ಘಟಕ “ದಕ್ಷಿಣಾ” ದ ಶುಭಾರಂಭ | ಅತ್ಯಾಕರ್ಷಕ ಮರದ ಕೆತ್ತನೆಗಳು, ವಿಶಿಷ್ಟ ಶೈಲಿಯ ಸ್ಮರಣಿಕೆಗಳು ಹಾಗೂ ಗ್ರಾಹಕರ ಅಭಿರುಚಿಗೆ ತಕ್ಕಂತೆ ವಿನ್ಯಾಸಗೊಳಿಸಿದ ಕಲಾಕೃತಿಗಳು ಲಭ್ಯ: ಸುಜಿತ್ ಪ್ರತಾಪ್

[t4b-ticker]
error: Content is protected !!