ಪಶ್ಚಿಮ ಬಂಗಾಳದ ಮತದಾರರ ಕರಡು ಪಟ್ಟಿಯಿಂದ 58 ಲಕ್ಷ ಹೆಸರು ಡಿಲೀಟ್

Picture of Savistara

Savistara

Bureau Report

ಕೋಲ್ಕತ್ತ: ಪಶ್ಚಿಮ ಬಂಗಾಳದಲ್ಲಿ ಮತದಾರರ ವಿಶೇಷ ಸಮಗ್ರ ಪರಿಷ್ಕರಣೆ(ಎಸ್‌ಐಆರ್) ನಂತರ ಮತದಾರರ ಕರಡು ಪಟ್ಟಿಯಿಂದ 58 ಲಕ್ಷ ಮತದಾರರ ಹೆಸರನ್ನು ತೆಗೆದು ಹಾಕಲು ಗುರುತಿಸಲಾಗಿದೆ ಎಂದು ಮಂಗಳವಾರ ಚುನಾವಣಾ ಆಯೋಗ ತಿಳಿಸಿದೆ.

ಆಯೋಗ ಬಿಡುಗಡೆ ಮಾಡಿದ ಮಾಹಿತಿ ಪ್ರಕಾರ, ಹೆಸರು ಅಳಿಸಲು ಗುರುತಿಸಿರುವ 58,20,898 ಲಕ್ಷ ಮತದಾರರ ಪೈಕಿ 24,16,852 2 2 . 19,88,076 ಮರಣ ಹೊಂದಿದ್ದಾರೆ. ವಲಸೆ ಅಥವಾ ಶಾಶ್ವತವಾಗಿ ಸ್ಥಳಾಂತರಗೊಂಡವರಾಗಿದ್ದಾರೆ.ಉಳಿದಂತೆ 12,20,038 ಮಂದಿ ನಾಪತ್ತೆಯಾದವರು. 1,38,328 ಮಂದಿಯ ಹೆಸರು ಒಂದಕ್ಕಿಂತ ಹೆಚ್ಚು ಬಾರಿ ನೋಂದಣಿಯಾಗಿವೆ. ಇತರ ಕಾರಣಗಳಿಂದ 57,604 ಮಂದಿಯ ಹೆಸರನ್ನು ಅಳಿಸಲಾಗಿದೆ ಎಂದು ತಿಳಿಸಿದೆ.ಎಸ್‌ಐಆರ್‌ನ ಮೊದಲ ಹಂತ ಪೂರ್ಣಗೊಂಡಿದ್ದು, ಮತದಾರರ ಪಟ್ಟಿಯಿಂದ ತಪ್ಪಾಗಿ ಹೆಸರು ಅಳಿಸಿ ಹೋಗಿದ್ದರೆ, ಜನವರಿ 15ರೊಳಗೆ ಆಕ್ಷೇಪ ಸಲ್ಲಿಸಲು ತಿಳಿಸಿದೆ. 2026ರ ಫೆಬ್ರುವರಿಯಲ್ಲಿ ಮತದಾರರ ಅಂತಿಮ ಪಟ್ಟಿ ಬಿಡುಗಡೆಯಾಗಲಿದೆ.

[t4b-ticker]
error: Content is protected !!