ಬೆಂಗಳೂರು: ಸರ್ಕಾರದ ಪಂಚ ಗ್ಯಾರೆಂಟಿಗಳು ರಾಜ್ಯದ ಜನರ ಕೈ ಹಿಡಿಯುತ್ತಿವೆ.ನಿತ್ಯವೂ ಶಕ್ತಿ ಯೋಜನೆಗೆ ಸಖತ್ ರೆಸ್ಪಾನ್ಸ್ ಸಿಗ್ತಿದೆ, ಗೃಹಜ್ಯೋತಿ ಸ್ಕೀಂ ಕೂಡ ಮನೆಗಳಲ್ಲಿ ದೀಪ ಬೆಳಗುತ್ತಿದೆ. ಇತ್ತ ಯುವನಿಧಿ ಯುವಕರ ಪಾಲಿಗೆ ನೆರವಾಗ್ತಿದೆ.ಆದ್ರೆ ಮಹತ್ವಾಕಾಂಕ್ಷಿ ಗ್ಯಾರೆಂಟಿ ಆಗಿರೋ ಗೃಹಲಕ್ಷ್ಮಿ ಮಾತ್ರ ಮನೆ ಮಹಾಲಕ್ಷ್ಮಿಯರ ಆಕ್ರೋಶಕ್ಕೆ ಕಾರಣ ಆಗ್ತಿದೆ. ಒಂದು ಕಡೆ ಹಣ ಹಾಕಿ ಅಂತ ಜನ ಪ್ರಶ್ನೆ ಮಾಡ್ತಿದ್ರೆ, ಮತ್ತೊಂದು ಕಡೆ ಅಧಿಕಾರಿಗಳ ಯಡವಟ್ಟಿನಿಂದಾಗಿ ಮೃತಪಟ್ಟ ಮಹಿಳೆಯರ ಖಾತೆಗಳಿಗೆ ಹಣ ಜಮಾವಣೆ ಮಾಡ್ತಿರೋದು ಬಟಾಬಯಲಾಗಿದೆ.
ಹೌದು..ರಾಜ್ಯದಲ್ಲಿ ಜೋಡೆತ್ತು ಅಂತ ಹೆಸರಾಗಿರೋ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಆಡಳಿತದ ಕಾಂಗ್ರೆಸ್ ಸರ್ಕಾರ ರಚನೆ ಆಗಿ ಎರಡು ವರ್ಷ ತುಂಬ್ತಿದೆ. ಆಡಳಿತಕ್ಕೂ ಬರೋ ಮುನ್ನ ಗ್ಯಾರೆಂಟಿಗಳ ಅಲೆ ಎಬ್ಬಿಸಿದ್ದ ಕಾರಣವೇ ರಾಜ್ಯದ ಜನಕೂಡ ಕೈ ಹಿಡಿದಿರೋದು ಅಷ್ಟೆ ನಿಜ.ಶಕ್ತಿ ಯೋಜನೆ, ಗೃಹಜ್ಯೋತಿ, ಯುವನಿಧಿ, ಅನ್ನಭಾಗ್ಯ ಜೊತೆಗೆ ಸೇರಿ ಮನೆ ಮನೆ ಯಜಮಾನಿಯರಿಗೆ ಎರಡು ಸಾವಿರ ಹಣ ಹಾಕಲಾಗ್ತಿದೆ.ಎಲ್ಲವೂ ಒಂದು ಕಡೆ ಯಶಸ್ವಿ ಹಾದಿಯಲ್ಲಿ ಸಾಗ್ತಿದ್ರೆ, ಗೃಹಲಕ್ಷ್ಮಿ ಹಣ ಮಾತ್ರ ಸರಿಯಾಗಿ ಮಹಿಳೆಯರ ಖಾತೆ ಸೇರ್ತಿಲ್ಲ ಅನ್ನೋ ಆಪಾದನೆ ಇದೆ.
ಎರಡೂವರೆ ವರ್ಷದಲ್ಲಿ ಕೆಲವರಿಗೆ ಕೇವಲ ಎರಡು ತಿಂಗಳ ಹಣ ಸೇರಿದ್ರೆ, ಇನ್ನೊಂದಷ್ಟು ಮಹಿಳೆಯರಿಗೆ ಆರು ತಿಂಗಳ ಹಣ ಬಾಕಿ ಇದೆ ಎನ್ನಲಾಗ್ತಿದೆ.ಇದೆಲ್ಲದರ ನಡುವೆ ಇದೀಗ ಗೃಹಲಕ್ಷ್ಮಿ ಹಣದ ಬಗ್ಗೆ ಭಾರೀ ಚರ್ಚೆ ಆಗ್ತಿದ್ದು, ಬರೋಬ್ಬರಿ 79 ಕೋಟಿ ರೂ ಹಣ ಮೃತ ಪಟ್ಟ ಮಹಿಳೆಯರ ಖಾತೆಗೆ ವರ್ಗವಾಣೆ ಆಗ್ತಿದೆ ಅನ್ನೋದು ಬಟಾ ಬಯಲಾಗ್ತಿದೆ. ಇದು ನಾವ್ ಹೇಳ್ತಿಲ್ಲ.. ಸರ್ಕಾರದ ಅಧಕೃತ ದಾಖಲೆಯೇ ಹೇಳ್ತಿದೆ.ಒಂದಲ್ಲ .. ಎರಡಲ್ಲ ಬರೋಬ್ಬರಿ 64 ಸಾವಿರಕ್ಕೂ ಅಧಿಕ ಮೃತ ಮಹಿಳೆಯರ ಅಕೌಂಟ್ ಗೆ ಗೃಹಲಕ್ಷ್ಮಿ 2 ಸಾವಿರ ಹಣ ಜಮೆ ಆಗಿರೋದು ಬಹಿರಂಗವಾಗಿದೆ. 2023 ರಿಂದ 2024 ನವೆಂಬರ್ ವರೆಗೂ ಸುಮಾರು 79 ಕೋಟಿ ರೂ ಜಮೆ ಆಗಿದ್ದು,ಹಣಕಾಸು ಇಲಾಖೆ ಹಾಗೂ ಗೃಹಲಕ್ಷ್ಮಿ ಯೋಜನೆಯ ಅಧಿಕಾರಿಗಳ ಸಭೆ ಸಭೆ ಮಾಡ್ತಿದ್ದಾರೆ.ಮೃತ ಮಹಿಳೆಯರ ಖಾತೆಗಳಿಗೆ ಹೋಗಿರುವ ದುಡ್ಡು ವಾಪಸ್ ಪಡೆಯಲು ಹರಸಾಹಸ ಪಡ್ತಿದ್ದಾರೆ ಎನ್ನಲಾಗ್ತಿದೆ.
ಒಂದು ಕಡೆ ರಾಜ್ಯದಲ್ಲಿ ಗೃಹಲಕ್ಷ್ಮಿ ಹಣಕ್ಕಾಗಿ ಫಲಾನುಭವಿಗಳ ಪರದಾಟ ಆಗ್ತಿದ್ರೆ, ಮತ್ತೊಂದು ಕಡೆ ಮೃತ ಪಟ್ಟಿರುವ ಮಹಿಳೆಯರ ಅಕೌಂಟ್ ಗೂ ಹಣ ಜಮೆ ಆಗಿ ಅವರು ಕುಟುಂಬದವರು ಹಣ ಬಿಡಿಸಿ ಖರ್ಚುವೆಚ್ಚಗಳಿಗೆ ಹಾಕಿ ಆಗಿದೆ.ಆದ್ರೆ ಅಧಿಕಾರಿಗಳು ಮಾತ್ರ ರೈಲು ಹೋದಮೇಲೆ ಟಿಕೆಟ್ ತಗೊಂಡ್ರು ಅನ್ನೋ ಹಾಗೆ ಮಂದಬುದ್ದಿ ಮತ್ತೆ ಮತ್ತೆ ಅನಾವರಣ ಅನ್ನೋದು ಸಾಭೀತಾಗಿದೆ. ಇದರ ಹೊರೆತಾಗಿಯೂ ಬ್ಯಾಂಕ್ ನವರಿಗೆ ಪತ್ರ ಬರೆದು ಹಣ ವಾಪಸ್ ಕಳ್ಸಿ ಅಂತ ಪತ್ರದ ಮೇಲೆ ಪತ್ರ ಮಾತ್ರ ಬರೆಯೋದು ನಿಲ್ಲಿಸಿಲ್ಲ.













































