ಢಾಕಾ: ಭಾರತ ವಿರೋಧಿ ಮೂಲಭೂತವಾದಿ ನಾಯಕನ ಮರಣದ ನಂತರ ಬಾಂಗ್ಲಾದೇಶದಲ್ಲಿ ಹೊಸ ಹಿಂಸಾಚಾರ ಭುಗಿಲೆದ್ದಿದ್ದು, ಇಸ್ಲಾಮಿಕ್ ಗುಂಪೊಂದು ದೀಪು ಚಂದ್ರ ದಾಸ್(Deepu Chandra Das) ಎಂಬ ಹಿಂದೂ ವ್ಯಕ್ತಿಯನ್ನು ಹತ್ಯೆ ಮಾಡಿದ್ದಾರೆ. ಮೈಮೆನ್‌ಸಿಂಗ್‌ನ ಗಾರ್ಮೆಂಟ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ದೀಪು ಚಂದ್ರ ದಾಸ್ರನ್ನು ಗುರುವಾರ ರಾತ್ರಿ ಇಸ್ಲಾಂ ಧರ್ಮವನ್ನು ಅವಮಾನಿಸಿದ ಆರೋಪದ ಮೇಲೆ ಥಳಿಸಿ ಕೊಲ್ಲಲಾಗಿದೆ. ಈ ಮಧ್ಯೆ ಉಸ್ಮಾನ್ ಷರೀಫ್ ಹಾದಿ ಹತ್ಯೆಗೆ ನ್ಯಾಯ ಒದಗಿಸಬೇಕೆಂದು ಒತ್ತಾಯಿಸಿದ ಕೆಲವು ಹಿಂಸಾತ್ಮಕ ಪ್ರತಿಭಟನಾಕಾರರು ಢಾಕಾದಲ್ಲಿ ಪ್ರಮುಖ ಆಂಗಡಿಗಳನ್ನು ಧ್ವಂಸ ಮಾಡಿದ್ದಾರೆ. ಅಲ್ಲದೆ, ದಾಸ್ ಹತ್ಯೆಯ ನಂತರ, ನಿರ್ಜೀವ ದೇಹವನ್ನು ಮರಕ್ಕೆ ಕಟ್ಟಿ ಬೆಂಕಿ ಹಚ್ಚಲಾಯಿತು.ಈ ಬಗ್ಗೆ ಪ್ರತಿಕ್ರಿಯಿಸಿರುವ ದಾಸ್ ತಂದೆ ರವಿಲಾಲ್ ದಾಸ್, ಮುಹಮ್ಮದ್ ಯೂನಸ್ರ ಮಧ್ಯಂತರ ಸರ್ಕಾರವು ಗುಂಪು ಹಲ್ಲೆಯನ್ನು ಖಂಡಿಸಿ ಕ್ರಮ ಕೈಗೊಳ್ಳಲು ಆದೇಶಿಸಿದ್ದಾರೆ. ಅಲ್ಲದೆ, ಘಟನೆಯನ್ನು ಬಲಿಪಶುವಿನ ತಂದೆ ಹತಾಶರಾಗಿ ಕಾಣುತ್ತಿದ್ದು, ಸರ್ಕಾರದಿಂದ ಯಾರೂ ಯಾವುದೇ ಭರವಸೆ ನೀಡಿಲ್ಲ. ಯಾರೂ ಏನನ್ನೂ ಹೇಳಿಲ್ಲ ಎಂದು ಕಣ್ಣೀರಿಟ್ಟಿದ್ದಾರೆ. ತಮ್ಮ ಮಗನ ಹತ್ಯೆಯ ಸುದ್ದಿ ಮೊದಲು ಫೇಸ್‌ಬುಕ್‌ನಿಂದ ತಿಳಿದುಕೊಂಡೆ ಎಂದು ನೆನಪಿಸಿಕೊಂಡಿದ್ದಾರೆ. ಮುಂದುವರೆದು ಮಾತನಾಡಿದ ರವಿದಾಸ್, ನಾವು ಫೇಸ್‌ಬುಕ್‌ನಿಂದ ವಿಷಯಗಳನ್ನು ಕೇಳಲು ಪ್ರಾರಂಭಿಸಿದೆವು. ನಂತರ ಹೆಚ್ಚಿನ ಜನರು ಇದರ ಬಗ್ಗೆ ಮಾತನಾಡಲು ಆರಂಭಿಸಿದ್ದರು. ಯಾರೋ ಅವನಿಗೆ ಕೆಟ್ಟದಾಗಿ ಹೊಡೆಯಲಾಗಿದೆ ಎಂದು ಹೇಳಿದಾಗ ನಮಗೆ ವಿಷಯ ತಿಳಿಯಿತು. ಅಲ್ಲದೆ, ಅರ್ಧ ಗಂಟೆಯ ನಂತರ, ನನ್ನ ಚಿಕ್ಕಪ್ಪ ಬಂದು ನನ್ನ ಮಗನನ್ನು ಕರೆದುಕೊಂಡು ಹೋಗಿ ಮರಕ್ಕೆ ಕಟ್ಟಿ ಹಾಕಿದರು ಎಂದು ಹೇಳಿದರು ಎಂದು ತೀವ್ರ ದುಃಖತಪ್ತರಾಗಿ ಹೇಳಿದ್ದಾರೆ.
ನಂತರ ಇಸ್ಲಾಂಮಿಕ್ ಉಗ್ರರು ಮೇಲೆ ದಾಸ್ ಮೃತದೇಹದ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದರು. ಅಲ್ಲದೆ, ಅವನ ಸುಟ್ಟ ದೇಹವನ್ನು ಹೊರಗೆ ಬಿಡಲಾಗಿತ್ತು. ಅವರು ಸುಟ್ಟ ಮುಂಡ ಮತ್ತು ತಲೆಯನ್ನು ಹೊರಗೆ ಕಟ್ಟಿದ್ದರು. ಇದು ಭಯಾನಕವಾಗಿತ್ತು ಎಂದು ದುಃಖಿತ ತಂದೆ ಬಾಂಗ್ಲಾದೇಶದಲ್ಲಿರುವ ತನ್ನ ಪ್ರಸ್ತುತ ಸ್ಥಿತಿಯನ್ನು ತಿಳಿಸಿದ್ದಾರೆ. ದೀಪು ದಾಸ್ರ ಗುಂಪು ಹತ್ಯೆಯು ಬಾಂಗ್ಲಾದೇಶದ ಅಲ್ಪಸಂಖ್ಯಾತರ, ವಿಶೇಷವಾಗಿ ಹಿಂದೂಗಳ ದುಃಸ್ಥಿತಿಯನ್ನು ಪ್ರಸ್ತುತ ಪಡಿಸಿದೆ.
ಕೇಂದ್ರ ಸರ್ಕಾರ ಮಧ್ಯೆ ಪ್ರವೇಶಿಸಬೇಕು- ಪ್ರಿಯಾಂಕಾ ವಾದ್ರಾ
ಈ ಬಗ್ಗೆ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಪ್ರಿಯಾಂಕಾ ವಾದ್ರಾ, ನೆರೆಯ ದೇಶದಲ್ಲಿ ಹಿಂದೂ ಯುವಕ ದೀಪು ಚಂದ್ರ ದಾಸ್ ಕ್ರೂರ ಹತ್ಯೆಯ ನಂತರ ಮನವಿ ಮಾಡಿದ್ದಾರೆ. ಅಲ್ಲದೆ, ಹಿಂದೂ, ಕ್ರಿಶ್ಚಿಯನ್ ಮತ್ತು ಬೌದ್ಧ ಅಲ್ಪಸಂಖ್ಯಾತರ ವಿರುದ್ಧದ ಹಿಂಸಾಚಾರದ ಘಟನೆಗಳು ಕಳವಳಕಾರಿಯಾಗಿದೆ ಎಂದು ಹೇಳಿದ್ದಾರೆ. ಈ ಕೊಲೆಯನ್ನು ಅತ್ಯಂತ ಆತಂಕಕಾರಿಯಾಗಿದೆ. ಧರ್ಮ, ಜಾತಿ ಅಥವಾ ಗುರುತಿನ ಆಧಾರದ ಮೇಲೆ ತಾರತಮ್ಯ ಮತ್ತು ಹಿಂಸೆ ಮಾನವೀಯತೆಯ ವಿರುದ್ಧದ ಅಪರಾಧಗಳಾಗಿವೆ. ಅಲ್ಲದೆ, ಅಲ್ಪಸಂಖ್ಯಾತರ ಸುರಕ್ಷತೆಯ ವಿಷಯವನ್ನು ಬಾಂಗ್ಲಾದೇಶ ಸರ್ಕಾರದೊಂದಿಗೆ ಬಲವಾಗಿ ಚರ್ಚಿಸುವಂತೆ ವಾದ್ರಾ ಭಾರತ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಅಲ್ಪಸಂಖ್ಯಾತರ ಸುರಕ್ಷತೆ
ಈ ಹತ್ಯೆಯು ಬಾಂಗ್ಲಾದ ಧಾರ್ಮಿಕ ಅಲ್ಪಸಂಖ್ಯಾತರ ಸುರಕ್ಷತೆಯ ಬಗ್ಗೆ ಮತ್ತೆ ಕಳವಳವನ್ನು ಉಂಟುಮಾಡಿದೆ. ಇಂತಹ ಘಟನೆಗಳು ನಾಗರಿಕ ಸಮಾಜದ ಕಲ್ಪನೆಯನ್ನು ಹಾಳುಮಾಡುತ್ತವೆ ಎಂದು ಪ್ರಿಯಾಂಕಾ ಗಾಂಧಿ ವಾದ್ರಾ ಹೇಳಿದ್ದಾರೆ. ಅಲ್ಲದೆ, ಧರ್ಮದ ಹೆಸರಿನಲ್ಲಿ ಹಿಂಸಾಚಾರವನ್ನು ಯಾವುದೇ ಸಂದರ್ಭದಲ್ಲೂ ಸಮರ್ಥಿಸಲು ಸಾಧ್ಯವಿಲ್ಲ ಎಂದು ಪ್ರಿಯಾಂಕಾ ತಿಳಿಸಿದ್ದಾರೆ.
ದಾಸ್ ಹತ್ಯೆಗೆ ಕಾರಣವೇನು..?
ಮೈಮೆನ್ಸಿಂಗ್ ಜಿಲ್ಲೆಯ ಭಾಲುಕಾದ ಯುವ ಗಾರ್ಮೆಂಟ್ ಕಾರ್ಖಾನೆ ಕೆಲಸಗಾರನಾಗಿದ್ದ ದೀಪು ಚಂದ್ರ ದಾಸ್ನನ್ನು ಗುರುವಾರ ರಾತ್ರಿ ಗುಂಪೊಂದು ಕೊಂದಿದೆ ಎಂದು ವರದಿಯಾಗಿತ್ತು. ಅಲ್ಲದೆ, ಸ್ಥಳೀಯ ಪೊಲೀಸರ ಪ್ರಕಾರ, ಈ ಘಟನೆ ರಾತ್ರಿ 9 ಗಂಟೆ ಸುಮಾರಿಗೆ ನಡೆದಿದ್ದು, ಪ್ರವಾದಿಯವರ ಬಗ್ಗೆ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದಾರೆ ಎಂದು ದಾಸ್ ಮೇಲೆ ಜನಸಮೂಹ ಆರೋಪ ಹೊರಿಸಿದ್ದು, ಈ ಆರೋಪವು ಹಿಂಸಾತ್ಮಕ ದಾಳಿಗೆ ಕಾರಣವಾಯಿತು.
ಆರೋಪಿಗಳ ಬಂಧನ
ಬಾಂಗ್ಲಾದೇಶದ ಕ್ಷಿಪ್ರ ಕಾರ್ಯಾಚರಣಾ ಬೆಟಾಲಿಯನ್ (RAB) ಗುಂಪು ಹತ್ಯೆಗೆ ಸಂಬಂಧಿಸಿದಂತೆ ಏಳು ಜನರನ್ನು ಬಂಧಿಸಿದೆ. ಮೈಮೆನ್ಸಿಂಗ್ ಜಿಲ್ಲೆಯ ಹಲವು ಸ್ಥಳಗಳಲ್ಲಿ ನಡೆದ ಕಾರ್ಯಾಚರಣೆಗಳ ನಂತರ ಈ ಬಂಧನಗಳನ್ನು ಮಾಡಲಾಗಿದೆ. ಬಾಂಗ್ಲಾದ ಮಧ್ಯಂತರ ಸರ್ಕಾರವು ಶುಕ್ರವಾರ ಬಂಧನಗಳನ್ನು ದೃಢಪಡಿಸಿದೆ.ಬಂಧಿತರನ್ನು ಮೊಹಮ್ಮದ್ ಲಿಮೋನ್ ಸರ್ಕಾರ್ (19), ಮೊಹಮ್ಮದ್ ತಾರೆಕ್ ಹೊಸೈನ್ (19), ಮೊಹಮ್ಮದ್ ಮಾಣಿಕ್ ಮಿಯಾ (20), ಇರ್ಷಾದ್ ಅಲಿ (39), ನಿಜುಮ್ ಉದ್ದೀನ್ (20), ಅಲೋಮ್‌ಗೀರ್ ಹೊಸೈನ್ (38) ಮತ್ತು ಮೊಹಮ್ಮದ್ ಮಿರಾಜ್ ಹೊಸೈನ್ ಅಕಾನ್ (46) ಎಂದು ಗುರುತಿಸಲಾಗಿದೆ,













































