ಇತ್ತೀಚೆಗೆ ನಿಧನರಾದ ಮಂಡೆಕೋಲು ಗ್ರಾಮದ ಹಾಸ್ಪಾರೆ ಗಣೇಶ ನಾಯರ್ ರವರಿಗೆ ಪರಿವಾರ ಸಂಘಟನೆಗಳ ಕಾರ್ಯಕರ್ತರ ವತಿಯಿಂದ ಶ್ರದ್ಧಾಂಜಲಿ ಕಾರ್ಯಕ್ರಮ ಸುಳ್ಯ ಸಿ. ಎ. ಬ್ಯಾಂಕ್ ಸಭಾಭವನದಲ್ಲಿ ಡಿ.26 ರಂದು ನಡೆಯಿತು. ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ವಿನಯ ಕುಮಾರ್ ಕಂದಡ್ಕ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಭಜರಂಗದಳ, ಜಾಗರಣ ವೇದಿಕೆ ಮೂಲಕ ಅವರು ಮಾಡಿದ ಸಾಮಾಜಿಕ ಕಾರ್ಯಗಳನ್ನು ನೆನಪಿಸಿಕೊಂಡು, ಅವರ ಕುಟುಂಬಕ್ಕೆ ಹಿಂದೂ ಸಮಾಜ ಬೆಂಬಲವಾಗಿ ನಿಲ್ಲಬೇಕಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಸುಬೋಧ್ ಶೆಟ್ಟಿ ಮೇನಾಲ, ಪ್ರಭಾಕರ ನಾಯರ್ , ಸುದರ್ಶನ ಪಾತಿಕಲ್ಲು , ರಾಜೇಶ್ ಮೇನಾಲ ಮೊದಲಾದವರು ಮಾತನಾಡಿ ಗಣೇಶ ನಾಯರ್ ರವರ ಜೊತೆಗಿನ ತಮ್ಮ ಒಡನಾಟಗಳನ್ನು ನೆನಪಿಸಿಕೊಂಡು ಅವರ ಜೀವನದ ಘಟನೆಗಳನ್ನು ನೆನಪಿಸಿಕೊಂಡು ಶ್ರದ್ದಾಂಜಲಿ ಅರ್ಪಿಸಿದರು. ಕಾರ್ಯಕ್ರಮದಲ್ಲಿ ಗಣೇಶ್ ನಾಯರ್ ರಚಿಸಿ, ಅವರ ಪತ್ನಿ ಹಾಡಿದ ದೇಶಭಕ್ತಿ ಗೀತೆಯನ್ನು ಕೇಳಿಸಲಾಯಿತು.

ಈ ಸಂದರ್ಭದಲ್ಲಿ ಪ್ರದ್ಯುಮ್ನ ಉಬರಡ್ಕ, ಕುಸುಮಾಧರ ಎ ಟಿ, ಕೇಶವ ನಾಯಕ್, ಅನೂಪ್ ಪೈ, ದಾಮೋದರ ಮಂಚಿ, ಜಿ ಜಿ ನಾಯಕ್, ರಮೇಶ್ ಇರಂತಮಜಲು, ವಿಕ್ರಂ ಅಡ್ಪಂಗಾಯ, ರಾಜೇಶ್ ಭಟ್ ನೆಕ್ಕಿಲ, ಆರ್ ಕೆ ಭಟ್ ಕುರುಂಬಡೆಲು , ಸುಧಾಕರ ಕುರುಂಜಿ, ಹರೀಶ್ ಬೂಡುಪನ್ನೆ, ಭಾಸ್ಕರ ನಾಯರ್, ಚಂದ್ರಶೇಖರ್ ನಾಯರ್, ಪ್ರಬೋದ್ ಶೆಟ್ಟಿ, ನಾಗೇಶ್ ಮೇನಾಲ, ಅಜಿತ್ ಪೇರಾಲು, ಚಿದಾನಂದ ಕಾಯರ್ತೋಡಿ, ವರ್ಷಿತ್ ಚೊಕ್ಕಾಡಿ, ಮನೋಜ್ ಪೆರಾಜೆ , ರಾಜೇಶ್ ಕಲ್ಲುಮುಟ್ಲು, ಶಿವಪ್ರಸಾದ್, ವಿನಯ ನಾರಾಲು , ಸುಧೀರ್ ಉಗ್ರಾಣಿಮನೆ, ಮತ್ತಿತರರು ಉಪಸ್ಥಿತರಿದ್ದರು. ಸುದರ್ಶನ ಎಸ್. ಪಿ. ವಂದಿಸಿದರು.













































