ಕುಕ್ಕೆ ಸುಬ್ರಮಣ್ಯ: ಹಿಂದೂ ಧಾರ್ಮಿಕ ಕ್ಷೇತ್ರವಾಗಿರುವ ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಕಾರ್ಯಕ್ರಮಗಳಿಗೆ ಪ್ರೋಟೋಕಾಲ್ ನೆಪದಲ್ಲಿ ಅನ್ಯಧರ್ಮಿಯರನ್ನು ಆಹ್ವಾನಿಸುವುದು ಸಂಪ್ರದಾಯ ಹಾಗೂ ಹಿಂದೂ ಧಾರ್ಮಿಕ ಕಾಯ್ದೆಗೆ ವಿರುದ್ಧವಾಗಿದೆ ಹಾಗಾಗಿ ಕೂಡಲೇ ತಿದ್ದುಪಡಿ ಮಾಡಬೇಕು ಎಂದು ವಿಶ್ವ ಹಿಂದೂ ಪರಿಷದ್, ಹಿಂದೂ ಜಾಗರಣ ವೇದಿಕೆಯ ಜಂಟಿ ಹೋರಾಟವು ಶ್ರೀ ಕ್ಷೇತ್ರ ಸಂರಕ್ಷಣ ಸಮಿತಿಯ ಮೂಲಕ ಪ್ರತಿಭಟನೆ ಮಾಡಿ ಅಗ್ರಹಮಾಡಿತ್ತು ಈ ಹಿನ್ನಲೆಯಲ್ಲಿ ಅತಿಥಿಗಳು ಕಾರ್ಯಕ್ರಮದಿಂದ ದೂರ ಉಳಿದಿದ್ದಾರೆ.
ಹಿಂದೂ ಭಾವನೆಗಳಿಗೆ ಮನ್ನಣೆಯನ್ನು ಕೊಟ್ಟು ಹಿಂದೂ ಪರ ಸಂಘಟನೆಗಳ ಹೋರಾಟದ ಫಲವಾಗಿ ಇವತ್ತು ಡಿ. 26 ರ ನಡೆದ ಧಾರ್ಮಿಕ ಕಾರ್ಯಕ್ರಮ ಅನ್ಯಮತಿಯರನ್ನು ಭಾಗವಹಿಸಲು ಅವಕಾಶ ಕೊಡದೆ ಹಿಂದೂಗಳ ಶ್ರದ್ದೆಯ ಮೂಲಕ ಯಾವುದೇ ಗೊಂದಲ ಇಲ್ಲದೆ ಯಶಸ್ವಿಯಾಗಿದೆ ಯೆಂದು ಎಂದು ಶ್ರೀ ಕ್ಷೇತ್ರ ಸಂರಕ್ಷಣಾ ಸಮಿತಿಯ ಅಧ್ಯಕ್ಷರಾಗಿರುವ ಚಿದಾನಂದ ಕಂದಡ್ಕ ತಿಳಿಸಿದರು, ಈ ಸಂದರ್ಭದಲ್ಲಿ ಪ್ರಮುಖರಾದ, ರಾಜೇಶ್ ಎನ್.ಎಸ್, ಕಿಶೋರ್ ಶಿರಾಡಿ, ಜಯಪ್ರಕಾಶ್ ಕುಜುಗೋಡು, ಪ್ರಸನ್ನ ದರ್ಬೆ,
ಮೋಹನದಾಸ ಹಿಂದೂ ಜಾಗರಣ, ಪ್ರಮೋದ್ ರೈ ಕಡಬ ವಿಶ್ವಹಿಂದೂ ದಿನೇಶ್ ಸಂಪ್ಯಾಡಿ , ಅಚ್ಚುತ ಗೌಡ, ಮೋನಪ್ಪ ಮಾನಾಡು, ಮನೋಜ್ ಸುಬ್ರಮಣ್ಯ, ಶ್ರೀಕುಮಾರ್ ಬಿಲದ್ವಾರ, ಚಂದ್ರಶೇಖರ ಮರ್ದಾಳ, ಗಿರೀಶ್ ಆಚಾರ್ಯ, ಲಕ್ಷ್ಮೀಶ್ ಇಜನಡ್ಕ, ಶೋಭಾಗಿರಿಧರ್, ವನಜ ವಿ ಭಟ್, ರಾಮಚಂದ್ರ ಸುಬ್ರಹ್ಮಣ್ಯ, ಬುಕ್ಷಿತ್ ನೇರ್ಪಾಡಿ, ವಿನೋದ್ ಕುಲ್ಕುಂದ, ರಾಧಾಕೃಷ್ಣ ಆರವಾರ, ದಿಲೀಪ್ ಉಪ್ಪಳಿಕೆ, ಉಪಸ್ಥಿತರಿದ್ದರು.










































