ಬೆಂಗಳೂರು: ಆನ್‌ಲೈನ್ ಬಯೋಮೆಟ್ರಿಕ್ ನೋಂದಣಿಗೊಳ್ಳದ ಆಯುರ್ವೇದ ಪ್ರಕೃತಿ ಚಿಕಿತ್ಸೆ, ಸಿದ್ದ ಯುನಾನಿ ಮತ್ತು ಯೋಗ ವೈದ್ಯ ವೃತ್ತಿ ನಿರತರಿಗೆ ಮಾ.30ರವರೆಗೆ ಆನ್‌ಲೈನ್ ಬಯೋಮೆಟ್ರಿಕ್‌ಗೆ ನೋಂದಣಿಗೊಳ್ಳಲು ಅವಕಾಶ ಕಲ್ಪಿಸಲಾಗಿದೆ.
ಕರ್ನಾಟಕ ಆಯುರ್ವೇದ ಮತ್ತು ಯುನಾನಿ ವೈದ್ಯ ಮಂಡಳಿ ಬೆಂಗಳೂರು, ಇಲ್ಲಿ 2013 ರಿಂದ ಆನ್‌ಲೈನ್ ಬಯೋಮೆಟ್ರಿಕ್ ಮೂಲಕ ಆಯುರ್ವೇದ ಪ್ರಕೃತಿ ಚಿಕಿತ್ಸೆ, ಸಿದ್ದ ಯುನಾನಿ ಮತ್ತು ಯೋಗ ವೈದ್ಯ ವೃತ್ತಿ ನಿರತರ ನೋಂದಣಿಯನ್ನು ಪ್ರಾರಂಭಿಸಲಾಗಿದೆ.
2013ರ ಹಿಂದಿನ ಅವಧಿಯಲ್ಲಿ ಈ ಮಂಡಳಿಯಲ್ಲಿ ನೋಂದಣಿಗೊಂಡಿರುವ ವೈದ್ಯರುಗಳ ನೋಂದಣಿಯನ್ನು ಆನ್‌ಲೈನ್ ಬಯೋಮೆಟ್ರಿಕ್ ಮೂಲಕ ನೋಂದಾಯಿಸಿಕೊಳ್ಳಲು ಇದುವರೆಗೂ ಅವಕಾಶ ಕಲ್ಪಿಸಲಾಗಿತ್ತು. ಅದರಂತೆ ಆನ್‌ಲೈನ್ ಬಯೋಮೆಟ್ರಿಕ್ ನೋಂದಣಿಗೊಳ್ಳದ ವೈದ್ಯರುಗಳು ಕಡ್ಡಾಯವಾಗಿ 2026ರ ಮಾ.30ರ ಒಳಗಾಗಿ ಆನ್ ಲೈನ್ ಬಯೋಮೆಟ್ರಿಕ್‌ಗೆ ನೋಂದಣಿಗೊಳ್ಳಲು ಅವಕಾಶ ಕಲ್ಪಿಸಲಾಗಿದೆ.ವೈದ್ಯರುಗಳ ಅನುಕೂಲಕ್ಕಾಗಿ ವೈದ್ಯರುಗಳ ನೋಂದಣಿಗೆ ಸಂಬಂಧಪಟ್ಟ ಸಾಫ್ಟ್‍ವೇರ್ ಹಂತ ಹಂತವಾಗಿ ಉನ್ನತ್ತೀಕರಿಸಲಾಗುತ್ತಿದೆ. ಸಾಫ್ಟ್‌ವೇರ್ ಉನ್ನತಿಕರಿಸಿದ ನಂತರ ಬಯೋಮೆಟ್ರಿಕ್ ನೋಂದಣಿಗೆ ಅವಕಾಶವಿರುವುದಿಲ್ಲ. ಬಯೋಮೆಟ್ರಿಕ್ ನೋಂದಣಿಗೊಳ್ಳದ ವೈದ್ಯರು ವೈದ್ಯ ವೃತ್ತಿಯನ್ನು ಮುಂದುವರಿಸಿದ್ದಲ್ಲಿ ಅಂತಹವರ ವಿರುದ್ಧ ಸೂಕ್ತ ಕಾನೂನು ಕ್ರಮ ವಹಿಸುವುದಾಗಿ ಮಂಡಳಿಯ ನೋಂದಣಾಧಿಕಾರಿಗಳು ತಿಳಿಸಿದ್ದಾರೆ.













































