ಬಂಗಾಳಕೊಲ್ಲಿಯಲ್ಲಿ ‘ಅರ್ನಾಬ್’ ಚಂಡಮಾರುತ ಅಬ್ಬರ: 140 ಕಿ.ಮೀ ವೇಗದಲ್ಲಿ ಅಪ್ಪಳಿಸಲಿದೆ ಬಿರುಗಾಳಿ!

Picture of Savistara

Savistara

Bureau Report

​ಬಂಗಾಳಕೊಲ್ಲಿಯಲ್ಲಿ ತೀವ್ರಗೊಂಡಿರುವ ‘ಅರ್ನಾಬ್’ ಚಂಡಮಾರುತವು ದಕ್ಷಿಣ ಭಾರತದ ಕರಾವಳಿ ರಾಜ್ಯಗಳಲ್ಲಿ ತೀವ್ರ ಹವಾಮಾನ ವೈಪರೀತ್ಯ ಸೃಷ್ಟಿಸಿದ್ದು, ಕರಾವಳಿ ತೀರಗಳಲ್ಲಿ ಬಿರುಗಾಳಿ ಸಹಿತ ಭಾರಿ ಮಳೆಯಾಗುವ ಎಚ್ಚರಿಕೆ ನೀಡಲಾಗಿದೆ. ​

ಚಂಡಮಾರುತದ ಭೀತಿ ಹಾಗೂ ಪರಿಣಾಮಗಳು:​

ಅಕ್ಟೋಬರ್ 28 ಕ್ಕೆ ಭೂಮಿಗೆ ಅಪ್ಪಳಿಸುವ ಭೀತಿ: ಆಳ ವಾಯುಭಾರ ಕುಸಿತದಿಂದ ಸೃಷ್ಟಿಯಾದ ‘ಅರ್ನಾಬ್’ ಅಕ್ಟೋಬರ್ 28 ರ ಮುಂಜಾನೆ ಆಂಧ್ರಪ್ರದೇಶ ಹಾಗೂ ಯಾನಂ ಕರಾವಳಿಗೆ ಅಪ್ಪಳಿಸುವ ಸಾಧ್ಯತೆಯಿದ್ದು, ಈ ವೇಳೆ ಗಂಟೆಗೆ 115-125 ಕಿ.ಮೀ ನಿಂದ 140 ಕಿ.ಮೀ ವೇಗದಲ್ಲಿ ರಭಸದ ಗಾಳಿ ಬೀಸಲಿದೆ. ​

ಎಲ್ಲೆಲ್ಲಿ ಭಾರಿ ಮಳೆ?: ಆಂಧ್ರಪ್ರದೇಶ, ಒಡಿಶಾ, ತೆಲಂಗಾಣ, ಛತ್ತೀಸ್‌ಗಢ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ಧೋ ಎನ್ನಲಿದೆ. ಬಿಹಾರ, ಉತ್ತರ ಪ್ರದೇಶದಲ್ಲೂ ಮಳೆ ಅಬ್ಬರಿಸಲಿದ್ದು, ಕರ್ನಾಟಕ, ಕೇರಳ, ತಮಿಳುನಾಡಿನಲ್ಲಿ ಹಗುರದಿಂದ ಸಾಧಾರಣ ಮಳೆಯಾಗಲಿದೆ.​

ಮೀನುಗಾರರಿಗೆ ಕಟ್ಟುನಿಟ್ಟಿನ ಎಚ್ಚರಿಕೆ: ಅಕ್ಟೋಬರ್ 27 ಹಾಗೂ 28 ರಂದು ಆಂಧ್ರ ಮತ್ತು ಒಡಿಶಾ ಕರಾವಳಿ ಭಾಗದ ಮೀನುಗಾರರು ಯಾವುದೇ ಕಾರಣಕ್ಕೂ ಸಮುದ್ರಕ್ಕೆ ಇಳಿಯದಂತೆ ಇಲಾಖೆ ಎಚ್ಚರಿಸಿದೆ. ​ಪ್ರವಾಹ ಹಾಗೂ ಬೆಳೆ ಹಾನಿ ಆತಂಕ:ಒಡಿಶಾ ಮತ್ತು ಆಂಧ್ರದ ಕರಾವಳಿ ಭಾಗದಲ್ಲಿ ಅತ್ಯಂತ ಭಾರಿ ಮಳೆಯಿಂದಾಗಿ ಪ್ರವಾಹ ಪರಿಸ್ಥಿತಿ ಹಾಗೂ ವ್ಯಾಪಕ ಬೆಳೆ ಹಾನಿಯಾಗುವ ಸಾದ್ಯತೆಯಿದೆ.

[t4b-ticker]
error: Content is protected !!