ಡಿಸೆಂಬರ್ 5ರಿಂದ ರಾಹು-ಕೇತು ಗೋಚಾರ: ಮುಂದಿನ 3 ವರ್ಷ 4 ರಾಶಿಗಳ ಅದೃಷ್ಟ ಬದಲಾಯಿಸಲಿದೆ ಈ ಮಹಾಯೋಗ!

Picture of Savistara

Savistara

Bureau Report

​ಜ್ಯೋತಿಷ್ಯ ಶಾಸ್ತ್ರದಲ್ಲಿ ಛಾಯಾ ಗ್ರಹಗಳೆಂದು ಕರೆಯಲ್ಪಡುವ ರಾಹು ಮತ್ತು ಕೇತುಗಳ ಮುಂಬರುವ ವಕ್ರಗತಿಯ ರಾಶಿ ಪರಿವರ್ತನೆಯು ದ್ವಾದಶ ರಾಶಿಗಳ ಮೇಲೆ ಅಗಾಧ ಪ್ರಭಾವ ಬೀರಲಿದೆ. ಪ್ರತಿ 18 ತಿಂಗಳಿಗೊಮ್ಮೆ ರಾಶಿ ಬದಲಿಸುವ ಈ ಗ್ರಹಗಳು ಡಿಸೆಂಬರ್ 5ರಂದು ಸ್ಥಾನಪಲ್ಲಟಗೊಳ್ಳಲಿದ್ದು, ಮುಂದಿನ 3 ವರ್ಷಗಳ ಕಾಲ 4 ರಾಶಿಗಳ ಪಾಲಿಗೆ ಅದೃಷ್ಟದ ರಾಜಯೋಗ ತರಲಿವೆ ಎಂದು ಜ್ಯೋತಿಷಿ ನಾಗರಾಜ ಜೋಶಿ ತಿಳಿಸಿದ್ದಾರೆ.​

ಸ್ಥಾನಪಲ್ಲಟದ ವಿವರ ಹಾಗೂ 4 ರಾಶಿಗಳ ಮೇಲಿನ ಶುಭ ಫಲಗಳು:​

ಗ್ರಹಗಳ ಸಂಚಾರ: ಪ್ರಸ್ತುತ ಕುಂಭದಲ್ಲಿರುವ ರಾಹು ಮಕರ ರಾಶಿಗೂ, ಸಿಂಹದಲ್ಲಿರುವ ಕೇತು ಕರ್ಕಾಟಕ ರಾಶಿಗೂ ವಕ್ರಗತಿಯಲ್ಲಿ ಪ್ರವೇಶಿಸಲಿದ್ದಾರೆ.

​ಮೇಷ ರಾಶಿ: 10ನೇ ಮನೆಗೆ ರಾಹು ಪ್ರವೇಶದಿಂದ ವೃತ್ತಿಜೀವನದಲ್ಲಿ ಅನಿರೀಕ್ಷಿತ ಪ್ರಗತಿ, ಉನ್ನತ ಹುದ್ದೆ ಹಾಗೂ ನೆನೆಗುದಿಗೆ ಬಿದ್ದ ಕೆಲಸಗಳು ಪೂರ್ಣಗೊಳ್ಳಲಿವೆ. ರಾಜಕೀಯ ಕ್ಷೇತ್ರದಲ್ಲಿರುವವರಿಗೆ ಹೊಸ ಅವಕಾಶ ಸಿಗಲಿದೆ.​

ವೃಷಭ ರಾಶಿ: 9ನೇ ಮನೆಯಲ್ಲಿ ರಾಹು ಹಾಗೂ 3ನೇ ಮನೆಯಲ್ಲಿ ಕೇತು ಇರುವುದರಿಂದ ಧನಲಾಭ, ಉದ್ಯೋಗದಲ್ಲಿ ಬಡ್ತಿ ಹಾಗೂ ವಿದೇಶ ಪ್ರಯಾಣದ ಕನಸು ಈಡೇರಲಿದೆ.

​ಸಿಂಹ ರಾಶಿ: 6ನೇ ಮನೆಯ ರಾಹು ಮತ್ತು 12ನೇ ಮನೆಯ ಕೇತುವಿನ ಸಂಚಾರದಿಂದ ಶತ್ರುಬಾಧೆ ಮುಕ್ತಿ, ಕೋರ್ಟ್-ಕಚೇರಿ ಪ್ರಕರಣಗಳಲ್ಲಿ ಜಯ ಹಾಗೂ ವ್ಯಾಪಾರದಲ್ಲಿ ಭಾರಿ ಲಾಭ ಸಿಗಲಿದೆ.​

ಕನ್ಯಾ ರಾಶಿ: 5ನೇ ಮನೆಗೆ ರಾಹು ಹಾಗೂ 11ನೇ ಮನೆಗೆ ಕೇತು ಪ್ರವೇಶದಿಂದ ಆರ್ಥಿಕ ಸ್ಥಿತಿ ಬಲಗೊಳ್ಳಲಿದ್ದು, ಹೊಸ ಉದ್ಯೋಗಾವಕಾಶ ಹಾಗೂ ಕೌಟುಂಬಿಕ ಸಮಸ್ಯೆಗಳು ಶಮನಗೊಳ್ಳಲಿವೆ.

[t4b-ticker]
error: Content is protected !!