ಜಗತ್ತಿನ ಅತಿ ಎತ್ತರದ ಪರ್ವತ ಏರಿದ ಮಂಗಳೂರು ಮೂಲದ 11ರ ಪೋರ

Picture of Savistara

Savistara

Bureau Report

ಕರಾವಳಿಯ ಪ್ರತಿಭೆಗಳು ಜಗತ್ತಿನಾದ್ಯಂತ ತಮ್ಮ ಸಾಧನೆಯ ಪತಾಕೆ ಹಾರಿಸುತ್ತಿರುವುದು ಹೊಸತಲ್ಲ. ಇದೀಗ ಮಂಗಳೂರು ಮೂಲದ, ಪ್ರಸ್ತುತ ದುಬೈನಲ್ಲಿ ನೆಲೆಸಿರುವ II ವರ್ಷದ ಬಾಲಕ ಅಯಾನ್ ಮೆಂಡನ್ ಪರ್ವತಾರೋಹಣ ಕ್ಷೇತ್ರದಲ್ಲಿ ಅಸಾಧಾರಣ ಸಾಧನೆ ಮಾಡುವ ಮೂಲಕ ಅಂತರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದ್ದಾನೆ.

ತನ್ನ ||ನೇ ವಯಸ್ಸಿನಲ್ಲೇ ಆಫ್ರಿಕಾ ಖಂಡದ ಎರಡನೇ ಅತಿ ಎತ್ತರದ ಶಿಖರವಾದ ಮೌಂಟ್ ಕೆನ್ಯಾ’ವನ್ನು ಯಶಸ್ವಿಯಾಗಿ ಏರುವ ಮೂಲಕ ಅಯಾನ್ ಈ ಸಾಧನೆ ಮಾಡಿದ್ದಾನೆ.

ಸಾಧನೆಯ ಹಾದಿ:ಮಂಗಳೂರಿನ ಅತ್ತಾವರ ಮೂಲದ ವಾಣಿ ಮೆಂಡನ್ ಅವರ ಪುತ್ರನಾಗಿರುವ ಅಯಾನ್, ತನ್ನ 6ನೇ ವಯಸ್ಸಿನಲ್ಲೇ ಪರ್ವತಾರೋಹಣದತ್ತ ಆಸಕ್ತಿ ತಳೆದಿದ್ದನು. ಈ ಪುಟ್ಟ ವಯಸ್ಸಿನಲ್ಲೇ ಆತ ಮಾಡಿರುವ ಸಾಧನೆಗಳು ಬೆರಗುಗೊಳಿಸುವಂತಿವ.:

8ನೇ ವಯಸ್ಸಿನಲ್ಲಿ ಆಫ್ರಿಕಾದ ಅತ್ಯಂತ ಎತ್ತರದ ಪರ್ವತ ‘ಕಿಲಿಮಂಜಾರೋ ಏರಿ (ಆಗಸ್ಟ್ 4, 2022), ಈ ಸಾಧನೆ ಮಾಡಿದ ವಿಶ್ವದ ಅತಿ ಕಿರಿಯ ಬಾಲಕ ಎಂಬ ಹೆಗ್ಗಳಿಕೆಗೆ ಪಾತ್ರನಾಗಿದ್ದನು. 9ನೇ ವಯಸ್ಸಿನಲ್ಲಿ ಅಮೆರಿಕದ ಅತಿ ಎತ್ತರದ ಶಿಖರ ಅಕಾಂಕಾಗುವಾ’ವನ್ನು ಅತಿ ಕಿರಿಯ ವಯಸ್ಸಿನಲ್ಲಿ ಏರಿ ದಾಖಲೆ ಬರೆದಿದ್ದನು.

2024ರ ಡಿಸೆಂಬರ್ 30ರಂದು ‘ಮೌಂಟ್ ಕೆನ್ಯಾ’ ಶಿಖರವನ್ನು ಅಧಿರೋಹಿಸುವ ಮೂಲಕ ತನ್ನ ಸಾಧನೆಯ ಪಟ್ಟಿಗೆ ಮತ್ತೊಂದು ಮೈಲಿಗಲ್ಲನ್ನು ಸೇರಿಸಿದ್ದಾನೆ.

ತರಬೇತಿ ಮತ್ತು ಸಿದ್ಧತೆ: ಅಯಾನ್ ಮೆಂಡನ್ ಕೇವಲ ಶಿಖರಗಳನ್ನಷ್ಟೇ ಅಲ್ಲದೆ, ಮೌಂಟ್ ಎವರೆಸ್ಟ್ ಬೇಸ್ ಕ್ಯಾಂಪ್, ಮೌಂಟ್ ಎಲ್ ಬ್ರಸ್‌ ಮತ್ತು ಅನ್ನಪೂರ್ಣ ಬೇಸ್ ಕ್ಯಾಂಪ್‌ಗಳನ್ನು ಕೂಡ ಯಶಸ್ವಿಯಾಗಿ ತಲುಪಿದ್ದಾನೆ. ಸಾಮಾನ್ಯ ಜನರಿಗೆ ಕಲ್ಪಿಸಿಕೊಳ್ಳಲೂ ಅಸಾಧ್ಯವಾದ ಈ ಸಾಹಸದ ಹಿಂದೆ ಆತನ ಕಠಿಣ ಪರಿಶ್ರಮವಿದೆ. ಹೆತ್ತವರ ನಿರಂತರ ಪ್ರೋತ್ಸಾಹ ಹಾಗೂ ನುರಿತ ತಜ್ಞರಿಂದ ಪಡೆಯುತ್ತಿರುವ ಕಠಿಣ ತರಬೇತಿಯೇ ಈತನ ಯಶಸ್ಸಿನ ಗುಟ್ಟು.ಅತಿ ಸಣ್ಣ ವಯಸ್ಸಿನಲ್ಲೇ ಹಿಮಾಲಯದ ಸದೃಶ ಶಿಖರಗಳನ್ನು ಏರುತ್ತಿರುವ ಅಯಾನ್, ಕನ್ನಡಿಗರ ಹೆಮ್ಮೆಯಾಗಿ ಹೊರಹೊಮ್ಮಿದ್ದಾನೆ.

[t4b-ticker]
error: Content is protected !!