ಪರ್ಯಾಯಕ್ಕೆ ಮುಸ್ಲಿಂ ಸೌಹಾರ್ದ ಹೊರೆಕಾಣಿಕೆಗೆ ಸ್ವಾಗತ ಸಮಿತಿ ಅನುಮತಿ ನೀಡಿಲ್ಲ: ಯಶ್‌ಪಾಲ್

Picture of Savistara

Savistara

Bureau Report

ಉಡುಪಿ, ಜ.3: ಶೀರೂರು ಪರ್ಯಾಯ ಮಹೋತ್ಸವಕ್ಕೆ ಜಿಲ್ಲಾ ಮುಸ್ಲಿಂ ಸೌಹಾರ್ದ ಸಮಿತಿಯಿಂದ ಹೊರೆಕಾಣಿಕೆ ನೀಡುವ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿದ್ದು, ಈ ಬಗ್ಗೆಪರ್ಯಾಯ ಸ್ವಾಗತ ಸಮಿತಿ ಯಾವುದೇ ಅನುಮತಿ ನೀಡಿಲ್ಲ ಎಂದು ಶೀರೂರು ಪರ್ಯಾಯ ಸ್ವಾಗತ ಸಮಿತಿಯ ಅಧ್ಯಕ್ಷರೂ ಆದ ಶಾಸಕ ಯಶ್ ಪಾಲ್ ಸುವರ್ಣ ಹೇಳಿದ್ದಾರೆ.

ಪರ್ಯಾಯ ಮಹೋತ್ಸವದ ಹೊರೆಕಾಣಿಕೆ ಸಮಿತಿಗೆ ಮುಸ್ಲಿಂ ಸೌಹಾರ್ದಸಮಿತಿಯವರು ಈವರೆಗೂ ಹೊರೆಕಾಣಿಕೆ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ, ಮಠದವತಿಯಿಂದಲೂ ಮುಸ್ಲಿಂ ಸೌಹಾರ್ದ ಸಮಿತಿಗೆ ಯಾವುದೇ ಹೊರೆಕಾಣಿಕೆ ನೀಡುವಂತೆಮನವಿ ಮಾಡಿರುವುದಿಲ್ಲ. ಹೊರೆಕಾಣಿಕೆ ವಿಷಯದಲ್ಲಿ ಸ್ವಾಗತ ಸಮಿತಿಯ ನಿರ್ಧಾರವೇಅಂತಿಮ. ಮುಸ್ಲಿಂ ಸೌಹಾರ್ದ ಸಮಿತಿ ನೀಡಿರುವ ಹೊರೆಕಾಣಿಕೆ ಸಮರ್ಪಣೆಯಪತ್ರಿಕಾಗೋಷ್ಠಿಗೂ ಪರ್ಯಾಯ ಸ್ವಾಗತ ಸಮಿತಿಗೂ ಯಾವುದೇ ಸಂಬಂಧವಿಲ್ಲ.

ಹೊರೆಕಾಣಿಕೆ ಸಮರ್ಪಣೆ, ನೀರಿನ ಬಾಟಲ್ ವಿತರಣೆ, ಹೊರೆಕಾಣಿಕೆ ಮೆರವಣಿಗೆಯಲ್ಲಿದಫ್ ನಡೆಸುವ ಬಗ್ಗೆ ಸ್ವಾಗತ ಸಮಿತಿಯ ಅನುಮತಿ ಪಡೆಯದೆ ಮುಸ್ಲಿಂ ಸೌಹಾರ್ದ ಸಮಿತಿಏಕಪಕ್ಷೀಯವಾಗಿ ಇಂತಹ ಸೂಕ್ಷ್ಮ ವಿಚಾರಗಳನ್ನು ಪ್ರಸ್ತಾವಿಸಿ ಗೊಂದಲ ಸೃಷ್ಟಿಸಬಾರದುಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

News Updates

ಮೋದಿ ಸರ್ಕಾರದ ‘ರಾಷ್ಟ್ರೀಯ ಹಾಲಿನ ಅಭಿವೃದ್ಧಿ ಯೋಜನೆ’ಯಿಂದ ಶಿಮುಲ್ ವ್ಯಾಪ್ತಿಯ 37,750ಕ್ಕೂ ಹೆಚ್ಚು ರೈತ ಕುಟುಂಬಗಳಿಗೆ ನೇರ ಲಾಭ! ರಾಜ್ಯದ ಹೈನುಗಾರರ ಪರವಾಗಿ ಸಂಸತ್ತಿನಲ್ಲಿ ಸಂಸದ ಬಿ.ವೈ. ರಾಘವೇಂದ್ರ ಪ್ರಸ್ತಾಪ: ರಾಜ್ಯದ ಹಾಲು ಉತ್ಪಾದನಾ ವಲಯ ಉತ್ತೇಜನಕ್ಕೆ ಕೇಂದ್ರದಿಂದ 455 ಕೋಟಿ ರೂ. ಯೋಜನೆ

[t4b-ticker]
error: Content is protected !!