ಸುಳ್ಯ : ಸುಳ್ಯೋತ್ಸವದಲ್ಲಿ ರಂಜಿಸಿದ ಗಾಯಕ ನವೀನ್ ಸಜ್ಜು ನೇತೃತ್ವದ ಸಂಗೀತ ರಸ ಸಂಜೆ ಕಾರ್ಯಕ್ರಮ | ದ.ಕ ಸಂಸದ ಕ್ಯಾ. ಬ್ರಿಜೇಶ್ ಚೌಟ ಭಾಗಿ

Picture of Savistara

Savistara

Bureau Report

ಸುಳ್ಯ ಶ್ರೀ ಚೆನ್ನಕೇಶವ ದೇವರ ಜಾತ್ರೋತ್ಸವದಅಂಗವಾಗಿ ನಡೆದ ಸುಳ್ಯೋತ್ಸವವು ವಿವಿಧ ಕಲಾತಂಡಗಳಿಂದ ಮೊದಲನೆಯ ದಿನದಂದು ಸಾಂಸ್ಕೃತಿಕ ಕಲಾವೈಭವ ಹಾಗೂ ತುಳು ನಾಟಕ ಪ್ರದರ್ಶನಗೊಂಡಿತು.ಜ. 4 ರಂದು ಸಂಜೆ ಖ್ಯಾತ ಸಂಗೀತ ನಿರ್ದೇಶಕ ಗಾಯಕ ನವೀನ್ ಸಜ್ಜು ಅವರ ನೇತೃತ್ವದಲ್ಲಿ ಸಂಗೀತ ರಸ ಸಂಜೆ ಕಾರ್ಯಕ್ರಮವು ಚೆನ್ನಕೇಶವ ದೇವಸ್ಥಾನದ ಮುಂಭಾಗದ ವೇದಿಕೆಯಲ್ಲಿ ಅದ್ದೂರಿಯಾಗಿ ನಡೆಯಿತು.

ಈ ಸಂದರ್ಭದಲ್ಲಿ ಮಂಗಳೂರು ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಶಾಸಕಿ ಭಾಗೀರಥಿ ಮುರುಳ್ಯ, ಆರಿಕೋಡಿ ಕ್ಷೇತ್ರದ ಧರ್ಮದರ್ಶಿ ಹರೀಶ್ ಆರಿಕೋಡಿ, ಪುತ್ತೂರು ಮುಳಿಯ ಕೇಶವ ಭಟ್ ಸನ್ಸ್ ಚಿನ್ನಾಭರಣ ಮಳಿಗೆಯ ಎಂ ಡಿ ಕೇಶವ ಪ್ರಸಾದ್ ಮುಳಿಯ, ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ಅಧ್ಯಕ್ಷ ಡಾ. ಕೆ. ವಿ ಚಿದಾನಂದ ಮುಖ್ಯಅತಿಥಿಗಳಾಗಿಆಗಮಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿಜೀವನದ ಸಾಧನೆಗಾಗಿ ಎಂ.ಬಿ ಪೌಂಡೇಶನ್ ನ ಅಧ್ಯಕ್ಷ ಎಂ.ಬಿ ಸದಾಶಿವ ಅವರಿಗೆ “ಸುಳ್ಯ ರತ್ನ” ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕಲರ್ಸ್ ಕನ್ನಡ ಚಾನೆಲ್ ನಂದಗೋಕುಲ ಧಾರವಾಹಿಯ ನಟಿ ಊರ್ಜಿತ ವಾಲ್ತಾಜೆ ಅವರಿಗೆ “ರೈಸಿಂಗ್ ಸ್ಟಾರ್” ಅವಾರ್ಡ್ ನೀಡಿ ಪುರಸ್ಕರಿಸಲಾಯಿತು. ಸುಳ್ಯೋತ್ಸವದ ಸಾರಥ್ಯವಹಿಸಿದ ಪ್ರಧಾನ ಕಾರ್ಯದರ್ಶಿ ಅಕ್ಷಯ್ ಕೆ.ಸಿ, ಉಪಾಧ್ಯಕ್ಷೆ ಶೋಭಾ ಚಿದಾನಂದ, ಕಾರ್ಯದರ್ಶಿ ಐಶ್ವರ್ಯ ಕೆ.ಸಿ, ಕೋಶಾಧಿಕಾರಿ ಗೌತಮ್ ಗೌಡ ಹಾಗೂ ಸುಳ್ಯೋತ್ಸವದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಆರ್.ಜೆ ತ್ರಿಶೂಲ್ ಕಾರ್ಯಕ್ರಮ ನಿರೂಪಿಸಿದರು. ಸಹಸ್ರಾರು ಸಂಖ್ಯೆಯಲ್ಲಿ ಕಿಕ್ಕಿರಿದು ಪ್ರೇಕ್ಷಕರು ಮೈದಾನದಲ್ಲಿ ಜಮಾಯಿಸಿದ್ದರು.

ಆಕರ್ಷಣೀಯ ವೇದಿಕೆಯಲ್ಲಿ ನಡೆದ ಸಂಗೀತ ಕಾರ್ಯಕ್ರಮ ಜನಮನಸೂರೆಗೊಂಡಿತು. ಅಚ್ಚು ಕಟ್ಟಾದ ವ್ಯವಸ್ಥೆಯೊಂದಿಗೆ ಎರಡು ದಿನಗಳ ಕಾಲ ನಡೆದ ಅದ್ದೂರಿಯ ಕಾರ್ಯಕ್ರಮ ಗಾಯಕ ನವೀನ್ ಸಜ್ಜು ರವರ ಹಾಡಿನ ಮೋಡಿಯಲ್ಲಿ ಸಂಪನ್ನಗೊಂಡಿತು.

News Updates

ನಿಮ್ಮಪ್ಪನಿಂದಲೇ ಆರ್‌ಎಸ್‌ಎಸ್‌ಗೆ ಏನು ಮಾಡೋಕೆ ಆಗಿಲ್ಲ, ನಿಮ್ಮಿಂದ ಆಗುತ್ತಾ? ಅಧಿಕಾರದಲ್ಲಿ ಮೆರೆದವರಿಗೆ ಬಂಗಾಳದ ಜನ್ನು ಅಟ್ಟಾಡಿಸಿ ಹೊಡೆಯುತ್ತಿದ್ದಾರೆ, ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಸಿಟಿ ರವಿ ವಾಗ್ದಾಳಿ

[t4b-ticker]
error: Content is protected !!