ಇಪಿಎಫ್‌ಒ ವೇತನ ಮಿತಿ ಪರಿಷ್ಕರಣೆಗೆ ಸೂಚನೆ

Picture of Savistara

Savistara

Bureau Report

ನವದೆಹಲಿ: ನೌಕರರ ಭವಿಷ್ಯ ನಿಧಿ ಯೋಜನೆಯ ವೇತನಮಿತಿಯನ್ನು ಕಳೆದ 11 ವರ್ಷಗಳಿಂದ ಪರಿಷ್ಕರಿಸಿಲ್ಲ. ಮುಂದಿನ ನಾಲ್ಕು ತಿಂಗಳೊಳಗೆ ಈ ಕುರಿತು ನಿರ್ಧಾರ ತೆಗೆದುಕೊಳ್ಳುವಂತೆ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ. ಪ್ರಸ್ತುತ ತಿಂಗಳಿಗೆ 15 ಸಾವಿರಕ್ಕಿಂತ (ಮೂಲ ವೇತನ + ತುಟ್ಟಿ ಭತ್ಯೆ) ಹೆಚ್ಚಿನ ವೇತನ ಹೊಂದಿರುವವರು ಇಪಿಎಫ್‌ಒ ವ್ಯಾಪ್ತಿಯಿಂದ ಹೊರಗಿಡಲಾಗುತ್ತಿದೆ ಎಂದು ನವೀನ್ ಪ್ರಕಾಶ್ ನೌಟಿಯಾಲ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್, ಈ ಸೂಚನೆ ನೀಡಿದೆ. ಹಲವು ದಶಕಗಳಿಂದಲೂ ವೇತನ ಮಿತಿಯನ್ನು ಅಸಮಂಜಸವಾಗಿ ಪರಿಷ್ಕರಿಸಲಾಗಿದೆ. ಕೆಲವೊಮ್ಮೆ 13-14 ವರ್ಷಗಳ ನಂತರ ಹಣದುಬ್ಬರ, ಕನಿಷ್ಠ ವೇತನ, ತಲಾ ಆದಾಯ ಮತ್ತು ಗ್ರಾಹಕ ಬೆಲೆ ಸೂಚ್ಯಂಕಗಳಿಗೆ ಸಂಬಂಧವಿಲ್ಲದಂತೆ ಪರಿಷ್ಕರಣೆ ಮಾಡಲಾಗಿದೆ. ಇದು ಅಸಂಘಟಿತ ವಲಯದ ಉದ್ಯೋಗಿಗಳಿಗೆ ಸಾಮಾಜಿಕ ಭದ್ರತೆ ಉದ್ದೇಶಕ್ಕೆ ವಿರುದ್ಧವಾಗಿದೆ. ಉದ್ಯೋಗಿಗಳು ಇಪಿಎಫ್‌ಒದಿಂದ ಹೊರಗಿದ್ದಾರೆ ಎಂದು ಅರ್ಜಿಯಲ್ಲಿ ತಿಳಿಸಲಾಗಿತ್ತು.

News Updates

ಮೋದಿ ಸರ್ಕಾರದ ‘ರಾಷ್ಟ್ರೀಯ ಹಾಲಿನ ಅಭಿವೃದ್ಧಿ ಯೋಜನೆ’ಯಿಂದ ಶಿಮುಲ್ ವ್ಯಾಪ್ತಿಯ 37,750ಕ್ಕೂ ಹೆಚ್ಚು ರೈತ ಕುಟುಂಬಗಳಿಗೆ ನೇರ ಲಾಭ! ರಾಜ್ಯದ ಹೈನುಗಾರರ ಪರವಾಗಿ ಸಂಸತ್ತಿನಲ್ಲಿ ಸಂಸದ ಬಿ.ವೈ. ರಾಘವೇಂದ್ರ ಪ್ರಸ್ತಾಪ: ರಾಜ್ಯದ ಹಾಲು ಉತ್ಪಾದನಾ ವಲಯ ಉತ್ತೇಜನಕ್ಕೆ ಕೇಂದ್ರದಿಂದ 455 ಕೋಟಿ ರೂ. ಯೋಜನೆ

[t4b-ticker]
error: Content is protected !!