ಕೃಷಿಯಲ್ಲಿ ಖುಷಿಯನ್ನು ಕಂಡ ಪ್ರಗತಿಪರ ಕೃಷಿಕ ಡಿ.ಯನ್ ಚಂದ್ರಶೇಖರ್ |ಜಿಲ್ಲಾ ಕೃಷಿಮೇಳದಲ್ಲಿ ಅತ್ಯುತ್ತಮ ಕೃಷಿ ಸಾಧಕ ಪ್ರಶಸ್ತಿಗೆ ಆಯ್ಕೆ

Picture of Savistara

Savistara

Bureau Report

ಕೃಷಿಯಿಂದ ವಿಮುಖರಾಗುವ ಈ ಕಾಲಘಟ್ಟದಲ್ಲಿ ತನ್ನ ನೆಲದಲ್ಲಿ ನೆಲೆ ನಿಂತು ತನ್ನ ತೋಟ, ಭೂಮಿಯನ್ನು ಹಸಿರಾಗಿಸಿದವರು ಚಂದ್ರಶೇಖರ್ ಇವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಅಜ್ಜನಗದ್ದೆ, ಪ್ರೌಢಶಿಕ್ಷಣವನ್ನು ಕುಕ್ಕುಜಡ್ಕದಲ್ಲಿ ಮುಗಿಸಿ,

ಪದವಿ ಪೂರ್ವ ಶಿಕ್ಷಣವನ್ನು ಸುಳ್ಯ ಜೂನಿಯ‌ರ್ ಕಾಲೇಜಿನಲ್ಲಿ ಮುಗಿಸಿ ನಂತರ ಕೃಷಿಯತ್ತ ಮುಖ ಮಾಡಿದರು ಅಡಿಕೆ, ತೆಂಗು, ಕರಿಮೆಣಸು, ಬಾಳೆ, ರಬ್ಬ‌ರ್ ಬೆಳೆದು ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡವರು ನೂರು ಲೀಟರ್‌ ಹಾಲನ್ನು ಹಾಕುವುದರ ಮೂಲಕ ಪ್ರಶಸ್ತಿ ಪಡೆದುಕೊಂಡಿದ್ದಾರೆ.

ತಮ್ಮ ಜಮೀನಿನಲ್ಲಿ ಸೌತೆ, ಬೆಂಡೆಕಾಯಿ, ಬಸಳೆ, ಮೆಣಸುಗಳನ್ನು ಬೆಳೆಸಿಕೊಂಡು ದೂರದ ಮಂಗಳೂರಿಗೆ ಸರಬರಾಜು ಮಾಡಿ ಆದಾಯವನ್ನು ಗಳಿಸಿಕೊಂಡಿರುತ್ತಾರೆ ಇವರ ಈ ಎಲ್ಲಾ ಕಾರ್ಯದಲ್ಲಿ ತನ್ನ ಪತ್ನಿ ತನುಜ ರವರು ನಿರಂತರವಾಗಿ ಕೈಜೋಡಿಸಿಕೊಂಡು ಬಂದಿದ್ದಾರೆ ಇವರ ಕೃಷಿ ಸಾಧನೆ ಗುರುತಿಸಿ ಈ ಬಾರಿ ಕೃಷಿಕ ಸಮಾಜ ವತಿಯಿಂದ ಪುತ್ತೂರಿನಲ್ಲಿ ನಡೆಯಲಿರುವ ಜಿಲ್ಲಾ ಕೃಷಿ ಮೇಳ ದಲ್ಲಿ ಸುಳ್ಯ ತಾಲೂಕಿನಿಂದ ಅತ್ಯುತ್ತಮ ಕೃಷಿ ಸಾಧಕ ಪ್ರಶಸ್ತಿಗೆ ಚಂದ್ರಶೇಖರ್ ರವರಿಗೆ ಅರ್ಹವಾಗಿ ದೊರಕಿದ್ದು ನೂರಾರು ಕೃಷಿಕರಿಗೆ ಪ್ರೇರಣೆಯಾಗಿದ್ದಾರೆ

[t4b-ticker]
error: Content is protected !!