ಮಲ್ಪೆ ಮಹಾಲಕ್ಷ್ಮೀ ಕೋ-ಆಪರೇಟಿವ್ ಬ್ಯಾಂಕ್‌ನಲ್ಲಿ ರೂ 20,000/- ಸಾಲ ನೀಡಿ ರೂ. 2.00 ಲಕ್ಷ ಪಡೆದಿದ್ದು, ಅದಕ್ಕೆ ಬಡ್ಡಿ ಸಹಿತ ರೂ. 3.50 ಲಕ್ಷದವರೆಗೆ ಬ್ಯಾಂಕ್ ಗೆ ಮರು ಪಾವತಿಸಲು ಬ್ಯಾಂಕ್ ಸಿಬ್ಬಂದಿಗಳು ಕಿರುಕುಳ ನೀಡುತ್ತಿದ್ದಾರೆ.

ಬ್ಯಾಂಕ್ ನಲ್ಲಿ ನಮ್ಮ ಹೆಸರಿನಲ್ಲಿ ಇರುವ ಸಾಲದ ದಾಖಲೆಯಲ್ಲಿನ ನಮ್ಮ ಸಹಿಯ ಸತ್ಯಾಸತ್ಯತೆ ತಿಳಿಯಲು ನಿಯಮ 64 ರಡಿ ಫಾರೆನ್ಸಿಕ್ ಪರೀಕ್ಷೆ (ವಿಧಿ ವಿಜ್ಞಾನ) ನಡೆಸಿ ನಮಗೆ ನ್ಯಾಯ ಒದಗಿಸುವಂತೆ ಒತ್ತಾಯಿಸಿ ಬ್ಯಾಂಕ್ ನಿಂದ ಅನ್ಯಾಯಕ್ಕೊಳಗಾದ ಗ್ರಾಹಕರು ಇಂದು ದಿನಾಂಕ 05-01-2026 ರಂದು ಉಡುಪಿ ಜಿಲ್ಲಾಧಿಕಾರಿಯವರ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಉಡುಪಿಯ ನಿಕಟ ಪೂರ್ವ ಶಾಸಕರಾದ ಕೆ. ರಘುಪತಿ ಭಟ್ ಅವರು ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಅನ್ಯಾಯಕ್ಕೊಳಗಾದ ಸಂತ್ರಸ್ತರಲ್ಲಿ ಮಾತುಕತೆ ನಡೆಸಿ ಧೈರ್ಯ ತುಂಬಿದರು.













































