ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಭಕ್ತ ಸಾಗರ| 1,400 ಆಶ್ಲೇಷ ಬಲಿ ಸೇವೆ

Picture of Savistara

Savistara

Bureau Report

ಸುಬ್ರಹ್ಮಣ್ಯ ಜನವರಿ 6 : ರಾಜ್ಯದ ಪ್ರಸಿದ್ಧ ಪುಣ್ಯಕ್ಷೇತ್ರ ನಾಗರಾಧನೆಯ ಪುಣ್ಯತಾಣ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಆಶ್ಲೇಷ ನಕ್ಷತ್ರವಾದ ಜ.06ರಂದು ದಾಖಲೆಯ 1,400 ಆಶ್ಲೇಷ ಬಲಿ ಸೇವೆಗಳು ನಡೆದವು.ಸುಬ್ರಹ್ಮಣ್ಯನಿಗೆ ಮಂಗಳವಾರ ವಿಶೇಷ ದಿನವೂ ಆಗಿದ್ದರಿಂದ ಆಶ್ಲೇಷ ನಕ್ಷತ್ರವು ಈ ದಿನವೇ ಬಂದಿದ್ದರಿಂದ ಅಧಿಕ ಸಂಖ್ಯೆಯಲ್ಲಿ ವಿವಿಧ ಭಾಗಗಳಿಂದ ಭಕ್ತರು ಸೇವೆಗಾಗಿ ಶ್ರೀ ಕ್ಷೇತ್ರಕ್ಕೆ ನಿನ್ನೆಯಿಂದಲೇ ಆಗಮಿಸುತ್ತಿದ್ದರು. ಬೆಳಗ್ಗೆ 6:30ಕ್ಕೆ ಆರಂಭವಾದ ಆಶ್ಲೇಷ ಬಲಿ ಸೇವೆ ನಿರಂತರವಾಗಿ ನಾಲ್ಕು ಐದು ಬ್ಯಾಚ್ ಗಳಲ್ಲಿ 11 ಗಂಟೆಯವರೆಗೆ ನಡೆಯಿತು. ಹಾಗೆಯೇ ಸಂಜೆ 5:00 ಗಂಟೆಯ ನಂತರ ಮತ್ತೊಂದು ಬ್ಯಾಚ್ ನಲ್ಲಿ ಆಶ್ಲೇಷ ಬಲಿ ಸೇವೆ ನಡೆಯಿತು.ಕುಕ್ಕೆ ಕ್ಷೇತ್ರದ ಒಳಾಂಗಣ, ಹೊರಾಂಗಣ, ರಥಬೀದಿ ಹಾಗೂ ಎಲ್ಲೆಡೆಗಳಲ್ಲಿ ಭಕ್ತರು ತುಂಬಿದ್ದರು. ವಾಹನ ಪಾರ್ಕಿಂಗ್ ಸ್ಥಳಗಳೆಲ್ಲವೂ ವಾಹನಗಳಿಂದ ಪೂರ್ತಿಯಾಗಿತ್ತು.

ಶ್ರೀ ದೇವಳದ ಅಧಿಕಾರಿಗಳು, ಸಿಬ್ಬಂದಿ ವರ್ಗದವರು, ಭದ್ರತಾ ಸಿಬ್ಬಂದಿಗಳು, ಹೋಂ-ಗಾರ್ಡ್ಸ್ ಹಾಗೂ ಪೊಲೀಸ್‌ ಇಲಾಖೆ ಕ್ಷೇತ್ರಕ್ಕೆ ಬಂದಿರುವ ಭಕ್ತರಿಗೆ ಸೂಕ್ತ ವ್ಯವಸ್ಥೆಯನ್ನು ಕಲ್ಪಿಸುವಲ್ಲಿ ಶ್ರಮಿಸುತ್ತಿದ್ದರು.

News Updates

ಮೋದಿ ಸರ್ಕಾರದ ‘ರಾಷ್ಟ್ರೀಯ ಹಾಲಿನ ಅಭಿವೃದ್ಧಿ ಯೋಜನೆ’ಯಿಂದ ಶಿಮುಲ್ ವ್ಯಾಪ್ತಿಯ 37,750ಕ್ಕೂ ಹೆಚ್ಚು ರೈತ ಕುಟುಂಬಗಳಿಗೆ ನೇರ ಲಾಭ! ರಾಜ್ಯದ ಹೈನುಗಾರರ ಪರವಾಗಿ ಸಂಸತ್ತಿನಲ್ಲಿ ಸಂಸದ ಬಿ.ವೈ. ರಾಘವೇಂದ್ರ ಪ್ರಸ್ತಾಪ: ರಾಜ್ಯದ ಹಾಲು ಉತ್ಪಾದನಾ ವಲಯ ಉತ್ತೇಜನಕ್ಕೆ ಕೇಂದ್ರದಿಂದ 455 ಕೋಟಿ ರೂ. ಯೋಜನೆ

[t4b-ticker]
error: Content is protected !!