ಬೆಂಗಳೂರಿಗರೇ ಎಚ್ಚರ! ರಸ್ತೆಬದಿ ಪಾರ್ಕಿಂಗ್ ಇನ್ಮುಂದೆ ಫ್ರೀ ಅಲ್ಲ: GBAನಿಂದ ‘ಪೇ ಆಂಡ್ ಪಾರ್ಕ್‌’ ಶಾಕ್!

Picture of Savistara

Savistara

Bureau Report

ನಗರದ ರಸ್ತೆಬದಿಗಳಲ್ಲಿ ಎಲ್ಲೆಂದರಲ್ಲಿ ವಾಹನಗಳನ್ನು ನಿಲ್ಲಿಸಿ ಟ್ರಾಫಿಕ್ ಕಿರಿಕಿರಿ ಉಂಟುಮಾಡುವವರಿಗೆ ಜಿಬಿಎ ಬಿಸಿ ಮುಟ್ಟಿಸಿದೆ. ಬೆಂಗಳೂರಿನ ಪ್ರಮುಖ ರಸ್ತೆಗಳಲ್ಲಿ ಇನ್ಮುಂದೆ ವಾಹನ ನಿಲ್ಲಿಸಲು ಹಣ ಪಾವತಿಸುವುದನ್ನು ಕಡ್ಡಾಯಗೊಳಿಸಿ ‘ಪೇ ಆಂಡ್ ಪಾರ್ಕಿಂಗ್ ನಿಯಮವನ್ನು ಜಾರಿಗೆ ತರಲು ಸಜ್ಜಾಗಿದೆ.ಈ ಹೊಸ ವ್ಯವಸ್ಥೆಯ ನಿರ್ವಹಣೆಗಾಗಿ ನಾಳೆ ಅಂದರೆ ಶನಿವಾರ (ಜನವರಿ 10) ಟೆಂಡ‌ರ್ ಕರೆಯಲಾಗಿದೆ ಎಂದು ಜಿಬಿಎ ಕಮೀಷನ‌ರ್ ಮಾಹಿತಿ ನೀಡಿದ್ದಾರೆ. ಈಗಾಗಲೇ ಬೆಂಗಳೂರು ಸೆಂಟ್ರಲ್ ಪಾಲಿಕೆ ವ್ಯಾಪ್ತಿಯಲ್ಲಿ ಟೆಂಡರ್ ಪ್ರಕ್ರಿಯೆಗಳು ಪೂರ್ಣಗೊಂಡಿದ್ದು, ಶೀಘ್ರದಲ್ಲೇ ಈ ನಿಯಮ ಕಾರ್ಯರೂಪಕ್ಕೆ ಬರಲಿದೆ.

ಯಾವ ರಸ್ತೆಗಳಲ್ಲಿ ಅನ್ವಯ?

ಕಮರ್ಷಿಯಲ್ ಸ್ಟ್ರೀಟ್

ಡಿಕೆನ್ಸನ್ ರೋಡ್

ಮಿಲ್ಲರ್ಸ್ ರೋಡ್ ಸೇರಿದಂತೆ ಹಲವು ಪ್ರಮುಖ ರಸ್ತೆಗಳಲ್ಲಿ ಈಗಾಗಲೇ ಪಾರ್ಕಿಂಗ್ ಸ್ಥಳಗಳನ್ನು ಗುರುತಿಸಲಾಗಿದೆ.ವಾಹನ ಸವಾರರು ಗಂಟೆಯ ಆಧಾರದ ಮೇಲೆ ಹಣ ಪಾವತಿಸಬೇಕಾಗುತ್ತದೆ:ದ್ವಿಚಕ್ರ ವಾಹನಗಳು: ಗಂಟೆಗೆ 15 ರೂ.ನಾಲ್ಕು ಚಕ್ರದ ವಾಹನಗಳು: ಗಂಟೆಗೆ 30 ರೂ.ನಿಯಮಿತವಾಗಿ ವಾಹನ ನಿಲ್ಲಿಸುವವರಿಗಾಗಿ ಮಾಸಿಕ ಪಾಸ್ ಸೌಲಭ್ಯವನ್ನೂ ಸಹ ಜಿಬಿಎ ನೀಡುತ್ತಿದೆ. ಈ ಕ್ರಮದಿಂದ ನಗರದ ರಸ್ತೆಗಳಲ್ಲಿ ಅನಗತ್ಯ ಪಾರ್ಕಿಂಗ್ ತಪ್ಪುವುದಲ್ಲದೆ, ಸುಗಮ ಸಂಚಾರಕ್ಕೆ ಅನುಕೂಲವಾಗಲಿದೆ ಎಂದು ಅಧಿಕಾರಿಗಳು ಆಶಿಸಿದ್ದಾರೆ.

News Updates

ಮೋದಿ ಸರ್ಕಾರದ ‘ರಾಷ್ಟ್ರೀಯ ಹಾಲಿನ ಅಭಿವೃದ್ಧಿ ಯೋಜನೆ’ಯಿಂದ ಶಿಮುಲ್ ವ್ಯಾಪ್ತಿಯ 37,750ಕ್ಕೂ ಹೆಚ್ಚು ರೈತ ಕುಟುಂಬಗಳಿಗೆ ನೇರ ಲಾಭ! ರಾಜ್ಯದ ಹೈನುಗಾರರ ಪರವಾಗಿ ಸಂಸತ್ತಿನಲ್ಲಿ ಸಂಸದ ಬಿ.ವೈ. ರಾಘವೇಂದ್ರ ಪ್ರಸ್ತಾಪ: ರಾಜ್ಯದ ಹಾಲು ಉತ್ಪಾದನಾ ವಲಯ ಉತ್ತೇಜನಕ್ಕೆ ಕೇಂದ್ರದಿಂದ 455 ಕೋಟಿ ರೂ. ಯೋಜನೆ

[t4b-ticker]
error: Content is protected !!