ನಮಗೆ ಭಾರತಕ್ಕಿಂತ ಅತ್ಯಗತ್ಯವಾದ ದೇಶ ಇನ್ನೊಂದಿಲ್ಲ: ಸೆರ್ಗಿಯೊ ಗೋರ್ ಬಹುಪರಾಕ್ !

Picture of Savistara

Savistara

Bureau Report

ನವದೆಹಲಿ/ವಾಷಿಂಗ್ಟನ್: ಭಾರತದಂತೆ ಅಮೆರಿಕಕ್ಕೆ ಬೇರೆಯಾವುದೇ ರಾಷ್ಟ್ರಗಳು ಅತ್ಯಗತ್ಯವಲ್ಲ ಎಂದು ಅಮೆರಿಕದ ನಿಯೋಜಿತ ರಾಯಭಾರಿ ಸೆರ್ಗಿಯೋ ಗೋರ್ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.ವಾಷಿಂಗ್ಟನ್ ಮತ್ತು ನವದೆಹಲಿ ಮಂಗಳವಾರ (ಜನವರಿ 13)ದಿಂದ ತಮ್ಮ ಮುಂದಿನ ಸುತ್ತಿನ ವ್ಯಾಪಾರ ಒಪ್ಪಂದ ಮಾತುಕತೆಗಳನ್ನು ಪುನರಾರಂಭಿಸಲಿವೆ ಎಂದು ಅವರು ಈ ಸಂದರ್ಭದಲ್ಲಿ ಘೋಷಿಸಿದರು. ಅಮೆರಿಕ ರಾಯಭಾರ ಕಚೇರಿಯಲ್ಲಿ ದಕ್ಷಿಣ ಮತ್ತು ಮಧ್ಯ ಏಷ್ಯಾದ ವಿಶೇಷ ರಾಯಭಾರಿಯೂ ಆಗಿರುವ ಗೋರ್, 2027ರ ವೇಳೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತಕ್ಕೆ ಭೇಟಿ ನೀಡಬಹುದು ಎಂದರು.ದೆಹಲಿಯ ಅಮೆರಿಕ ರಾಯಭಾರಿ ಕಚೇರಿಯಲ್ಲಿ ಮಾತನಾಡಿದ ಗೋರ್, ಪ್ರಧಾನಿ ನರೇಂದ್ರ ಮೋದಿ ಅವರ ಜತೆಗಿನ ಟ್ರಂಪ್ ಅವರ ಸ್ನೇಹ ನೈಜವಾದದ್ದು, ಅಲ್ಲದೇ ನಿಜವಾದ ಸ್ನೇಹಿತರು ತಮ್ಮ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಳ್ಳಲಿದ್ದಾರೆ ಎಂದು ಗೋ‌ರ್ ಈ ಸಂಧ್ರದಲ್ಲಿ ವಿಶ್ವಾಸವ್ಯಕ್ತಪಡಿಸಿದ್ದಾರೆ.ಭವಿಷ್ಯದಲ್ಲಿ ಉಭಯ ದೇಶಗಳ ನಡುವೆ ಬಹಳಷ್ಟು ಅವಕಾಶಗಳು ಲಭ್ಯವಾಗಲಿದೆ ಎಂದು ರಾಯಭಾರಿ ಗೋರ್ ತಿಳಿಸಿದ್ದಾರೆ. ಅಮೆರಿಕ ಮತ್ತು ಭಾರತದ ನಡುವಿನ ಸ್ನೇಹ ಕೇವಲ ನಮ್ಮ ಆಸಕ್ತಿ ವಿಷಯಗಳನ್ನು ಮಾತ್ರ ಹಂಚಿಕೊಳ್ಳುವುದಿಲ್ಲ, ಬದಲಾಗಿ ನಮ್ಮ ಸಂಬಂಧ ಉನ್ನತ ಮಟ್ಟದ್ದಾಗಿದೆ. ಆಪ್ತ ಗೆಳೆಯರು ಕೆಲವು ವಿಚಾರಗಳಲ್ಲಿ ಭಿನ್ನಾಭಿಪ್ರಾಯ ಹೊಂದಿದ್ದರೂ ಕೂಡಾ ಯಾವಾಗಲೂ ತಮ್ಮ ನಡುವಿನ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಳ್ಳಲಿದ್ದಾರೆ ಎಂದು ಗೋರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಭಾರತ- ಅಮೆರಿಕ ರಿಯಲ್ ಫ್ರೆಂಡ್ಸ್:

ಭಾರತ ಜಗತ್ತಿನ ಬೃಹತ್ ದೇಶಗಳಲ್ಲಿ ಒಂದಾಗಿದೆ. ಹಾಗಾಗಿ ನಾವು ಜಗತ್ತಿನ ಇತರ ದೇಶಗಳಂತೆ ಭಾರತದ ಬಗ್ಗೆ ದಿಢೀರ್ ನಿಲುವು ತೆಗೆದುಕೊಳ್ಳುವುದು ಸುಲಭವಲ್ಲ. ಅದಕ್ಕಾಗಿ ನಾವು ಭಾರತದೊಂದಿಗೆ ವ್ಯಾಪಾರ-ವಹಿವಾಟು ಮಾತುಕತೆ ಬಗ್ಗೆ ದೃಢನಿಶ್ಚಯ ಹೊಂದಿರುವುದಾಗಿ ಗೋರ್ ತಿಳಿಸಿದ್ದಾರೆ.ನವದೆಹಲಿ ಮತ್ತು ವಾಷಿಂಗ್ಟನ್ ನಡುವಿನ ಸಂಬಂಧಕ್ಕೆ ವ್ಯಾಪಾರವು ಬಹಳ ಮುಖ್ಯವಾದರೂ, ಭದ್ರತೆ, ಭಯೋತ್ಪಾದನೆ ನಿಗ್ರಹ, ಇಂಧನ, ತಂತ್ರಜ್ಞಾನ, ಶಿಕ್ಷಣ ಮತ್ತು ಆರೋಗ್ಯದಂತಹ ಇತರ ಪ್ರಮುಖ ಕ್ಷೇತ್ರಗಳಲ್ಲಿ ಎರಡೂ ರಾಷ್ಟ್ರಗಳು ನಿಕಟವಾಗಿ ಕೆಲಸ ಮಾಡುವುದನ್ನು ಮುಂದುವರಿಸುತ್ತವೆ ಎಂದು ಗೋರ್ ಹೇಳಿದರು.”ನಾನು ಅಧ್ಯಕ್ಷ ಟ್ರಂಪ್ ಅವರೊಂದಿಗೆ ಪ್ರಪಂಚದಾದ್ಯಂತ ಪ್ರಯಾಣಿಸಿದ್ದೇನೆ ಮತ್ತು ಪ್ರಧಾನಿ ಮೋದಿ ಅವರೊಂದಿಗಿನ ಅವರ ಸ್ನೇಹ ನೈಜವಾದದ್ದು ಎಂದು ನಾನು ದೃಢೀಕರಿಸಬಲ್ಲೆ” ಎಂದು ಗೋ‌ರ್ ಪುನರುಚ್ಚರಿಸಿದ್ದಾರೆ.

[t4b-ticker]
error: Content is protected !!