ಫಿಲಂ ಚೇಂಬರ್ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್-ಬಿಜೆಪಿ ಪೈಪೋಟಿ: ಜಯಮಾಲಾ ವಿರುದ್ಧ ಅಖಾಡಕ್ಕಿಳಿದ ಶಾಸಕ ಮುನಿರತ್ನ!

Picture of Savistara

Savistara

Bureau Report

ಬೆಂಗಳೂರು: ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ (Karnataka Film Chamber of Commerce) ಚುನಾವಣೆಗೆ (Election) ದಿನಾಂಕ ನಿಗದಿಯಾಗಿದೆ ಅನ್ನೋ ಮಾಹಿತಿ ಈಗಾಗಲೇ ಹೊರಬಿದ್ದಿತ್ತು . ಪ್ರತಿವರ್ಷದಂತೆ ಈ ವರ್ಷದ ಚುನಾವಣೆಗೆ ದಿನಾಂಕ ನಿಗದಿ ಮಾಡಲಾಗಿದ್ದು ಚುನಾವಣೆಯನ್ನ 2026 ರ ಜನವರಿ 31 ಕ್ಕೆ ನಡೆಸಲು ತೀರ್ಮಾನ ಮಾಡಲಾಗಿದೆ. ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ, ವಿತರಕ ವಲಯ, ಪ್ರದರ್ಶಕರ ವಲಯ, ಕಾರ್ಯದರ್ಶಿ ಹಾಗೂ ಸದಸ್ಯ ಸ್ಥಾನಕ್ಕೆ ಚುನಾವಣೆ ನಡೆಯಲಿದೆ.

ಅಧ್ಯಕ್ಷ ಸ್ಥಾನಕ್ಕೆ ಮುನಿರತ್ನಹೀಗಿರುವಾಗ ಇದೀಗ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಎಲೆಕ್ಷನ್ ರಂಗು ಜೋರಾಗಿದೆ. ಇನ್ನೂ ಎಲೆಕ್ಷನ್ ಅಖಾಡಕ್ಕೆ ರೀ ಎಂಟ್ರಿ ಕೊಡಲು ಹಿರಿಯ ನಟಿ ಜಯಮಾಲ ಹಾಗೂ ಭಾಮ ಹರೀಶ್ ಸಜ್ಜಾಗಿರುವ ವಿಷ್ಯ ಎಲ್ಲರಿಗೂ ತಿಳಿದಿದೆ. ಇದೀಗ ಇವರಿಗೆ ಪೈಪೋಟಿಯಾಗಿ ಫಿಲ್ಮ್ ಚೇಂಬರ್ ಅಧ್ಯಕ್ಷ ಸ್ಥಾನಕ್ಕೆ ಮುನಿರತ್ನ ಸ್ಪರ್ಧಿಸಲಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.ಜೋರಾದ ಪೈಪೋಟಿಹೌದು ಫಿಲ್ಮ್ ಚೇಂಬರ್ ಚುನಾವಣಾ ಅಖಾಡಕ್ಕೆ ಶಾಸಕ ಮುನಿರತ್ನಅವರು ಇಳಿದಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ. ಈಗಾಗಲೇ ಫಿಲ್ಮ್‌ ಚೇಂಬರ್ ಅಧ್ಯಕ್ಷ ಸ್ಥಾನಕ್ಕೆ ಭಾಮ ಹರೀಶ್,ನಟಿ ಜಯಮಾಲ ರೇಸ್ ನಲಿದ್ದರು ಇದೀಗ ಭಾಮ ಹರೀಶ್ ,ಜಯಮಾಲ ಎದುರು ಸ್ಪರ್ಧಿಸಲು ಮುನಿರತ್ನರೆಡಿಯಾಗಿದ್ದಾರೆ. ಎಂಬ ಮಾಹಿತಿ ಕೇಳಿಬರುತ್ತಿದೆ.

ಕಾಂಗ್ರೆಸ್, ಬಿಜೆಪಿ ಫೈಟ್ಜೊತೆಗೆ ಈ ಬಾರಿ ಚೇಂಬರ್ ಚುನಾವಣೆಯಲ್ಲೂ ಕಾಂಗ್ರೆಸ್, ಬಿಜೆಪಿ ಫೈಟ್ ನಡೆಯಲಿದೆ ಎನ್ನಬಹುದು. ಬಿಜೆಪಿ ಶಾಸಕ ಮುನಿರತ್ನ, ಕಾಂಗ್ರೆಸ್ ನಾಯಕಿ ಜಯಮಾಲ ನಡುವೆ ಪೈಪೋಟಿ ಎದುರಾಗಲಿದೆ ಎನ್ನಬಹುದು. ಜೊತೆಗೆ ಮಾಜಿ ಅಧ್ಯಕ್ಷ ಭಾಮ ಹರೀಶ್ ಗೆ ಈಗಾಗಲೇ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ನೈತಿಕ ಬೆಂಬಲ ವ್ಯಕ್ತಪಡಿಸಿದ್ದಾರೆ.

ಮುನಿರತ್ನಗೆ ಸಿದ್ದು, ಡಿಕೆ ಚೆಕ್ ಮೆಟ್ ಕೊಡ್ತಾರಾ?ಹಾಗೆಯೇ ಈಗಾಗಲೇ ಫಿಲ್ಮ್ ಚೇಂಬರನಲ್ಲಿ ಡಿಸಿಎಂ ಡಿಕೆ ಸದಸ್ಯರಾಗಿದ್ದು, ಹೀಗಾಗಿ ಈ ಬಾರಿ ಪೈಪೋಟಿ ಜೋರಾಗಿದ್ದು,ಫಿಲ್ಮ್ ಚೇಂಬರ್ ಚುನಾವಣೆಯಲ್ಲಿ ಮುನಿರತ್ನಗೆ ಸಿದ್ದು, ಡಿಕೆ ಚೆಕ್ ಮೆಟ್ ಕೊಡ್ತಾರ ಎಂಬ ಕುತೂಹಲ ಎಲ್ಲರಲ್ಲಿ ಮೂಡಿದೆ.

ಫಿಲ್ಮ್ ಚೇಂಬರ್ ಚುನಾವಣೆಯಲ್ಲಿ ರಾಜಕೀಯ ತಿರುವುಹಾಗೇ ಮುಖ್ಯಮಂತ್ರಿ ಸಿದ್ದರಾಮಯ್ಯ ಬಳಗದಲ್ಲಿ ಗುರುತಿಸಿ‌ ಕೊಂಡಿರುವ ಜಯಮಾಲ ಕೂಡ ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ ನೀಡಲಿದ್ದು ಜೊತೆಗೆ ಡಿಕೆ ಬಳಗದಲ್ಲಿ ಕಾಣಿಸಿಕೊಂಡಿರುವ ಭಾಮ ಹರೀಶ್ ಇವರಿಗೆ ಎದುರಾಗಲಿದ್ದಾರೆ. ಮತ್ತು ಜನವರಿ 15 ಕ್ಕೆ ಫಿಲ್ಮ್ ಚೇಂಬರ್ ನಲ್ಲಿ ಮುನಿರತ್ನ ನಾಮಪತ್ರ ಸಲ್ಲಿ ದ್ದಾರೆ. ಹೀಗಾಗಿ ಈ ಬಾರಿಯ ಫಿಲ್ಮ್ ಚೇಂಬರ್ ಚುನಾವಣೆಯು ಕಾಂಗ್ರೆಸ್ – ಬಿಜೆಪಿ ಪೈಪೋಟಿಯಾಗಲಿದೆ ಎನ್ನಬಹುದು.

[t4b-ticker]
error: Content is protected !!