ವಿಧಾನಸಭೆ: ರಾಜ್ಯದಲ್ಲಿ 2.35 ಕೋಟಿಉದ್ಯೋಗಗಳು ಸೃಷ್ಟಿಯಾಗಿವೆ ಎಂದು ರಾಜ್ಯಪಾಲರ ಭಾಷಣದಲ್ಲಿ ಹೇಳಿಸುವ ಮೂಲಕ ಕಾಂಗ್ರೆಸ್ ಸರ್ಕಾರದಿಂದ ಜನರಿಗೆ ತಪ್ಪು ನೀಡಲಾಗಿದೆ ರಾಜ್ಯದ ಸಂದೇಶ ಎಂದು ಬಿಜೆಪಿ ಸದಸ್ಯ ಧೀರಜ್ ಮುನಿರಾಜು ಹೇಳಿದರು.ರಾಜ್ಯಪಾಲರ ಭಾಷಣ ದಲ್ಲಿ 25 ರಾಜ್ಯದಲ್ಲಿ ಲಕ್ಷ ಎಂಎಸ್‌ಎಂಇಗಳು ನೋಂದಣಿಯಾಗಿವೆ ಎಂದು ಹೇಳಲಾಗಿದೆ ಎಲ್ಲಿ ಉದ್ಯೋಗ ನೀಡಲಾಗಿದೆ ಎಂದು ಪ್ರಶ್ನಿಸಿದರ ಅವರು, ಇದೊಂದು ದೊಡ್ಡ ಹಗರಣ ಆಗಿರಬಹುದು ಎಂದು ದೂರಿದರು.3 ಬಜೆಟ್ ಆದರೂ 5 ಗ್ಯಾರಂಟಿ ಭಿಟ್ಟರೆ ಯಾವುದೇ ಹೊಸ ಯೋಜನೆ ಘೋಷಿಸಿಲ್ಲ, ಮಹಿಳೆಯರ ಶಕ್ತಿ ಯೋಜನೆಗೆ ಲೆಕ್ಕ ಇಲ್ಲ. 3 ವರ್ಷ ಆದರೂ ಸ್ಮಾರ್ಟ್ ಕಾರ್ಡ್ ವಿತರಣೆ ಯಾಗಿಲ್ಲ, ಯಾರು ಎಲ್ಲಿಗೆ ಹೋಗುತ್ತಾರೆ ಎಂದು ಗೊತ್ತಾಗುವುದಿಲ್ಲ ಸರ್ಕಾರದ ಹಣಕ್ಕೆ ಲೆಕ್ಕ ಸಿಗಬೇಕಿದೆ ಎಂದಾಗ ಸಚಿವ ರಾಮಲಿಂಗಾ ರೆಡ್ಡಿ ಅವರು, 660 ಕೋಟಿ ಮಹಿಳೆಯರು ಪ್ರಯಾಣಿಸಿದ್ದಾರೆ ಎಂದು ತಿಳಿಸಿದರು.
ರಾಜ್ಯಕ್ಕೆ ಡ್ರಗ್ಸ್ ಭಾಗ್ಯ ಸಿಕ್ಕಿದೆ
ರಾಜ್ಯಕ್ಕೆ ಡ್ರಗ್ಸ್ ಭಾಗ್ಯ ಸಿಕ್ಕಿದೆ. ಯುವ ಜನತೆ ಮದ್ಯಕ್ಕಿಂತ ಡ್ರಗ್ಸ್ ಕಡೆಗೆ ಮೊರೆ ಹೋಗುತ್ತಿದ್ದಾರೆ, ಗೌಂಡ್ ಲೆವಲ್ ಪೊಲೀಸರು ಈ ರ್ಯಾಕೆಟ್‌ಗಳನ್ನು ನಡೆಸುತ್ತಿದ್ದಾರೆ, ಈ ಬಗ್ಗೆ ಕ್ರಮ ಕೈಗೊಳ್ಳಲು ಗೃಹ ಇಲಾಖೆ ಡ್ರಗ್ಸ್ ವಿರುದ್ದ ಕ್ಯಾಂಪೇನ್ ಹಮ್ಮಿಕೊಳ್ಳಬೇಕು ಎಂದರು. ನಮಗೆ ಅನ್ನದ ಜತೆಗೆ ನೀರು ಬೇಕಿದೆ, 18 ಸಾವಿರ ಕೋಟಿ ಖರ್ಚು ಮಾಡಿದರೂ ದೊಡ್ಡಬಳ್ಳಾಪುರಕ್ಕೆ ಒಂದು ಹನಿ ನೀರು ಸಿಕ್ಕಿಲ್ಲ, ಕೋಲಾರ, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ನೀರು ಒದಗಿಸಿ ಎಂದು ಮನವಿ ಮಾಡಿದರು.












































