ನಾಗರಕೊವಿಲ್-ಮಂಗಳೂರು ಅಮೃತ್‌ ಭಾರತ್‌ ಎಕ್ಸ್‌ಪ್ರೆಸ್‌ ರೈಲಿನ ವೇಳಾಪಟ್ಟಿಗೆ ಆಕ್ಷೇಪ

Picture of Savistara

Savistara

Bureau Report

ಮಂಗಳೂರು: ನಾಗರಕೊವಿಲ್ ಮತ್ತು ಮಂಗಳೂರು ನಡುವೆಕೇರಳದ ತಿರುವನಂತಪುರದ ಮೂಲಕ ಸಂಚರಿಸುವ “ನಾಗರಕೊವಿಲ್ ಜಂಕ್ಷನ್ – ಮಂಗಳೂರು ಜಂಕ್ಷನ್ ಅಮೃತ್ ಭಾರತ್ ವೀಕ್ಲಿ ಎಕ್ಸ್ ಪ್ರಸ್’ ರೈಲಿನ ವೇಳಾಪಟ್ಟಿಗೆ ಹಲವಾರು ಮಂದಿ ರೈಲ್ವೇ ಬಳಕೆದಾರರಿಂದ ಆಕ್ಷೇಪ ವ್ಯಕ್ತವಾಗಿದೆ.ರೈಲು ಸಂಖ್ಯೆ 16329 ಪ್ರತಿ ಮಂಗಳವಾರ ಪೂರ್ವಾಹ್ನ 11.40ಕ್ಕೆ ನಾಗರಕೊವಿಲ್ ಜಂಕ್ಷನ್ ನಿಂದ ಹೊರಟು ಮರುದಿನ ಮುಂಜಾವ 5 ಗಂಟೆಗೆ ಮಂಗಳೂರು ಜಂಕ್ಷನ್ ತಲುಪುತ್ತದೆ. ರೈಲು ಸಂಖ್ಯೆ 16330 ಪ್ರತಿ ಬುಧವಾರ ಬೆಳಗ್ಗೆ 8ಕ್ಕೆ ಮಂಗಳೂರು ಜಂಕ್ಷನ್ ನಿಂದ ಹೊರಟು ಅದೇ ದಿನ ರಾತ್ರಿ 10.05ಕ್ಕೆ ನಾಗರಕೊವಿಲ್ ಜಂಕ್ಷನ್ ತಲುಪುತ್ತದೆ. ಇದು 8 ಸ್ಟೀಪರ್‌ಕ್ಲಾಸ್ ಕೋಚ್ ಗಳು, 11 ಜನರಲ್ ಸಕೆಂಡ್ ಕ್ಲಾಸ್ ಕೋಚ್ ಗಳು, 1 ಪ್ಯಾಂಟ್ರಿ ಕಾರ್‌ಮತ್ತು 2 ಜನರಲ್ ಸೆಕೆಂಡ್ ಕ್ಲಾಸ್ ಕಂ ಲಗೇಜ್ ಬ್ರೇಕ್ ವ್ಯಾನ್ ಕೋಚ್ ಗಳನ್ನು ಒಳಗೊಂಡಿರುತ್ತದೆ.

ಆಕ್ಷೇಪ ಯಾಕೆ?

ಈ ರೈಲು ನಾಗರಕೊವಿಲ್ ಜಂಕ್ಷನ್ ನಿಂದ ಮಂಗಳೂರು ಜಂಕ್ಷನ್ ತಲುಪಲು 17 ಗಂಟೆ 20 ನಿಮಿಷ ತಗಲುತ್ತದೆ. ಸರಾಸರಿ ವೇಗ ಪ್ರತಿ ಗಂಟೆಗೆ 41 ಕಿ.ಮೀ ಇರುತ್ತದೆ. ಇದು ಸಾಮಾನ್ಯ ಲೋಕಲ್ ಪ್ಯಾಸೆಂಜರ್‌ರೈಲಿನ ವೇಗವಾಗಿದೆ. ಇನ್ನು, ಮಂಗಳೂರಿನಿಂದ ನಾಗರಕೋಯಿಲ್‌ಗೆ ಹೋಗುವಾಗ 14 ಗಂಟೆ 5 ನಿಮಿಷ ತೆಗೆದುಕೊಳ್ಳುತ್ತದೆ. ಇದರ ಸರಾಸರಿ ವೇಗ ಹೆಚ್ಚಿದೆ. ಆದರೆ ಈ ರೈಲು ಹಗಲಿನಲ್ಲಿ ಸಂಚರಿಸುವುದರಿಂದ ಸ್ವೀಪರ್ ಕೋಚ್ ಅನಗತ್ಯ. ಅಲ್ಲದೆ ತಿರುವನಂತಪುರದಿಂದ ಮಂಗಳೂರಿಗೆ ಈ ರೈಲಿನಲ್ಲಿ ಪ್ರಯಾಣದ ಅವಧಿ 15 ಗಂಟೆ 45 ನಿಮಿಷ.ಇದಕ್ಕಿಂತ ಕಡಿಮೆ ಸಮಯದಲ್ಲಿ ಸಂಪೂರ್ಣ ಸಾಮಾನ್ಯ ದರ್ಜೆಯ ಕೋಚ್ ಗಳನ್ನೇ ಹೊಂದಿರುವ ತಿರುವನಂತಪುರ-ಮಂಗಳೂರು ಅಂತ್ಯೋದಯ ಎಕ್ಸಪ್ರಸ್ ರೈಲು ತಿರುವನಂತಪುರದಿಂದ ಮಂಗಳೂರು ತಲುಪುತ್ತದೆ. ಈ ರೈಲು 11 ಗಂಟೆ 50 ನಿಮಿಷ ಮಾತ್ರ ತೆಗೆದುಕೊಳ್ಳುತ್ತದೆ. ಅಮೃತ್ ಭಾರತ್ ರೈಲು ದೂರದ ನಗರಗಳಿಗೆ ಕಡಿಮೆ ಸಮಯದಲ್ಲಿ ಓಡುವ ಸಾಮರ್ಥಯ ಹೊಂದಿದೆ. ಆದರೆ ಅಧಿಕಾರಿಗಳು ಇಲ್ಲಿ ನಿರ್ಲಕ್ಷ್ಯ ವಹಿಸಿದ್ದಾರೆ ಎಂಬ ಆಕ್ಷೇಪಗಳು ಕೇಳಿಬಂದಿವೆ.

News Updates

ಕೇಂದ್ರ ಸರ್ಕಾರದಿಂದ ಶಿವಮೊಗ್ಗ ನಗರ ಬೈಪಾಸ್ ಹಾಗೂ ನಗರ ವ್ಯಾಪ್ತಿಯ ಹೆದ್ದಾರಿ ಅಭಿವೃದ್ಧಿಗೆ 466.74 ಕೋಟಿ ರೂ. ಮಂಜೂರು; ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಕೃತಜ್ಞತೆ ಸಲ್ಲಿಸಿದ ಸಂಸದ ಬಿ.ವೈ. ರಾಘವೇಂದ್ರ

[t4b-ticker]
error: Content is protected !!