ಸುಳ್ಯ : ಐವರ್ನಾಡು ಮಂಡಲ ಹಿಂದೂ ಸಂಗಮ ಕಾರ್ಯಕ್ರಮ

Picture of Savistara

Savistara

Bureau Report

ರಾಷ್ಟ್ರೀಯ ಸ್ವಯಂಸೇವಕ ಸಂಘದ ಶತಾಬ್ಧಿಯ ಪ್ರಯುಕ್ತ ಏರ್ಪಡಿಸಲಾಗಿರುವ ಐವರ್ನಾಡು ಮತ್ತು ಅಮರಪಡ್ನೂರು ಗ್ರಾಮಗಳ ವ್ಯಾಪ್ತಿಯ ಹಿಂದೂ ಸಂಗಮ ಕಾರ್ಯಕ್ರಮ ಫೆ.1 ರಂದು ಐವರ್ನಾಡು ಸಹಕಾರ ಸಂಘದ ಬಳಿ ನಡೆಯಿತು.

ಹಿಂದೂ ಸಂಗಮ ಪ್ರಯುಕ್ತ ಬಾಂಜಿಕೋಡಿಯಿಂದ ಜೂನಿಯರ್ ಕಾಲೇಜ್ ಎದುರಿನ ವರೆಗೆ ನೂರಾರು ಬೈಕ್ ಗಳು ಮತ್ತು ಚತುಷ್ಚಕ್ರ ವಾಹನಗಳ ರ್ಯಾಲಿ ನಡೆಯಿತು.
ಬಳಿಕ ಅಲ್ಲಿಂದ ಮೆರವಣಿಗೆ ಆರಂಭವಾಯಿತು. ಭಾರತ ಮಾತೆಯ ಟ್ಯಾಬ್ಲೋ, ಶಿವಾಜಿ ಭಾವಚಿತ್ರ ಅಳವಡಿಸಿದ ವಾಹನ, ಪೂರ್ಣಕುಂಭ ಹಿಡಿದ ಮಹಿಳೆಯರು, ಕುಣಿತ ಭಜನಾ ತಂಡದ ಮಹಿಳೆಯರು ಮತ್ತು ಮಕ್ಕಳು
ನೂರಾರು ಪುರುಷರು, ಮಹಿಳೆಯರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ನಂತರ ನಡೆದ ಸಭಾಕಾರ್ಯಕ್ರಮದಲ್ಲಿ
ಡಾ.ನಾರಾಯಣ ಭಟ್ ಪಾಲೆಪ್ಪಾಡಿ, ಬಾಲಕೃಷ್ಣ ಬೊಳ್ಳೂರು, ಶಾರದಾ ಸುಬ್ರಾಯ ಗೌಡ ಬರೆಮೇಲು, ನವೀನ್ ಕುಮಾರ್ ಚಾತುಬಾಯಿ, ಸಾಯಿಪ್ರಸಾದ್ ಅಜ್ಜನಗದ್ದೆ ಮುಖ್ಯ ಅತಿಥಿಗಳಾಗಿದ್ದರು. ಹಿಂದೂ ಸಂಗಮದ ಸಂಚಾಲಕ ಬಾಲಕೃಷ್ಣ ಮಡ್ತಿಲ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಭಾಷಣಗಾರರಾಗಿ ಚಂದ್ರಶೇಖರ ನೂಜಿಬೆಟ್ಟು ಈಶ್ವರಮಂಗಲ ಭಾಗವಹಿಸಿದ್ದರು.

ಐವರ್ನಾಡು ‌ಮತ್ತು ಅಮರಪಡ್ನೂರು ಪರಿಸರದ ಸಾಂಸ್ಕೃತಿಕ ಮಹತ್ವದ ಕುರಿತು ಬಾಲಕೃಷ್ಣ ಬೊಳ್ಳೂರು ಭಾಷಣ ಮಾಡಿದರು.

ಹಿಂದೂ ನಿರ್ವಹಣಾ ಸಮಿತಿ ಸದಸ್ಯ ಮೋಹನ್ ಬೋರುಗುಡ್ಡೆ ಸ್ವಾಗತಿಸಿ,
ಮುರಳಿಕೃಷ್ಣ ಪಾಲೆಪ್ಪಾಡಿ, ಶ್ರೀಮತಿ ಅಕ್ಷತಾ ಮನೋಜ್ ಇಕ್ಕೇರಿ ಕಾರ್ಯಕ್ರಮ ನಿರೂಪಣೆಯನ್ನು ಮಾಡಿದರು.

[t4b-ticker]
error: Content is protected !!