ಬೆಳ್ಳಾರೆ ಮಂಡಲ ಹಿಂದೂ ಸಂಗಮ ಕಾರ್ಯಕ್ರಮ

Picture of Savistara

Savistara

Bureau Report

ಬೆಳ್ಳಾರೆಯಲ್ಲಿ ಬೃಹತ್ ಹಿಂದೂ ಸಂಗಮ – ಶೋಭಾಯಾತ್ರೆ

ಹಿಂದೂ ಸಂಗಮ ಬೆಳ್ಳಾರೆ ಮಂಡಲ,ಬೆಳ್ಳಾರೆ,ಪೆರುವಾಜೆ,ಕೊಡಿಯಾಲ ಗ್ರಾಮದ ವತಿಯಿಂದ ಹಿಂದೂ ಸಮಾಜದ ಏಕತೆ,ಸಾಮಾಜಿಕ ಪರಿವರ್ತನೆ,ಧಾರ್ಮಿಕ ಮತ್ತು ರಾಷ್ಟ್ರೀಯ ಪ್ರಜ್ಞೆಯನ್ನು ಬಲಪಡಿಸುವ ಉದ್ದೇಶದಿಂದ ಪಂಚ ಪರಿವರ್ತನೆ ಗೆ ಬೃಹತ್ ಹಿಂದೂ ಸಂಗಮ ಮತ್ತು ಶೋಭಾಯಾತ್ರೆಯು ಫೆ.01 ರಂದು ಬೆಳ್ಳಾರೆ ಮಾಸ್ತಿಕಟ್ಟೆಯಿಂದ ನಡೆಯಿತು.
ಶೋಭಾಯಾತ್ರೆ ನಡೆದ ಬಳಿಕ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಎದುರು ಸಭಾ ಕಾರ್ಯಕ್ರಮ ನಡೆಯಿತು.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಪುತ್ತೂರು ಜಿಲ್ಲಾ ಪ್ರಚಾರಕ ಸುದೀಶ್ ರವರು ಮಾತನಾಡಿ ಸಮಾಜದಲ್ಲಿ ಸಾಮಾಜಿಕ ಸಾಮರಸ್ಯ ಮತ್ತು ಹಿಂದೂ ಸಮಾಜದ ಏಕತೆಗೆ ಶತಾಬ್ದಿಯ ಈ ಸಂದರ್ಭದಲ್ಲಿ ಪಂಚ ಪರಿವರ್ತನೆ ಯ ವ್ರತ ಸ್ವೀಕಾರ ಮಾಡುವ ಅಗತ್ಯವಿದೆ ಯೆಂದರು

ವೇದಿಕೆಯಲ್ಲಿ ಬೆಳ್ಳಾರೆ ಮಂಡಲ ಹಿಂದು ಸಂಗಮ ಸಮಿತಿಯ ಸಂಚಾಲಕ ಅರುಣಶಂಕರ ನೆಟ್ಟಾರು,ಪ್ರಗತಿಪರ ಕೃಷಿಕರಾದ ಲಕ್ಷ್ಮೀನಾರಾಯಣ ಶ್ಯಾನುಭಾಗ್, ನಾಟಿ ವೈದ್ಯೆ ಭಾಗೀರಥಿ ಕೊಡಿಯಾಲ,ಕಲಾವಿದ ಐತ್ತ ಪಾಟಾಜೆ,ಶ್ರೀಮತಿ ರತ್ನಾವತಿ ನೆಟ್ಟಾರು,ನಿವೃತ್ತ ಯೋಧ ಕ್ಯಾ.ಸುಧಾನಂದ ಪೆರುವಾಜೆ,ಮುಕ್ಕೂರು ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ದಯಾಕರ ಆಳ್ವ,ಬೆಳ್ಳಾರೆ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುರೇಶ್ ಕುಮಾರ್ ಶೆಟ್ಟಿ ಪನ್ನೆಗುತ್ತು,ಡಾ.ನರಸಿಂಹ ಶರ್ಮ ಕಾನಾವು ಉಪಸ್ಥಿತರಿದ್ದರು.
ಶೈಲೇಶ್ ನೆಟ್ಟಾರು ಸ್ಬಾಗತಿಸಿ ,
ಬೆಳ್ಳಾರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ರಾಮಕೃಷ್ಣ ಭಟ್ ಕುರುಂಬುಡೇಲು ಪ್ರಾಸ್ತಾವಿಕವಾಗಿ ಮಾತನಾಡಿದರು.
ಶಿವಪ್ರಸಾದ್ ಪೆರುವಾಜೆ ಕಾರ್ಯಕ್ರಮ ನಿರೂಪಿಸಿದರು.
ಸಭಾ ಕಾರ್ಯಕ್ರಮದ ಮೊದಲು ಕೃತಿಕಾ ತಂಡದಿಂದ ಸಮೂಹ ಗೀತೆ,ಅವನಿ ಕೋಡಿಬೈಲುರವರಿಂದ ವಂದೇ ಮಾತರಂ ನೃತ್ಯ,ದೇವಿಕಾ ಪುತ್ತೂರುರವರಿಂದ ಹರಿಕಥೆ ನಡೆಯಿತು.
ಬೆಳ್ಳಾರೆಯ ಮಾಸ್ತಿಕಟ್ಟೆಯಲ್ಲಿ ವೇದಶ್ಲೋಕದೊಂದಿಗೆ ಮೆರವಣಿಗೆಗೆ ಚಾಲನೆ ನೀಡಲಾಯಿತು.
ಬೆಳ್ಳಾರೆ ಮುಖ್ಯ ರಸ್ತೆಯಲ್ಲಿ ಬೆಳ್ಳಾರೆ ರಾಜರಾಜೇಶ್ವರಿ ದೇವಾಲಯದ ಸ್ಥಬ್ಧ ಚಿತ್ರ,
ಭಾರತಮಾತೆಯ ಭಾವಚಿತ್ರ,
ವಿವಿಧ ವೇಷ ಭೂಷಣಗಳೊಂದಿಗೆ
ಸಿಂಗಾರಿ ಮೇಳ ಚೆಂಡೆ ವಾದನದೊಂದಿಗೆ,ಮಕ್ಕಳ ಕುಣಿತ ಭಜನೆಯೊಂದಿಗೆ ವೈಭವದ ಶೋಭಾಯಾತ್ರೆ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದವರೆಗೆ ನಡೆಯಿತು.
ಆಕರ್ಷಕ ಸುಡುಮದ್ದಿನ ಪ್ರದರ್ಶನ ನಡೆಯಿತು.
ಸಾವಿರಾರು ಜನರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

[t4b-ticker]
error: Content is protected !!