ಬೆಂಗಳೂರು: 2026-31ನೇ ಸಾಲಿನ ಗ್ರಾ. ಪಂ.ಗಳ ಸಾರ್ವತ್ರಿಕ ಚುನಾವಣೆಗೆ ಪೂರ್ವ ಸಿದ್ಧತೆ ಮಾಡಿಕೊಳ್ಳುವಂತೆ ಎಲ್ಲ ಜಿಲ್ಲಾಧಿ ಕಾರಿಗಳಿಗೆ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ಇಲಾಖೆ ನಿರ್ದೇ ಶಕರು ಸೂಚನೆ ನೀಡಿದ್ದಾರೆ.
ಈ ಬಗ್ಗೆ ಸುತ್ತೋಲೆ ಹೊರಡಿಸಿರುವ ಅವರು, 2020-25ನೇ ಅವಧಿಯ ಗ್ರಾಪಂಗಳ ಅವಧಿಯು 2026ರ ಜನವರಿಯಿಂದ ಪೂರ್ಣಗೊಳ್ಳಲು ಪ್ರಾರಂಭವಾಗಿದ್ದು, ಈ ಅವಧಿ ಮುಕ್ತಾಯಗೊಳ್ಳುವ ಗ್ರಾ.ಪಂ.ಗಳಿಗೆ 2026ರ ಡಿಸೆಂಬರ್‌ನಲ್ಲಿ ಸಾರ್ವತ್ರಿಕ ಚುನಾವಣೆ ನಡೆಸಬೇಕಾಗಿದೆ.
6 ತಿಂಗಳು ಮುಂಚಿತವಾಗಿ ಮತ ದಾರರ ಪಟ್ಟಿ ಮುದ್ರಣ ಸಹಿತ ಇತರ ಎಲ್ಲ ಪೂರ್ವಭಾವಿ ಸಿದ್ಧತೆ ಗಳನ್ನು ಚುನಾವಣ ಆಯೋಗ ಮಾಡಿಕೊಳ್ಳ ಬೇಕಾಗಿರುತ್ತದೆ. ಈ ಹಿನ್ನೆಲೆಯಲ್ಲಿ ನಿಗದಿತ ಕಾಲಮಿತಿಯಲ್ಲಿ ಮೀಸಲಾತಿ ಅಧಿಸೂಚನೆ ಹೊರಡಿಸಿ ಅದರ ಪ್ರತಿಗಳನ್ನು ಆಯೋಗಕ್ಕೆ ಒದಗಿಸುವಂತೆ ಚುನಾವಣ ಆಯು ಕ್ತರು ಕೋರಿದ್ದಾರೆ ಎಂದಿದ್ದಾರೆ.









































