ರಾಷ್ಟ್ರಗೀತೆಯಲ್ಲಿ ಬ್ರಿಟಿಷರ ಹೊಗಳಿಕೆ: ಶಾಸಕ ಬಸನಗೌಡ ಪಾಟೀಲ ಯತ್ನಾಳ!

Picture of Savistara

Savistara

Bureau Report

ವಿಜಯಪುರ; ಜನಗಣಮನ ರಾಷ್ಟ್ರಗೀತೆಯಲ್ಲಿ ಬ್ರಿಟಿಷರನ್ನು ಹೊಗಳುವಂತಹ ಶಬ್ದಗಳಿವೆ. ಆದರೆ ವಂದೇ ಮಾತರಂನಲ್ಲಿ ಸಮಗ್ರ ಭಾರತ ಕಲ್ಪನೆ ಇದೆ,” ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಅಭಿಪ್ರಾಯಪಟ್ಟರು. ಯತ್ನಾಳನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, “ರಾಷ್ಟ್ರಗೀತೆ ಮಾದರಿಯಲ್ಲಿ ವಂದೇ ಮಾತರಂ ಗೀತೆಗೂ ಗೌರವ ನೀಡಬೇಕು ಎಂದು ಹೊಸ ಮಾರ್ಗಸೂಚಿ ಹೊರಡಿಸಿದ ಕೇಂದ್ರ ಸರಕಾರದ ನಿರ್ಧಾರವನ್ನು ಸ್ವಾಗತಿಸುತ್ತೇನೆ,” ಎಂದರು.

”ವಂದೇ ಮಾತರಂನಲ್ಲಿ ಭಾರತದ ಕೃಷಿ, ಕೃಷಿ, ನೈಸರ್ಗಿಕ ಸಂಪತ್ತು ಸೇರಿದಂತೆ ಎಲ್ಲ ವಿಷಯಗಳಿವೆ. ಹಾಗಾಗಿ ಕೇಂದ್ರ ಸರಕಾರ ರಾಷ್ಟ್ರಗೀತೆಗೆ ಸಮನಾಗಿ ಗೌರವ ನೀಡಿದೆ,” ಎಂದರು.ಕಾಂಗ್ರೆಸ್ ಪಕ್ಷದಲ್ಲಿ ಯುದ್ಧ ಆರಂಭ ನಿಜವಾದ ಯುದ್ಧ ಈಗ ಶುರುವಾಗಿದೆ.ಸಿದ್ದರಾಮಯ್ಯ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಲೆಂದೇ ಡಿ.ಕೆ.ಶಿವಕುಮಾರ್ ಹೊಸದಿಲ್ಲಿಗೆ ಹೋಗಿದ್ದಾರೆ. ಅದಕ್ಕಾಗಿಯೇ ಬಜೆಟ್ ಸಭೆಗೂ ಗೈರು ಹಾಜರಾಗಿದ್ದಾರೆ,” ಎಂದು ಯತ್ನಾಳ ಹೇಳಿದರು. ‘ನಾನು ಸಿಎಂ ಆದರೆ ಮಾತ್ರ ಸರಕಾರ ಉಳಿಯಲಿದೆ ಎಂದು ಸಂದೇಶ ರವಾನಿಸಲು ಡಿಕೆಶಿ ಹೊಸದಿಲ್ಲಿಗೆ ಹೋಗಿರುವುದು ಕಾಂಗ್ರೆಸ್ ಸರ್ಕಾರ ಪತನದ ಮೊದಲ ಹೆಜ್ಜೆಯಾಗಿದೆ,” ಎಂದು ಭವಿಷ್ಯ ನುಡಿದರು.

News Updates

BREAKING NEWS ಸುಳ್ಯ :ಪಂಜ ಕಾಂಗ್ರೆಸ್ ಪಕ್ಷದ ಹುದ್ದೆಗೆ ರಾಜಿನಾಮೆ ನೀಡಿದ ದಿನೇಶ್ ಪುಂಡಿಮನೆ, ಕುಸುಮಾಧರ ಕೆರೆಯಡ್ಕ,ಲೋಕನಾಥ್ ಕುದ್ವ |ನಮ್ಮ ಮಾತನ್ನು ಪಕ್ಷದ ನಾಯಕರು ಉಳಿಸಿಕೊಂಡಿಲ್ಲ, ದೇವಸ್ಥಾನ ವ್ಯವಸ್ಥೆ ಸರಿದಾರಿಗೆ ತರುವ ಕೆಲಸವಾಗಲಿ: ದಿನೇಶ್ ಪುಂಡಿಮನೆ

News Updates

ಬೆಳ್ತಂಗಡಿ : ಮೊಗ್ರು ಜೈ ಶ್ರೀರಾಮ ಸೇವಾ ಟ್ರಸ್ಟ್ ಅಲೆಕ್ಕಿ -ಮುಗೇರಡ್ಕ ಮೊಗ್ರು, ಶ್ರೀ ರಾಮ ಶಿಶುಮಂದಿರದ 5 ನೇ ವರ್ಷದ ಶ್ರೀ ಕೃಷ್ಣೋತ್ಸವ. |ಕಾಶಿ ಶೆಟ್ಟಿ ನವಶಕ್ತಿ ಗುರುವಾಯನಕೆರೆ ಇವರ ಸ್ಮರಣಾರ್ಥ ಕಾಶಿ ಶೆಟ್ಟಿ ವಿದ್ಯಾ ಮಂದಿರ, ಹಾಗೂ ಶಾಸಕ ಹರೀಶ್ ಪೂಂಜಾರವರ ನೆರವಿನ ಅಡುಗೆ ಕೋಣೆ ಉದ್ಘಾಟನಾ ಕಾರ್ಯಕ್ರಮ |ಮಕ್ಕಳ ಶ್ರೀಕೃಷ್ಣ ಮತ್ತು ರಾಧೆಯರ ಸ್ಪರ್ಧೆ, ಮೊಸರು ಕುಡಿಕೆ, ಆಟೋಟ ಸ್ಪರ್ಧೆ

[t4b-ticker]
error: Content is protected !!