ನವದೆಹಲಿ: ಈ ವರ್ಷದ ಬಜೆಟ್ ಕೇವಲ ಅಂಕಿ-ಅಂಶಗಳ ದಾಖಲೆಯಲ್ಲ, ಬದಲಿಗೆ ಇದು ನಾವು ಸಿದ್ಧರಿದ್ದೇವೆ ಎಂದು ಸಾರುವ ಆತ್ಮವಿಶ್ವಾಸದ ಪ್ರತಿಬಿಂಬ ಎಂದು ಪ್ರಧಾನಿ ನರೇಂದ್ರ ಮೋದಿ(PM Modi) ಬಣ್ಣಿಸಿದ್ದಾರೆ.
ಈ ಬಗ್ಗೆ ಭಾನುವಾರ ಪಿಟಿಐ ಸುದ್ದಿಸಂಸ್ಥೆಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಮೋದಿ, ಬಜೆಟ್ 2026 ಭಾರತವನ್ನು ವಿಕಸಿತ ರಾಷ್ಟ್ರವನ್ನಾಗಿ ಮಾಡುವ ಹಂಬಲವನ್ನು ಜಗತ್ತಿಗೆ ಸಾರುತ್ತಿದೆ ಎಂದು ಪ್ರತಿಪಾದಿಸಿದ್ದಾರೆ.ಈಗಲೇ ಅಥವಾ ಎಂದಿಗೂ ಇಲ್ಲ ಎನ್ನುವ ಒತ್ತಡ ನಮಗಿಲ್ಲಬಜೆಟ್ 2026 ಕೇವಲ ಅನಿವಾರ್ಯತೆಯಿಂದ ಅಥವಾ ಒತ್ತಡದಿಂದ ಮೂಡಿಬಂದ ನೌ ಆರ್ ನೆವರ್ ಕ್ಷಣವಲ್ಲ. ಇದು ದೀರ್ಘಕಾಲದ ತಯಾರಿ ಮತ್ತು ಸ್ಪೂರ್ತಿಯಿಂದ ಉದ್ಭವಿಸಿದ ವಿ ಆರ್ ರೆಡಿ ಕ್ಷಣವಾಗಿದೆ. ದೇಶದ ಜನರಲ್ಲಿ ಇಂದು ಒಂದು ಹೊಸ ರೀತಿಯ ದೃಢಸಂಕಲ್ಪ ಮತ್ತು ಆತ್ಮವಿಶ್ವಾಸ ಮೂಡಿದೆ ಎಂದು ಪ್ರಧಾನಿ ಹೇಳಿದ್ದಾರೆ.ಬಜೆಟ್ ಕೇವಲ ಲೆಕ್ಕದ ಪತ್ರ ಅಲ್ಲಮುಂದುವರೆದು ಮಾತನಾಡಿದ ಪ್ರಧಾನಿ ಮೋದಿ, ತಮ್ಮ ಸರ್ಕಾರವು ಎಂದಿಗೂ ಬಜೆಟ್ ಅನ್ನು ಕೇವಲ ಒಂದು ವಾಡಿಕೆಯ ಲೆಕ್ಕದ ಪತ್ರ ಎಂದು ಪರಿಗಣಿಸಿಲ್ಲ. ನಮ್ಮ ಕೆಲಸವು ಬಿಡಿಬಿಡಿಯಾಗಿ ನಡೆಯುವುದಿಲ್ಲ. ಅದಕ್ಕೊಂದು ವಿಶಾಲವಾದ ಕಾರ್ಯತಂತ್ರ, ಕ್ರಿಯಾ ಯೋಜನೆ ಮತ್ತು ಪರಿಣಾಮಕಾರಿ ಅನುಷ್ಠಾನದ ದೀರ್ಘಕಾಲದ ದೃಷ್ಟಿಕೋನವಿದೆ ಎಂದು ವಿವರಿಸಿದ್ದಾರೆ. ಅಲ್ಲದೆ, 2014 ರಿಂದ ಪ್ರತಿ ಬಜೆಟ್ ಕೂಡ ಒಂದು ಸ್ಪಷ್ಟ ರೋಡ್‌ಮ್ಯಾಪ್ ಹೊಂದಿದ್ದು, ಅಭಿವೃದ್ಧಿಯ ಹಂತಗಳನ್ನು ಸರಣಿ ಕ್ರಮದಲ್ಲಿ ಪೂರೈಸುತ್ತಿದೆ ಎಂದು ತಿಳಿಸಿದ್ದಾರೆ.
21ನೇ ಶತಮಾನದ ಎರಡನೇ ಕಾಲುಭಾಗದ ಅಡಿಪಾಯ2026ರ ಬಜೆಟ್ ಅನ್ನು ಕೇವಲ ಒಂದು ವರ್ಷದ ಹಣಕಾಸು ಯೋಜನೆಯಾಗಿ ನೋಡಬಾರದು. ಇದು 21ನೇ ಶತಮಾನದ ಎರಡನೇ ಕಾಲುಭಾಗದ ಮೊದಲ ಬಜೆಟ್ ಆಗಿದೆ. 1920ರ ದಶಕದಲ್ಲಿ ತೆಗೆದುಕೊಂಡ ನಿರ್ಧಾರಗಳು ಹೇಗೆ 1947ರ ಸ್ವಾತಂತ್ರ್ಯಕ್ಕೆ ಅಡಿಪಾಯ ಹಾಕಿದವೋ, ಹಾಗೆಯೇ ಇಂದು ನಾವು ತೆಗೆದುಕೊಳ್ಳುತ್ತಿರುವ ನಿರ್ಧಾರಗಳು 2047ರ ವಿಕಸಿತ ಭಾರತಕ್ಕೆ ಬಲವಾದ ಅಡಿಪಾಯ ಹಾಕಲಿವೆ ಎಂದು ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.ಬದಲಾಗುತ್ತಿರುವ ವಿಶ್ವ ಕ್ರಮ ಮತ್ತು ಭಾರತದ ಪಾತ್ರಕೊರೋನಾ ನಂತರದ ಜಗತ್ತಿನಲ್ಲಿ ಭಾರತಕ್ಕೆ ಹೊಸ ಬಾಗಿಲುಗಳು ತೆರೆದುಕೊಳ್ಳುತ್ತಿವೆ. ಜಾಗತಿಕ ಸವಾಲುಗಳ ನಡುವೆಯೂ ಭಾರತವು ಅಭಿವೃದ್ಧಿಯ ಬ್ರೈಟ್ ಸ್ಪಾಟ್ ಆಗಿ ಹೊರಹೊಮ್ಮಿದೆ. ಯುವಶಕ್ತಿ, ಕಡಿಮೆ ಹಣದುಬ್ಬರ ಮತ್ತು ರಾಜಕೀಯ ಸ್ಥಿರತೆಯು ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶದ ಸ್ಥಾನಮಾನವನ್ನು ಹೆಚ್ಚಿಸಿದೆ ಎಂದು ಮೋದಿ ಹೇಳಿದ್ದಾರೆ,












































