ನಾಯಿಗೆ ಬೊಗಳುವುದೇ ಕೆಲಸ: ಛಲವಾದಿ ಹೇಳಿಕೆಗೆ ಅಶೋಕ್ ರೈ ತಿರುಗೇಟು

Picture of Savistara

Savistara

Bureau Report

ಪುತ್ತೂರು (ದಕ್ಷಿಣ ಕನ್ನಡ): ‘ನಾಯಿ ಕಳ್ಳ ಬಂದರೂ ಬೊಗಳುತ್ತದೆ, ಒಳ್ಳೆಯವರು ಬಂದರೂ ಬೊಗಳುತ್ತದೆ. ಯಾರು ಒಳ್ಳೆಯವರು, ಯಾರು ಕೆಟ್ಟವರು ಎಂಬುದು ನಾಯಿಗೆ ಗೊತ್ತಾಗುವುದಿಲ್ಲ. ಛಲವಾದಿಯೂ ಅದೇ ನಾಯಿ ರೀತಿ. ಅದಕ್ಕೆ ಏನೂ ಗೊತ್ತಾಗಿಲ್ಲ, ಬೊಗಳಿದೆ. ಅದಕ್ಕೆ ನಾವೇನೂ ತಲೆಬಿಸಿ ಮಾಡಿಕೊಳ್ಳುವುದಿಲ್ಲ, ಪ್ರಾಣಿಯಲ್ವಾ’ ಎಂದು ಶಾಸಕ ಅಶೋಕ್‌ ಕುಮಾ‌ರ್ ರೈ ಹೇಳಿದರು.

ವಿಧಾನಪರಿಷತ್‌ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣ ಸ್ವಾಮಿ ಅವರು ಶನಿವಾರ ಉಪ್ಪಿನಂಗಡಿಯಲ್ಲಿ ನೀಡಿದ್ದ ಹೇಳಿಕೆಗೆ ಅವರು ಈ ಪ್ರತಿಕ್ರಿಯೆ ನೀಡಿದರು.ಬಿಜೆಪಿ ಹಮ್ಮಿಕೊಂಡಿದ್ದ ಪಾದಾಯಾತ್ರೆಯಲ್ಲಿ ಶನಿವಾರ ಭಾಗವಹಿಸಿದ್ದ ಛಲವಾದಿ ನಾರಾಯಣ ಸ್ವಾಮಿ ಅವರು, ‘ಅನುದಾನದ ವಿಚಾರದಲ್ಲಿ ಕಾಂಗ್ರೆಸಿಗರು ಸುಳ್ಳು ಹೇಳುತ್ತಾ ತಿರುಗಾಡುತ್ತಿದ್ದಾರೆ. ಬಾಯಿ ಬಿಟ್ಟರೆ ಸುಳ್ಳನ್ನೇ ಹೇಳುವ ಶಾಸಕ ಅಶೋಕ್ ಕುಮಾರ್ ರೈ ಅವರಿಗೆ ತಾಕತ್ತು ಇದ್ದರೆ ನಮ್ಮ ವೇದಿಕೆಗೆ ಬಂದು ಯಾವ ಅನುದಾನ ಬಂದಿದೆ ಎಂಬುದನ್ನು ತಿಳಿಸಲಿ. ಅವರು ಹೇಳಿದ ಒಂದೊಂದು ಸುಳ್ಳಿನ ಬಗ್ಗೆ ಅವರ ಬಟ್ಟೆ ಬಿಚ್ಚುತ್ತೇನೆ’ ಎಂದಿದ್ದರು.’ಅವನನ್ನು ನೀವು ಛಲವಾದಿ ನಾರಾಯಣ ಸ್ವಾಮಿ ಅಂತ ಕರೆಯುತ್ತೀರಿ. ವಾಸ್ತವದಲ್ಲಿ ಅವನನ್ನು ಛಲವಾದಿ ನಾಲಾಯಕ್ಕು ಸ್ವಾಮಿ ಅಂತ ಕರೆಯಬೇಕು. ನಾನು ಸವಾಲು ಎದುರಿಸಲು ಸಿದ್ಧ. ಅವರಿಗೆ ತಾಕತ್ತು ಇದ್ದರೆ ಸಾಮೂಹಿಕ ವೇದಿಕೆ ನಿಗದಿ ಮಾಡಿ ಕರೆಯಲಿ ನಾನು ಉತ್ತರ ಕೊಡುತ್ತೇನೆ. ಅವರ ವೇದಿಕೆಗೆ ನಾನು ಹೋಗುವುದಿಲ್ಲ. ಜನರ ವೇದಿಕೆಗೆ ಅವರು ಬರಲಿ. ನಮ್ಮ ತಂಟೆಗೆ ಬಂದರೆ ಉತ್ತರ ಕೊಡುತ್ತೇವೆಯೇ ಹೊರತು ಬೇರೆಯವರ ತಂಟೆಗೆ ನಾವು ಹೋಗುವುದಿಲ್ಲ’ ಎಂದು ಅಶೋಕ್ ಕುಮಾ‌ರ್ ರೈ ಹೇಳಿದರು.

News Updates

BREAKING NEWS ಸುಳ್ಯ :ಪಂಜ ಕಾಂಗ್ರೆಸ್ ಪಕ್ಷದ ಹುದ್ದೆಗೆ ರಾಜಿನಾಮೆ ನೀಡಿದ ದಿನೇಶ್ ಪುಂಡಿಮನೆ, ಕುಸುಮಾಧರ ಕೆರೆಯಡ್ಕ,ಲೋಕನಾಥ್ ಕುದ್ವ |ನಮ್ಮ ಮಾತನ್ನು ಪಕ್ಷದ ನಾಯಕರು ಉಳಿಸಿಕೊಂಡಿಲ್ಲ, ದೇವಸ್ಥಾನ ವ್ಯವಸ್ಥೆ ಸರಿದಾರಿಗೆ ತರುವ ಕೆಲಸವಾಗಲಿ: ದಿನೇಶ್ ಪುಂಡಿಮನೆ

News Updates

ಬೆಳ್ತಂಗಡಿ : ಮೊಗ್ರು ಜೈ ಶ್ರೀರಾಮ ಸೇವಾ ಟ್ರಸ್ಟ್ ಅಲೆಕ್ಕಿ -ಮುಗೇರಡ್ಕ ಮೊಗ್ರು, ಶ್ರೀ ರಾಮ ಶಿಶುಮಂದಿರದ 5 ನೇ ವರ್ಷದ ಶ್ರೀ ಕೃಷ್ಣೋತ್ಸವ. |ಕಾಶಿ ಶೆಟ್ಟಿ ನವಶಕ್ತಿ ಗುರುವಾಯನಕೆರೆ ಇವರ ಸ್ಮರಣಾರ್ಥ ಕಾಶಿ ಶೆಟ್ಟಿ ವಿದ್ಯಾ ಮಂದಿರ, ಹಾಗೂ ಶಾಸಕ ಹರೀಶ್ ಪೂಂಜಾರವರ ನೆರವಿನ ಅಡುಗೆ ಕೋಣೆ ಉದ್ಘಾಟನಾ ಕಾರ್ಯಕ್ರಮ |ಮಕ್ಕಳ ಶ್ರೀಕೃಷ್ಣ ಮತ್ತು ರಾಧೆಯರ ಸ್ಪರ್ಧೆ, ಮೊಸರು ಕುಡಿಕೆ, ಆಟೋಟ ಸ್ಪರ್ಧೆ

[t4b-ticker]
error: Content is protected !!