ವಿಧಾನಸೌಧದಲ್ಲಿ ಮಾಧ್ಯಮಗಳಿಗೆ ಅಂಕುಶ! : ಏಕೆ ನಿರ್ಬಂಧ?

Picture of Savistara

Savistara

Bureau Report

ಬೆಂಗಳೂರು: ವಿಧಾನಸೌಧದ ಒಳಗೆ ಹೇಳಿಕೆಗಳನ್ನು ಪಡೆಯಲುಮಾಧ್ಯಮಗಳಿಗೆ ನಿರ್ಬಂಧ ಹೇರಿ ರಾಜ್ಯ ಸರ್ಕಾರ ಬುಧವಾರ ಆದೇಶ ಹೊರಡಿಸಿದೆ. ಆದರೆ, ಸರ್ಕಾರದ ಈ ನಡೆಗೆ ಪ್ರತಿಪಕ್ಷಗಳ ನಾಯಕರು, ಶಾಸಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮಾಧ್ಯಮ ಪ್ರತಿನಿಧಿಗಳನ್ನು ಪೋರ್ಟಿಕೊ ಬಳಿ ಅಥವಾ ಕೆಂಗಲ್ ಗೇಟ್‌ಗೆ ಸೀಮಿತಗೊಳಿಸಲು ರಾಜ್ಯ ಸರ್ಕಾರ ಮುಂದಾಗಿದೆ.ಈ ಕುರಿತು ಮಾಧ್ಯಮಗಳಿಗೆ ನಿರ್ದೇಶನ ನೀಡುವಂತೆ ಆಡಳಿತ ಮತ್ತು ಸಿಬ್ಬಂದಿ ಸುಧಾರಣಾ ಇಲಾಖೆ (ಡಿಪಿಎ ಆರ್) ಯು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಗೆ ಸೂಚನೆ ನೀಡಿದೆ. ಅದರಂತೆ ಇನ್ನು ಮುಂದೆ ಮಾಧ್ಯಮ ಪ್ರತಿನಿಧಿ ಗಳು ವಿಧಾನಸೌಧದ ಪಶ್ಚಿಮ ದ್ವಾರದ ಪೋರ್ಟಿಕೋ ಬಳಿ ನಿಗದಿಪಡಿ ಸಲಾಗಿ ರುವ ಸ್ಥಳದಲ್ಲಿ ಮಾತ್ರ ಗಣ್ಯರ ಬೈಟ್ ಅಥವಾ ಹೇಳಿಕೆಗಳನ್ನು ಪಡೆದುಕೊಳ್ಳತಕ್ಕದ್ದು. ಅದು ಬಿಟ್ಟು ಸಿಎಂ-ಡಿಸಿಎಂ ಸೇರಿದಂತೆ ಗಣ್ಯರು ವಿಧಾನಸೌಧ ಒಳಗೆ ಪ್ರವೇಶಿಸುವ ಸಂದರ್ಭದಲ್ಲಿ ಬೈಟ್ ಅಥವಾ ಸಂದರ್ಶನಕ್ಕಾಗಿ ಹಿಂಬಾಲಿಸುವಂತಿಲ್ಲ. ಪೋರ್ಟಿಕೊ ಬಳಿ ಮಾಧ್ಯಮಗಳಿಗೆ ಬೈಟ್ ಪಡೆಯಲು ಸ್ಥಳ ನಿಗದಿಪಡಿಸಿದರೂ ಜನ ಪ್ರತಿನಿಧಿಗಳು/ ಗಣ್ಯ ವ್ಯಕ್ತಿಗಳು ವಿಧಾನ ಸೌಧ ಪ್ರವೇಶಿಸುವಾಗ ಮಾಧ್ಯಮ ಗಳು ಪ್ರತಿನಿಧಿಗಳು ಬೈಟ್ ಪಡೆಯಲು ಹಿಂಬಾಲಿಸುತ್ತಿದ್ದಾರೆ.

ಇದರಿಂದ ಗಣ್ಯ ವ್ಯಕ್ತಿಗಳ ಭದ್ರತೆಗೆ ಧಕ್ಕೆ ಉಂಟಾಗುವ ಸಾಧ್ಯತೆ ಇದೆ ಎಂದು ಡಿಪಿಎಆರ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಗೆ ಬರೆದ ಪತ್ರದಲ್ಲಿ ತಿಳಿಸಿದೆ. ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಕಾರ್ಯದರ್ಶಿಗಳು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಶಿಫಾರಸು ಮಾಡುವ ಮಾಧ್ಯಮ ಪ್ರತಿನಿಧಿಗಳಿಗೆ ಗುರುತಿನ ಚೀಟಿ ವಿತರಿಸುತ್ತಿದ್ದಾರೆ. ಈ ಗುರುತಿನಚೀಟಿ ಹೊಂದಿರುವ ಮಾಧ್ಯಮ ಪ್ರತಿನಿಧಿಗಳು ಕೂಡ ಭದ್ರತಾ ಹಿತದೃಷ್ಟಿಯಿಂದ ವಿಧಾನಸೌಧ ಪಶ್ಚಿಮ ದ್ವಾರದ ಪೋರ್ಟಿಕೊ ಬಳಿ ನಿಗದಿಪಡಿಸಿದ ಸ್ಥಳದಲ್ಲೇ ಗಣ್ಯರ ಹೇಳಿಕೆಗಳನ್ನು ಪಡೆಯಬೇಕು ಎಂದು ಸ್ಪಷ್ಟಪಡಿಸಿದೆ. ಆದರೆ, ಸರ್ಕಾರದ ಈ ನಡೆಗೆ ಪ್ರತಿಪಕ್ಷಗಳ ನಾಯಕರು, ಶಾಸಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.”ಸಚಿವಾಲಯದಲ್ಲಿ ಮಾಧ್ಯಮಗಳಿಗೆ ನಿರ್ಬಂಧ ವಿಧಿಸುವುದು ತಪ್ಪು. ಮಾಧ್ಯಮಗಳಿಂದಾಗಿ ನಮ್ಮ ಅನಿಸಿಕೆ ತಲುಪಿಸುತ್ತೇವೆ. ಮಾಧ್ಯಮಗಳು ಜನರಿಗೆ ಸರ್ಕಾರದ ಮತ್ತು ನಮ್ಮ ಅಹವಾಲುಗಳನ್ನು ತಲುಪಿಸುವ ಕೆಲಸ ಮಾಡುತ್ತಿವೆ. ಹಾಗಾಗಿ, ಮಾಧ್ಯಮಗಳಿಗೆ ಸ್ವಾತಂತ್ರ್ಯ ಇರಬೇಕು. ಇದೇ ನಮ್ಮ ಧೈಯ, ಆದರೆ ಹತ್ತಿಕ್ಕಬಾರದು’ ಎಂದು ಪ್ರತಿಕ್ರಿಯಿಸಿದ್ದಾರೆ. ಜತೆಗೆ, ಸರ್ಕಾರ ಸರ್ವಾಧಿಕಾರಿ ಧೋರಣೆ ಪ್ರದರ್ಶಿಸುತ್ತಿದೆ ಎಂದೂ ಕಿಡಿಕಾರಿದ್ದಾರೆ.

ಏಕೆ ನಿರ್ಬಂಧ?

ವಿಧಾನಸೌಧದ ಪಶ್ಚಿಮ ದ್ವಾರದ ಬಳಿ ಮಾತ್ರ ಗಣ್ಯರ ಹೇಳಿಕೆ ಪಡೆದುಕೊಳ್ಳಲು ಸ್ಥಳ ನಿಗದಿ ಆದರೂ ಜನಪ್ರತಿನಿಧಿಗಳು ವಿಧಾನಸೌಧ ಪ್ರವೇಶಿಸುವಾಗ ಮಾಧ್ಯಮ ಪ್ರತಿನಿಧಿಗಳು ಬೈಟ್ ಅಥವಾ ಹೇಳಿಕೆ ಪಡೆಯಲು ಹಿಂಬಾಲಿಸುತ್ತಿದ್ದಾರೆ.

ಇದರಿಂದ ಗಣ್ಯ ವ್ಯಕ್ತಿಗಳ ಭದ್ರತೆಗೆ ಧಕ್ಕೆ ಉಂಟಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಈ ಕ್ರಮ

ಪ್ರಜಾಪ್ರಭುತ್ವ ವಿರೋಧಿ ನಡೆ

ಈ ಕಾಂಗ್ರೆಸ್‌ ಸರ್ಕಾರದ ಒಂದೊಂದು ನಿರ್ಣಯವೂ ಪ್ರಜಾಪ್ರಭುತ್ವವನ್ನು ಅಣಕಿಸುವ ರೀತಿ ಯಲ್ಲಿದೆ. ಈ ನಿರ್ಧಾರವನ್ನು ರಾಜ್ಯ ಸರ್ಕಾರ ತಕ್ಷಣ ಹಿಂಪ ಡೆಯಬೇಕು. ಮಾಧ್ಯಮಗಳಿಗೆ ನಿರ್ಬಂಧ ಹೇರುವುದನ್ನು ಖಂಡಿತ ಒಪ್ಪಲು ಸಾಧ್ಯವಿಲ್ಲ. ಇದು ಪ್ರಜಾಪ್ರಭುತ್ವ ವಿರೋಧಿ ನಡೆ.

  • ಬಿ.ವೈ.ವಿಜಯೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ
[t4b-ticker]
error: Content is protected !!