ಮತ್ತೆ ಕುಸಿದ ಚಿನ್ನ, ಸ್ಥಿರವಾದ ಬೆಳ್ಳಿ ದರ

Picture of Savistara

Savistara

Bureau Report

ತೈಲ ಬೆಲೆಯಲ್ಲಿ ತೀವ್ರವಾದ ಏರಿಕೆಯಾಗಿ ಹಣದುಬ್ಬರದ ಕಳವಳದ ನಡುವೆ ಬಡ್ಡಿದರ ಕಡಿತ ಸಾಧ್ಯವಿಲ್ಲದ ಸ್ಥಿತಿ ಚಿನ್ನದ ಬೆಲೆ ಕುಸಿತಕ್ಕೆ ಕಾರಣವಾಗಿದೆ.

ಮಾರ್ಚ್‌ ತಿಂಗಳಲ್ಲಿ ತೀವ್ರ ಕುಸಿತ ಕಂಡಿರುವ ಚಿನ್ನದ ದರ ತಿಂಗಳ ಅಂತ್ಯಕ್ಕಾಗುವಾಗ ಸ್ವಲ್ಪ ಚೇತರಿಸಿಕೊಂಡಿತ್ತು. ಆದರೆ, ಇಂದು ಮತ್ತೆ ಕುಸಿತ ಕಂಡಿದೆ. ಮಾರ್ಚಲ್ಲಿ ಚಿನ್ನದ ದರ ಈವರೆಗೆ ಶೇ 15ರಷ್ಟು ಕುಸಿತ ಕಂಡಿದೆ. ಇದೇ ಸಂದರ್ಭದಲ್ಲಿ ಫೆಬ್ರವರಿ 28ರಂದು ಆರಂಭವಾದ ಇಸ್ರೇಲ್- ಅಮೆರಿಕ ಮತ್ತು ಇರಾನ್ ನಡುವಿನ ಯುದ್ಧದ ಹಿನ್ನೆಲೆಯಲ್ಲಿ ಡಾಲರ್ ಬೆಲೆ ಶೇ 2ರಷ್ಟು ಏರಿಕೆ ಕಂಡಿದೆ.

ಅಮೆರಿಕದ ಕೇಂದ್ರೀಯ ಬ್ಯಾಂಕ್ ಆಗಿರುವ ಫೆಡರಲ್ ರಿಸರ್ವ ಹೊಸ ನಾಯಕತ್ವ ದರ ಕಡಿತಗಳನ್ನು ಮಾಡುವ ಕುರಿತಂತೆ ಇದ್ದ ನಿರೀಕ್ಷೆ ಹುಸಿಯಾಗಿದೆ. ಇದೂ ಚಿನ್ನದ ಬೆಲೆ ಕುಸಿತಕ್ಕೆ ಪ್ರಮುಖ ಕಾರಣವಾಗಿದೆ. ತೈಲ ಬೆಲೆಯಲ್ಲಿ ತೀವ್ರವಾದ ಏರಿಕೆಯಾಗಿ ಹಣದುಬ್ಬರದ ಕಳವಳದ ನಡುವೆ ಬಡ್ಡಿದರ ಕಡಿತ ಸಾಧ್ಯವಿಲ್ಲದ ಸ್ಥಿತಿ ಚಿನ್ನದ ಬೆಲೆ ಕುಸಿತಕ್ಕೆ ಕಾರಣವಾಗಿದೆ.

ಇಂದಿನ ಚಿನ್ನದ ದರ ಹೇಗಿದೆ?

ಮಾರ್ಚ್ 30ರಂದು ಸೋಮವಾರ ಬೆಂಗಳೂರಿನ ಮಾರುಕಟ್ಟೆಗಳಲ್ಲಿ 24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆ ಶನಿವಾರ ಸಂಜೆಯ ಬೆಲೆಗೆ ಹೋಲಿಸಿದರೆ ಪ್ರತಿ ಗ್ರಾಂಗೆ 81 ರೂ. ಕುಸಿತ ಕಂಡು ಹತ್ತು ಗ್ರಾಂ ಬೆಲೆ 1,47,280 ರೂ. ಗೆ ಬಂದು ನಿಂತಿದೆ. ಆಭರಣ ಚಿನ್ನವಾದ 22 ಕ್ಯಾರೆಟ್ ಬೆಲೆಯು ಪ್ರತಿ ಗ್ರಾಂಗೆ 75 ರೂ. ಕುಸಿದು ಹತ್ತು ಗ್ರಾಂಗೆ 1,35,000 ರೂ. ಗೆ ತಲುಪಿದೆ. 18 ಕ್ಯಾರೆಟ್ ಚಿನ್ನವು ಪ್ರತಿ ಗ್ರಾಂಗೆ 61 ರೂ. ಕುಸಿದು ಹತ್ತು ಗ್ರಾಂಗೆ 1,10,460ರೂ. ಗೆ ತಲುಪಿದೆ.

ಮಂಗಳೂರಿನಲ್ಲಿ ಚಿನ್ನದ ದರವೆಷ್ಟಿದೆ?

ಮಾರ್ಚ್ 30ರಂದು ಸೋಮವಾರ ಬೆಳಗಿನ 11 ಗಂಟೆಯ ವಹಿವಾಟಿನಲ್ಲಿ ಮಂಗಳೂರಿನಲ್ಲಿ ಚಿನ್ನದ ಬೆಲೆ ಮತ್ತೆ ಕುಸಿದಿದೆ.ಒಂದು ಗ್ರಾಂ 24 ಕ್ಯಾರೆಟ್ ಚಿನ್ನದ ದರ 14,728 (81) ರೂ. ನಷ್ಟಿದೆ. ಒಂದು ಗ್ರಾಂ 22 ಕ್ಯಾರೆಟ್ ಚಿನ್ನದ 13,500 (-75) ರೂ. ಮತ್ತು ಒಂದು ಗ್ರಾಂ 18 ಕ್ಯಾರೆಟ್ ಚಿನ್ನದ ದರ 11,046 (-61) ರೂ. ಬೆಲೆಗೆ ತಲುಪಿದೆ.

ಸ್ಥಿರವಾದ ಬೆಳ್ಳಿಯ ದರ

ಮಾರ್ಚ್‌ ಆರಂಭದಲ್ಲಿ ಹೆಚ್ಚು ಏರಿಳಿತ ಕಾಣದೆ ಸ್ಥಿರವಾಗಿದ್ದ ಬೆಳ್ಳಿ ದರ, ಮಾರ್ಚ್ 09ರ ನಂತರ ಕುಸಿತದ ಹಾದಿಯಲ್ಲಿತ್ತು. ಕಳೆದ ಸೋಮವಾರ ಪ್ರತಿ ಗ್ರಾಂಗೆ 15 ರೂ. ಕುಸಿತ ಕಂಡು ಪ್ರತಿ ಕೆಜಿಗೆ ಅತ್ಯಂತ ಕನಿಷ್ಠ ದರವಾದ 2,30,000 ರೂ. ದಾಖಲಿಸಿತ್ತು. ನಂತರ ಮಂಗಳವಾರ, ಬುಧವಾರ ಮತ್ತು ಗುರುವಾರ ಏರಿಕೆಕಂಡು 2,50,100 ರೂ.ಗೆ ಬಂದು ನಿಂತಿತ್ತು. ಗುರುವಾರ ಸಂಜೆ ಮತ್ತೆ ಕುಸಿದ ಬೆಳ್ಳಿಯ ದರ ಶುಕ್ರವಾರ ಕೆಜಿಗೆ 2,40,000 ರೂ.ಗೆ ಬಂದು ನಿಂತಿತ್ತು. ಶನಿವಾರ ಮತ್ತೆ ಗ್ರಾಂಗೆ 5 ರೂ. ಏರಿದ ಬೆಳ್ಳಿ ಪ್ರತಿ ಕೆಜಿಗೆ 2,45,000 ರೂ.ಗೆ ಬಂದು ತಲುಪಿದೆ. ಇಂದು ಸೋಮವಾರ ಬೆಳ್ಳಿಯ ಮೌಲ್ಯದಲ್ಲಿ ಏರಿಳಿತ ಕಾಣದೆ ಪ್ರತಿ ಕೆಜಿಗೆ 2,45,000 ರೂ. ನಲ್ಲಿ ಸ್ಥಿರವಾಗಿ ನಿಂತಿದೆ.

[t4b-ticker]
error: Content is protected !!