ಷೇರು ಮಾರುಕಟ್ಟೆ ಭಾರಿ ಪತನ | ಎರಡೇ ದಿನದಲ್ಲಿ ಕರಗಿತು 18.60 ಲಕ್ಷ ಕೋಟಿ ರೂ. ಸಂಪತ್ತು

Picture of Savistara

Savistara

Bureau Report

ನವದೆಹಲಿ: ಪಶ್ಚಿಮ ಏಷ್ಯಾ ಸಂಘರ್ಷದ ತೀವ್ರತೆ ಮತ್ತು ಕಚ್ಚಾ ತೈಲ ಬೆಲೆ ಏರಿಕೆಯಿಂದಾಗಿ ಭಾರತೀಯ ಷೇರು ಮಾರುಕಟ್ಟೆಯಲ್ಲಿ ಸತತ ಎರಡನೇ ದಿನವೂ ಭಾರಿ ಕುಸಿತ ಕಂಡುಬಂದಿದೆ. ಇದರಿಂದ ಹೂಡಿಕೆದಾರರ 18.60 ಲಕ್ಷ ಕೋಟಿ ರೂ. ಸಂಪತ್ತು ಕರಗಿದೆ. ಸೋಮವಾರ ಸೆನ್ಸ್ಕ್ಸ್ 1,635.67 5 (. 2.22) ಕುಸಿದು 71,947.55ಕ್ಕೆ ತಲುಪಿದೆ. ಕಳೆದ ಎರಡು ದಿನಗಳಲ್ಲಿ ಸೆನ್ಸೆಕ್ಸ್ ಒಟ್ಟು 3,325.9 ಅಂಕ ಕುಸಿದಿದೆ. ಫೆ. 28ರಿಂದ ಆರಂಭವಾದ ಪಶ್ಚಿಮ ಏಷ್ಯಾ ಬಿಕ್ಕಟ್ಟಿನ ಪರಿಣಾಮವಾಗಿ ಈ ತಿಂಗಳಲ್ಲಿ ಸೆನ್ಸೆಕ್ಸ್ ಒಟ್ಟು ಶೇ. 11.48ರಷ್ಟು ಕುಸಿದಿದೆ. ಬ್ರೆಂಟ್ ಕಚ್ಚಾ ತೈಲ ಬೆಲೆ ಶೇ. 2.18ರಷ್ಟು ಏರಿಕೆಯಾಗಿದ್ದು, ಪ್ರತಿ ಬ್ಯಾರೆಲ್‌ಗೆ 115.1 ಡಾಲರ್ ಆಗಿದೆ. ಮಾರ್ಚ್‌ನಲ್ಲೇ ವಿದೇಶಿ ಸಾಂಸ್ಥಿಕ ಹೂಡಿಕೆದಾರರು 1 ಲಕ್ಷ ಕೋಟಿ ರೂ.ಗೂ ಅಧಿಕ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ. ಬಿಎಸ್‌ಇ ಲಿಸ್ಟೆಡ್ ಕಂಪನಿಗಳ ಒಟ್ಟು ಮಾರುಕಟ್ಟೆ ಮೌಲ್ಯ 412.41 ಲಕ್ಷ ಕೋಟಿ ರೂ.ಗೆ ಇಳಿದಿದೆ.

[t4b-ticker]
error: Content is protected !!