ಎಲ್ಲವೂ ದುಬಾರಿ, ಜೇಬಿಗೆ ಕತ್ತರಿ |ನಾಳೆಯಿಂದ ನೀರು, ವಿದ್ಯುತ್, ಟೋಲ್ ಹೆಚ್ಚಳ ಹಲವು ಹಣಕಾಸು, ಬ್ಯಾಂಕಿಂಗ್ ನೀತಿಗಳೂ ಬದಲು | ಹೊಸ ಐಟಿ ಕಾಯಿದೆ ಜಾರಿಗೆ | ಜನತೆಗೆ ಏಪ್ರಿಲ್‌ ಶಾಕ್

Picture of Savistara

Savistara

Bureau Report

ಹೊಸ ಆರ್ಥಿಕ ವರ್ಷದ ಮೊದಲ ದಿನದಿಂದಲೇ (ಏಪ್ರಿಲ್ 1) ವಿದ್ಯುತ್, ಟೋಲ್ ಹಾಗೂ ಬೆಂಗಳೂರು ನಗರದಲ್ಲಿ ನೀರಿನ ದರ ಹೆಚ್ಚಳವಾಗುವುದರಿಂದ ಗ್ರಾಹಕ ರಿಗೆ ದರ ಏರಿಕೆಯ ನೇರ ಪರಿಣಾಮ ಬೀರಲಿದೆ.ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗವು (ಕೆಇಆರ್‌ಸಿ) ಸಾಕಷ್ಟು ಅಳೆದು ತೂಗಿ ಕೊನೆಗೂ ವಿದ್ಯುತ್ ದರವನ್ನು ಪರಿಷ್ಕರಿಸಿದ್ದು, ಮುಂಬರುವ ಹಣಕಾಸು ವರ್ಷದಲ್ಲಿ ಕೈಗಾರಿಕೆಗಳು ಮತ್ತು ವಾಣಿಜ್ಯ ಗ್ರಾಹಕರಿಗೆ ವಿದ್ಯುತ್ ದರ ಏರಿಕೆಯ ಬಿಸಿ ತಟ್ಟಲಿದೆ.

ರಾಜ್ಯದ ವಿದ್ಯುತ್ ವಿತರಣಾ ಕಂಪನಿಗಳಿಗೆ (ಎಸ್ಕಾಂ) ಹಿಂದಿನ ಹಣಕಾಸು ವರ್ಷದಲ್ಲಿ ಆದಾಯ ಖೋತಾ ಆಗಿದ್ದು, ವಿದ್ಯುತ್ ದರ ಹೆಚ್ಚಳದ ಮೂಲಕ ಈ ಆರ್ಥಿಕ ನಷ್ಟ ಸರಿದೂಗಿಸುವಂತೆ ಐದೂ ಎಸ್ಕಾಂಗಳು ಕೆಇಆರ್ ಸಿಗೆ ಪ್ರಸ್ತಾವ ಸಲ್ಲಿಸಿದ್ದವು. ಅಂತಿಮವಾಗಿ ಎಸ್ಕಾಂಗಳ ಒತ್ತಾಯಕ್ಕೆ ಮಣಿದಿರುವ ಕೆಇಆರ್‌ಸಿ, 2025-26ನೇ ಸಾಲಿಗೆ ಪೂರ್ವಾನ್ವಯವಾಗುವಂತೆ ವಿದ್ಯುತ್ ದರ ಪರಿಷ್ಕರಿಸಿ ಮಂಗಳವಾರ ಆದೇಶ ಹೊರಡಿಸಲಿದೆ.ಇನ್ನು, ರಾಜ್ಯದ ಟೋಲ್ ಪ್ಲಾಜಾಗಳಲ್ಲಿ ಶೇ.3ರಿಂದ 5ರಷ್ಟು ಟೋಲ್ ದರ ಏರಿಕೆಯಾಗಲಿದ್ದು, ಕಾರುಗಳಿಗೆ 5ರಿಂದ 10 ರೂ. ಟೋಲ್ ಹೆಚ್ಚಳವಾಗಲಿದೆ. ವಾಣಿಜ್ಯ ಬಳಕೆಯ ವಾಹನಗಳು 15ರಿಂದ 40 ರೂ. ಅಧಿಕ ಪಾವತಿಸಬೇಕಾಗುತ್ತದೆ. ಸಗಟು ಬೆಲೆ ಸೂಚ್ಯಂಕಕ್ಕೆ ಅನುಗುಣವಾಗಿ ಶುಲ್ಕ ಹೆಚ್ಚಳ ಮಾಡಲಾಗಿದೆ ಎಂದು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದ್ದಾರೆ. ಇನ್ನು, ಎನ್‌.ಎಚ್‌.ಎಐ ತನ್ನ

ವಾರ್ಷಿಕ ಪಾಸ್ ದರವನ್ನು 2026-27ನೇ ಸಾಲಿಗೆ 75 ರೂ. ಹೆಚ್ಚಳ ಮಾಡಿ ಅಧಿಸೂಚನೆ ಹೊರಡಿಸಿದೆ. ಇದು ಕೂಡ ಏಪ್ರಿಲ್ 1ರಿಂದ ಜಾರಿಗೆ ಬರಲಿದೆ. ವಾರ್ಷಿಕ ಪಾಸ್ ದರವು 3000 ರೂ. ಇದ್ದುದು 3075 ರೂ.ಗೆ ಏರಿಕೆಯಾಗಲಿದೆ.ಮತ್ತೊಂದೆಡೆ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಏ. 1ರಿಂದ ಅನ್ವಯ ವಾಗುವಂತೆ ನೀರಿನ ದರವನ್ನು ಶೇ 3ರಷ್ಟು ಹೆಚ್ಚಳ ಮಾಡಲಿದ್ದು, ಇದರಿಂದ ಬೆಂಗಳೂರಿಗರಿಗೆ ಮತ್ತೊಂದು ಹೊರೆ ಬೀಳಲಿದೆ.

ಏ.1 ರಿಂದ ಬೇರೇನು ಬದಲಾವಣೆ?

# ಹೋಟೆಲ್, ರೆಸ್ಟೋರೆಂಟ್ ಸೇರಿ ಬಿಲ್ ಪಾವತಿ 1 ಲಕ್ಷ ರೂ. ದಾಟಿದರೆ ಪ್ಯಾನ್ ಕಡ್ಡಾಯ

# ಶೇ.50ರಷ್ಟು ಎಚ್‌ಆರ್‌ಎ ಸೌಲಭ್ಯದ ನಗರಗಳ ಪಟ್ಟಿಗೆ ಬೆಂಗಳೂರು ಸೇರಿ ಇನ್ನೂ 4 ನಗರಗಳು ಸೇರ್ಪಡೆ

# ರೈಲು ಹೊರಡುವ 8 ಗಂಟೆ ಮೊದಲು ಟಿಕೆಟ್ ರದ್ದುಪಡಿಸಿದರೆ ರೀಫಂಡ್ ಸಿಗುವುದಿಲ್ಲ

# ಉದ್ಯೋಗಿಯ ಮೂಲ ವೇತನವು ಅವರ ಒಟ್ಟು ವೇತನದಲ್ಲಿ (ಸಿಟಿಸಿ) ಕನಿಷ್ಠ ಶೇ.50ರಷ್ಟು ಆಗಿರಬೇಕು ಎಂಬ ನಿಯಮ ದೊಂದಿಗೆ ಹೊಸ ಕಾರ್ಮಿಕ ಸಂಹಿತೆ ಜಾರಿ

# ಟೋಲ್‌ಗಳಲ್ಲಿ ನಗದು ಪಾವತಿ ಸ್ಥಗಿತ

[t4b-ticker]
error: Content is protected !!