ನಮ್ಮ ನಾಯಕರನ್ನು ಕೊಂದರೆ, ಅಮೆರಿಕದ ಕಂಪನಿಗಳೇ ನಮ್ಮ ಮಿಸೈಲ್‌ಗಳ ಗುರಿ: ಇರಾನ್

Picture of Savistara

Savistara

Bureau Report

ಟೆಹರಾನ್‌: ‘ಇರಾನ್‌ನ ಹೆಚ್ಚು ನಾಯಕರ ಹತ್ಯೆ ಆದರೆ,ಅಮೆರಿಕದ ತಂತ್ರಜ್ಞಾನ ಸಂಸ್ಥೆಗಳಾದ ಆ್ಯಪಲ್, ಗೂಗಲ್, ಮೆಟಾ ಸಂಸ್ಥೆಗಳ ಕೊಲ್ಲಿ ರಾಷ್ಟ್ರಗಳಲ್ಲಿರುವ ಅವುಗಳ ಕೇಂದ್ರಗಳ ಮೇಲೆ ದಾಳಿ ನಡೆಸಲಾಗುವುದು’ ಎಂದು ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ಸ್ ಕೋರ್ (ಐಆರ್‌ಜಿಸಿ) ಎಚ್ಚರಿಕೆ ನೀಡಿದೆ.

‘ಇರಾನ್‌ನ ಪ್ರತಿಯೊಂದು ಹತ್ಯೆಗೆ ಪ್ರತಿಯಾಗಿ ಟೆಹರಾನ್‌ ಸ್ಥಳೀಯ ಕಾಲಮಾನ ಬುಧವಾರ (ಏ.1) ಬೆಳಿಗ್ಗೆ 8 ಗಂಟೆಯಿಂದ ಅಮೆರಿಕದ ಕಂಪನಿಗಳ ಮೇಲೆ ದಾಳಿ ನಡೆಸಲಾಗುವುದು. ತಮ್ಮ ಜೀವ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಈ ಸಂಸ್ಥೆಗಳಲ್ಲಿ ಕೆಲಸ ಮಾಡುವ ನೌಕರರು ಕೂಡಲೇ ಅಲ್ಲಿಂದ ತೆರಳಬೇಕು’ ಎಂದು ಐಆರ್‌ಜಿಸಿ ಬಿಡುಗಡೆಗೊಳಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.’ಇರಾನ್‌ನ ಅತ್ಯುನ್ನತ ನಾಯಕರನ್ನು ಗುರಿಯಾಗಿರಿಸಿ ದಾಳಿ ನಡೆಸದಂತೆ ಅಮೆರಿಕ ಸರ್ಕಾರ, ಅಲ್ಲಿನ ತಂತ್ರಜ್ಞಾನ ಸಂಸ್ಥೆಗಳಿಗೆ ಈ ಹಿಂದೆ ನೀಡಿದ್ದ ಎಚ್ಚರಿಕೆಯನ್ನು ನಿರ್ಲಕ್ಷಿಸಲಾಗಿದೆ. ಈ ಸಂಸ್ಥೆಗಳೇ ನಮ್ಮ ನಾಯಕರ ಹತ್ಯೆಯ ಗುರಿಯನ್ನು ವಿನ್ಯಾಸಗೊಳಿಸಿ, ಪತ್ತೆಹಚ್ಚುವಲ್ಲಿ ಮುಖ್ಯ ಕೆಲಸ ಮಾಡುತ್ತಿವೆ. ಹೀಗಾಗಿ, ಇಂತಹ ಸಂಸ್ಥೆಗಳಿಗೆ ತಕ್ಕ ಪಾಠ ಕಲಿಸಲಾಗುವುದು’ ಎಂದು ತಿಳಿಸಿದೆ.ಯಾವ ಕಂಪನಿಗಳು ಟಾರ್ಗೆಟ್: ಗೂಗಲ್, ಡೆಲ್ ಟೆಕ್ನಾಲಜೀಸ್,ಮೈಕ್ರೋಸಾಫ್ಟ್, ಎಚ್‌ಪಿ, ಸಿಸ್ಕೊ, ಇಂಟೆಲ್, ಒರಾಕಲ್, ಆ್ಯಪಲ್, ಮೆಟಾ ಪ್ಲಾಟ್‌ಫಾರ್ಮ್‌ಗಳು (ಫೇಸ್‌ಬುಕ್, ವಾಟ್ಸ್ಆ್ಯಪ್, ಇನ್‌ಸ್ಟಾಗ್ರಾಮ್), ಐಬಿಎಂ, ಜೆ.ಪಿ. ಮಾರ್ಗನ್, ಟೆಸ್ಲಾ, ಜನರಲ್ ಎಲೆಕ್ನಿಕ್, ಬೋಯಿಂಗ್.

News Updates

ಮಂಗಳೂರು : ಬೈಕಂಪಾಡಿ, ಕೂಳೂರು ಜಂಕ್ಷನ್ ಬಳಿ ಅಂಡರ್ ಪಾಸ್ ನಿರ್ಮಾಣಕ್ಕೆ ಕೇಂದ್ರ ಸರ್ಕಾರದಿಂದ ₹11.63 ಕೋ ರೂ. ಅಧಿಕ ಅನುದಾನ ಮಂಜೂರು | ದಕ್ಷಿಣ ಕನ್ನಡ ಜಿಲ್ಲೆಯ ಹೆದ್ದಾರಿಗಳ ಸುರಕ್ಷತೆ ಮತ್ತು ಸುಗಮ ಸಂಚಾರಕ್ಕೆ ನಮ್ಮ ಸರ್ಕಾರ ಬದ್ಧವಾಗಿದೆ : ಸಂಸದ ಕ್ಯಾ.ಬ್ರಿಜೇಶ್ ಚೌಟ

[t4b-ticker]
error: Content is protected !!