ಕ್ರಿಕೆಟ್ ಬಗ್ಗೆ ಬೇಸರವಿಲ್ಲ, ಆದರೆ… ನಿವೃತ್ತಿ ಕುರಿತು ಮೌನ ಮುರಿದ ಶಮಿ

Picture of Savistara

Savistara

Bureau Report

2026ರ ಐಪಿಎಲ್ ಆರಂಭವಾಗಿದೆ. ಈ ನಡುವೆ ಭಾರತ ತಂಡದ ಸ್ಟಾ‌ರ್ ವೇಗಿ ಮೊಹಮ್ಮದ್ ಶಮಿ ಅವರು ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಲಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿದೆ. ಈ ಕುರಿತು ಶಮಿ ಸ್ಪಷ್ಟಣೆ ನೀಡಿದ್ದಾರೆ.

35 ವರ್ಷದ ಶಮಿ ಅವರು ಭಾರತ ತಂಡದ ಅತ್ಯುತ್ತಮ ಬೌಲರ್‌ಗಳಲ್ಲಿ ಒಬ್ಬರಾಗಿದ್ದಾರೆ. 2023ರ ಏಕದಿನ ವಿಶ್ವಕಪ್‌ನಲ್ಲಿ ಭಾರತದ ಪರ ಉತ್ತಮ ಪ್ರದರ್ಶನ ನೀಡಿದ್ದರು. ಆದರೆ ಭಾರತ ತಂಡ ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋತಿತ್ತು. ಅಲ್ಲದೇ ಶಮಿ 2025ರ ಚಾಂಪಿಯನ್ಸ್ ಟ್ರೋಫಿಯ ವಿಜೇತ ತಂಡದ ಭಾಗವಾಗಿದ್ದರು.ಸಂದರ್ಶನವೊಂದರಲ್ಲಿ ನಿವೃತ್ತಿಯ ಬಗ್ಗೆ ಮಾತನಾಡಿರುವ ವೇಗಿ ಮೊಹಮ್ಮದ ಶಮಿ ಅವರು ‘ನನಗೆ ಯಾವಾಗ ಕ್ರಿಕೆಟ್ ಬಗ್ಗೆ ಬೇಸರವಾಗುತ್ತದೆಯೋ ಆಗ ಮಾತ್ರ ನಾನು ಕ್ರಿಕೆಟ್ ತೊರೆಯುತ್ತೇನೆ. ಈ ವರೆಗೆ ನನಗೆ ಬೇಸರವಾಗಿಲ್ಲ. ನಾನು ಸೋಮಾರಿಯಲ್ಲ. ಉತ್ತಮವಾಗಿ ಆಟವಾಡುತ್ತೇನೆ. ಅದರಂತೆ ಉತ್ತಮ ಫಲಿತಾಂಶವೂ ಇದೆ’ ಎಂದಿದ್ದಾರೆ.

‘ನಾನೊಬ್ಬ ಬೌಲರ್ ಆಗಿದ್ದೇನೆ. ನನ್ನ ಸಂಪೂರ್ಣ ಶಕ್ತಿಯನ್ನು ಬಳಸಿ ಆಟವಾಡುತ್ತೇನೆ. ತಂಡವು ನನ್ನ ಮೇಲೆ ಇರಿಸಿರುವ ಭರವಸೆಯನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತೇನೆ. ವಿಶ್ರಾಂತಿ ಎಂದಿಗೂ ಅದೃಷ್ಟವನ್ನು ಬದಲಾಯಿಸಲು ಸಾಧ್ಯವಿಲ್ಲ. ಹಾಗಾಗಿ ಲಖನೌ ತಂಡ ನನ್ನ ಮೇಲೆ ಇಟ್ಟಿರುವ ನಂಬಿಕೆಯನ್ನು ಹುಸಿ ಮಾಡುವುದಿಲ್ಲ’ ಎಂದು ಹೇಳಿದ್ದಾರೆ.

ಮೊಹಮ್ಮದ್ ಶಮಿ ಅವರು 2025-26ರ ದೇಶೀಯ ಪಂದ್ಯಗಳಲ್ಲಿ ಬಂಗಾಳ ಪರ 67 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಶಮಿ ಅವರು ಪ್ರಸ್ತುತ 2026 ಐಪಿಎಲ್‌ನಲ್ಲಿ ಲಖನೌ ಸೂಪರ್ ಜೈಂಟ್ಸ್ ಪರ ಆಡಲಿದ್ದಾರೆ.

News Updates

ಮಂಗಳೂರು : ಬೈಕಂಪಾಡಿ, ಕೂಳೂರು ಜಂಕ್ಷನ್ ಬಳಿ ಅಂಡರ್ ಪಾಸ್ ನಿರ್ಮಾಣಕ್ಕೆ ಕೇಂದ್ರ ಸರ್ಕಾರದಿಂದ ₹11.63 ಕೋ ರೂ. ಅಧಿಕ ಅನುದಾನ ಮಂಜೂರು | ದಕ್ಷಿಣ ಕನ್ನಡ ಜಿಲ್ಲೆಯ ಹೆದ್ದಾರಿಗಳ ಸುರಕ್ಷತೆ ಮತ್ತು ಸುಗಮ ಸಂಚಾರಕ್ಕೆ ನಮ್ಮ ಸರ್ಕಾರ ಬದ್ಧವಾಗಿದೆ : ಸಂಸದ ಕ್ಯಾ.ಬ್ರಿಜೇಶ್ ಚೌಟ

[t4b-ticker]
error: Content is protected !!