ಅರ್ಜೆಂಟೀನಾ ಅಭಿಮಾನಿಗಳ ಮುಂದೆ ಕಣ್ಣೀರಿಟ್ಟ ಲಿಯೋನೆಲ್‌ ಮೆಸ್ಸಿ!

Picture of Savistara

Savistara

Bureau Report

ತವರಿನಲ್ಲಿ ದಿಗ್ಗಜ ಫುಟ್ಬಾಲ್ ತಾರೆಯ ವಿದಾಯದ ಪಂದ್ಯ

ಬ್ಯೂನಸ್ ಐರಿಸ್: ವಿಶ್ವ ಫುಟ್ಬಾಲ್ ಇತಿಹಾಸದ ಶ್ರೇಷ್ಠಆಟಗಾರರಲ್ಲಿ ಒಬ್ಬರಾದ ಲಿಯೋನೆಲ್ ಮೆಸ್ಸಿ, ಅರ್ಜೆಂಟೀನಾ ನೆಲದಲ್ಲಿ ತಮ್ಮ ಕೊನೆಯ ಅಂತರಾಷ್ಟ್ರೀಯ ಪಂದ್ಯವನ್ನಾಡುವ ಮೂಲಕ ಭಾವುಕ ವಿದಾಯ ಹೇಳಿದ್ದಾರೆ.

ಮಂಗಳವಾರ ಇಲ್ಲಿನ ಐತಿಹಾಸಿಕ ‘ಲಾ ಬೊಂಬೊನೆರಾ’ ಕ್ರೀಡಾಂಗಣದಲ್ಲಿ ನಡೆದ ಜಾಂಬಿಯಾ ವಿರುದ್ಧದ ಸೌಹಾರ್ದ ಪಂದ್ಯದಲ್ಲಿ ಮೆಸ್ಸಿ ಕೊನೆಯ ಬಾರಿಗೆ ತಮ್ಮ ತವರಿನ ಅಭಿಮಾನಿಗಳ ಮುಂದೆ ಕಣಕ್ಕಿಳಿದರು.

ಭಾವೋದ್ವೇಗದ ಕ್ಷಣಗಳು

ಪಂದ್ಯ ಆರಂಭಕ್ಕೂ ಮುನ್ನ ರಾಷ್ಟ್ರಗೀತೆ ಮೊಳಗುತ್ತಿದ್ದಂತೆ 38 ವರ್ಷದ ಮೆಸ್ಸಿ ಭಾವುಕರಾದರು. ಕಿಕ್ಕಿರಿದು ತುಂಬಿದ್ದ ಕ್ರೀಡಾಂಗಣದಲ್ಲಿ ಅಭಿಮಾನಿಗಳು ಮೆಸ್ಸಿ ಪರವಾಗಿ ಘೋಷಣೆ ಕೂಗುತ್ತಿದ್ದಾಗ, ತಮ್ಮ ಕಣ್ಣೀರನ್ನು ತಡೆಯಲು ಮೆಸ್ಸಿ ಹರಸಾಹಸ ಪಡುತ್ತಿರುವುದು ಕಂಡುಬಂತು. ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ಸಖತ್ ವೈರಲ್ ಆಗಿದ್ದು, ಮೆಸ್ಸಿಯ ಈ ಭಾವನಾತ್ಮಕ ಕ್ಷಣ ಕಂಡು ಫುಟ್ಬಾಲ್ ಪ್ರೇಮಿಗಳು ಕೂಡ ಭಾವುಕರಾಗಿದ್ದಾರೆ.

ಮುಂಬರುವ ವಿಶ್ವಕಪ್ ಸಿದ್ಧತೆಯ ಭಾಗವಾಗಿ ನಡೆದ ಈ ಪಂದ್ಯದಲ್ಲಿ ಅರ್ಜೆಂಟೀನಾ 5-0 ಗೋಲುಗಳ ಅಂತರದಿಂದ ಜಾಂಬಿಯಾ ತಂಡವನ್ನು ಮಣ್ಣುಮುಕ್ಕಿಸಿತು.

ಮೆಸ್ಸಿ ಮ್ಯಾಜಿಕ್: ಪಂದ್ಯದ ಆರಂಭದಲ್ಲೇ ಲೂಲಿಯನ್ಅಲ್ವಾರೆಜ್ ಅವರಿಗೆ ಗೋಲು ಗಳಿಸಲು ನೆರವಾದ ಮೆಸ್ಸಿ, ಮೊದಲಾರ್ಧದ ಅಂತ್ಯಕ್ಕೆ ತಾವೇ ಒಂದು ಅದ್ಭುತ ಗೋಲು ಬಾರಿಸಿದರು. ಇದು ಅವರ ವೃತ್ತಿಜೀವನದ 902ನೇ ಗೋಲು ಹಾಗೂ ಅರ್ಜೆಂಟೀನಾ ಪರ 116ನೇ ಗೋಲಾಗಿದೆ.

ಆರನೇ ವಿಶ್ವಕಪ್‌ಗೆ ಸಜ್ಜು

ಜೂನ್‌ನಲ್ಲಿ ನಡೆಯಲಿರುವ ವಿಶ್ವಕಪ್ ಟೂರ್ನಿಯಲ್ಲಿ ಅರ್ಜೆಂಟೀನಾ ತಂಡವು ಅಲ್ಲೀರಿಯಾ, ಆಸ್ಟ್ರಿಯಾ ಮತ್ತು ಜೋರ್ಡಾನ್ ತಂಡಗಳೊಂದಿಗೆ ‘ಗ್ರೂಪ್ ಜೆ’ ನಲ್ಲಿ ಸ್ಥಾನ ಪಡೆದಿದೆ. ಸತತ ಎರಡನೇ ಬಾರಿಗೆ ವಿಶ್ವಕಪ್ ಗೆಲ್ಲುವ ಗುರಿ ಹೊಂದಿರುವ ಅರ್ಜೆಂಟೀನಾವನ್ನು ಮೆಸ್ಸಿ ಮುನ್ನಡೆಸಲಿದ್ದಾರೆ. ಇದು ಮೆಸ್ಸಿ ಪಾಲಿಗೆ ದಾಖಲೆಯ ಆರನೇ ವಿಶ್ವಕಪ್ ಟೂರ್ನಿಯಾಗಲಿದೆ.

News Updates

ಮಂಗಳೂರು : ಬೈಕಂಪಾಡಿ, ಕೂಳೂರು ಜಂಕ್ಷನ್ ಬಳಿ ಅಂಡರ್ ಪಾಸ್ ನಿರ್ಮಾಣಕ್ಕೆ ಕೇಂದ್ರ ಸರ್ಕಾರದಿಂದ ₹11.63 ಕೋ ರೂ. ಅಧಿಕ ಅನುದಾನ ಮಂಜೂರು | ದಕ್ಷಿಣ ಕನ್ನಡ ಜಿಲ್ಲೆಯ ಹೆದ್ದಾರಿಗಳ ಸುರಕ್ಷತೆ ಮತ್ತು ಸುಗಮ ಸಂಚಾರಕ್ಕೆ ನಮ್ಮ ಸರ್ಕಾರ ಬದ್ಧವಾಗಿದೆ : ಸಂಸದ ಕ್ಯಾ.ಬ್ರಿಜೇಶ್ ಚೌಟ

[t4b-ticker]
error: Content is protected !!