ಪುತ್ತೂರು: 2026 ಎಪ್ರಿಲ್ 1ರಿಂದ ಜನಗಣತಿ ಆರಂಭಗೊಂಡಿದೆ. ಇದರೊಂದಿಗೆ ಡಿಜಿಟಲ್ ಜನಗಣತಿಯನ್ನು ಇದೇ ಮೊದಲ ಬಾರಿಗೆ ದೇಶದಲ್ಲಿ ಪರಿಚಯಿಸಲಾಗಿದ್ದು, ಆನ್ ಲೈನ್ ಮೂಲಕ ಜನರು ತಮ್ಮ ವಿವರವನ್ನು ಭರ್ತಿ ಮಾಡಬಹುದಾಗಿದೆ.
ಸರಕಾರದ ಅಧಿಕೃತ ಜಾಲತಾಣದಲ್ಲಿ ಜನರು ತಮ್ಮ ಮಾಹಿತಿಯನ್ನು ಸಲ್ಲಿಸಬೇಕು. ಮಾಹಿತಿ ಸಲ್ಲಿಕೆಯ ಕುರಿತು ದೊರೆಯುವ ಐಡಿ ಯನ್ನು ಗಣತಿದಾರರು ಮನೆಗೆ ಬಂದಾಗ ತೋರಿಸುವುದು ಕಡ್ಡಾಯವಾಗಿದೆ. ಇನ್ನು ಮನೆಯಲ್ಲಿಯೇ ಆನ್ ಲೈನ್ ಮೂಲಕ ಸುಲಭವಾಗಿ ಸ್ವಯಂ ಜನಗಣತಿ ಮಾಡುವುದು ಹೇಗೆ ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ.
ಸ್ಟೆಪ್ 1:ಮೊದಲ ಹಂತದಲ್ಲಿ ಸರಕಾರದ ಅಧಿಕೃತ ಜಾಲತಾಣವಾದ https://se.census.gov.in/ ಜಾಲತಾಣಕ್ಕೆ ಭೇಟಿ ನೀಡಿ ಮುಖಪುಟದಲ್ಲಿ ನಿಮ್ಮ ರಾಜ್ಯವನ್ನು ಆಯ್ಕೆ ಮಾಡಿ. ಅಲ್ಲಿರುವ ಕ್ಯಾಪ್ಟನ್ ನಮೂದಿಸಿರಿ. ಬಳಿಕ ವೆರಿಫೈ & ಪ್ರೊಸೀಡ್ ಕ್ಲಿಕ್ ಮಾಡಿ.
ಸ್ಟೆಪ್ 2:’Self-Enumeration (HLO) Login’ & 3. ಮನೆಯ ಮುಖ್ಯಸ್ಥರ (ರೇಶನ್ ಕಾರ್ಡ್‌ನಲ್ಲಿರುವಂತೆ) ಹೆಸರು, ಮೊಬೈಲ್ ಸಂಖ್ಯೆ ಮತ್ತು ಇ-ಮೇಲ್ ವಿಳಾಸ ಹಾಕಿ Verify & Proceed’ ..
ಸ್ಟೆಪ್ 3:Language Selection and OTP Verification’ ತೆರೆಯುತ್ತದೆ. ನೀವು ಲಾಗಿನ್ ಮಾಡಲು ಬಳಸಿರುವ ಮೊಬೈಲ್ ಸಂಖ್ಯೆಗೆ ಒಟಿಪಿ ಬಂದಿರುತ್ತದೆ. ಒಟಿಪಿಯನ್ನು ನಮೂದಿಸಿ ಲಾಗಿನ್ ಮಾಡಿರಿ. ಜತೆಗೆ ನಿಮ್ಮ ಭಾಷೆಯನ್ನು ಆಯ್ಕೆ ಮಾಡಿರಿ
ಸ್ಟೆಪ್ 4:ಬಳಿಕ ಮನೆಪಟ್ಟಿ ಕಾರ್ಯಾಚರಣೆಗಳು – ಸ್ವಯಂ-ಗಣತಿ (SE)’ ಪುಟ ತೆರೆಯುತ್ತದೆ. ಈ ಪುಟದಲ್ಲಿ ಒಟ್ಟು 6 ವಿಭಾಗ ಇರುತ್ತದೆ. ಪ್ರತಿ ವಿಭಾಗದ ಮಾಹಿತಿಯನ್ನು ಭರ್ತಿ ಮಾಡಬೇಕು. ಮೊದಲಿಗೆ ಸ್ವ ವಿವರಗಳು ವಿಭಾಗದಿಂದ ಆರಂಭಿಸಿ ಜನಗಣತಿ ಮನೆ ವಿವರಗಳು, ಸಾಮಾನ್ಯ ಮಾಹಿತಿ, ಸೌಲಭ್ಯಗಳು ಹಾಗೂ ಸ್ವತ್ತುಗಳು ವಿಭಾಗದ ಮಾಹಿತಿಯನ್ನು ಭರ್ತಿ ಮಾಡಿರಿ.
ಸ್ಟೆಪ್ 5:ಎಲ್ಲ ಮಾಹಿತಿಯನ್ನು ಭರ್ತಿ ಮಾಡಿದ ನಂತರ ತಿದ್ದುಪಡಿಗಾಗಿ ಹಿಂತಿರುಗಿ ಡ್ರಾಫ್ಟ್ ಆಗಿ ಉಳಿಸಿ ಮತ್ತು ‘ಧೃಢೀಕರಿಸಿ’ ಆಯ್ಕೆಗಳಿರುತ್ತವೆ. ಮಾಹಿತಿ ಸರಿ ಇದ್ದಲ್ಲಿ ಧೃಢೀಕರಿಸಿ ಆಯ್ಕೆಯನ್ನು ಕ್ಲಿಕ್ ಮಾಡಿರಿ.
ಸ್ಟೆಪ್ 6:ಎಲ್ಲಾ ಮಾಹಿತಿ ಭರ್ತಿಯಾದ ಬಳಿಕ ‘ಸ್ವಯಂ ಗಣತಿಯ ಐಡಿ’ ಲಭ್ಯವಾಗುತ್ತದೆ. ಈ ಐಡಿಯನ್ನು ಒಂದು ಕಡೆ ಸೇವ್ ಮಾಡಿ ಇಟ್ಟುಕೊಳ್ಳಿ. ಏಪ್ರಿಲ್ 15ರ ನಂತರ ಗಣತಿದಾರರು ಮನೆಗೆ ಬಂದಾಗ ಐಡಿ ತೋರಿಸುವುದು ಕಡ್ಡಾಯವಾಗಿರುತ್ತದೆ.
2 ಹಂತದಲ್ಲಿ ನಡೆಯುವ ಜನಗಣತಿ:
2026 ಏಪ್ರಿಲ್‌ನಿಂದ ಸೆಪ್ಟೆಂಬರ್ ವರೆಗೆ ಮೊದಲ 6 ತಿಂಗಳು ಜನಗಣತಿಯ ಮೊದಲ ಹಂತವಾಗಿರುತ್ತದೆ. ಈ ಅವಧಿಯಲ್ಲಿ ಆನ್‌ಲೈನ್ ಮೂಲಕ ಸ್ವಯಂ ಗಣತಿ, ವಸತಿ, ಆಸ್ತಿ ಹಾಗೂ ಸೌಲಭ್ಯಗಳ ಮಾಹಿತಿಯನ್ನು ಸಂಗ್ರಹಿಸಲಾಗುತ್ತದೆ. ಬಳಿಕ 2ನೇ ಹಂತದ ಗಣತಿಯು 2027ರ ಫೆಬ್ರವರಿಯಿಂದ ಆರಂಭವಾಗಲಿದೆ. ಈ ಅವಧಿಯಲ್ಲಿ ಜಾತಿ ಗಣತಿ ಮಾಡಲಾಗುತ್ತದೆ. ಇದರಲ್ಲಿ ಮುಖ್ಯವಾಗಿ ಜನಸಂಖ್ಯೆ, ಸಾಮಾಜಿಕ, ಆರ್ಥಿಕ, ಶಿಕ್ಷಣ, ವಲಸೆ ಸೇರಿದಂತೆ ಇತರೆ ಮಾಹಿತಿಗಳನ್ನು ಪ್ರತಿಯೊಬ್ಬ ವ್ಯಕ್ತಿಯಿಂದ ಸಂಗ್ರಹಿಸಲಾಗುತ್ತದೆ. ದೇಶದ ಜನರ ಸ್ಥಾನಮಾನ ಮತ್ತು ಸಂಖ್ಯೆಯನ್ನು ತಿಳಿಯುವ ಉದ್ದೇಶದಿಂದ ಪ್ರತೀ 10 ವರ್ಷಕ್ಕೊಮ್ಮೆ ಜನಗಣತಿಯನ್ನು ನಡೆಸಲಾಗುತ್ತದೆ. ದೇಶದ ಮೊದಲ ಜನಗಣತಿ
1951ರಲ್ಲಿ ನಡೆದಿತ್ತು. ಆ ಬಳಿಕ 1961ರಲ್ಲಿ, 1971, 1981 1991,2001,7ನೇ ಜನಗಣತಿ 2011, 8ನೇ ಜನಗಣತಿಯೂ 2021ರಲ್ಲಿ ಕೋವಿಡ್ ಕಾರಣದಿಂದ ನಡೆದಿರಲಿಲ್ಲ. 8ನೇ ಜನಗಣತಿಯನ್ನು 2026ರಲ್ಲಿ ನಡೆಸಲಾಗುತ್ತಿದೆ. ಸ್ವಾತಂತ್ರ್ಯ ಪೂರ್ವದ1872,1881, 1891, 1901,1911,1921,1931, ಮತ್ತು 1941ರಲ್ಲಿ ಜನಗಣತಿಯನ್ನು ನಡೆಸಲಾಗಿತ್ತು.














































