ತಮಿಳುನಾಡು ಚುನಾವಣೆ ಸಮೀಕ್ಷೆ: DMK ಭರ್ಜರಿ ಭೇಟೆ; ವಿಜಯ್ ಟಿವಿಕೆ ಅಲ್ಪತೃಪ್ತ, ADMK ಅತೃಪ್ತ! ಯಾರಿಗೆಷ್ಟು ಸ್ಥಾನ?

Picture of Savistara

Savistara

Bureau Report

ಚೆನ್ನೈ: ಏಪ್ರಿಲ್‌ನಲ್ಲಿ ನಡೆಯಲಿರುವ ತಮಿಳುನಾಡು ವಿಧಾನಸಭಾ ಚುನಾವಣೆಯ ಸಮೀಕ್ಷೆ ಹೊರಬಿದ್ದಿದ್ದೆ. ಲೋಕ ಪೋಲ್‌ ನಡೆಸಿದ ಚುನಾವಣಾ ಪೂರ್ವ ಸಮೀಕ್ಷೆಯು ಎಂ.ಕೆ. ಸ್ಟಾಲಿನ್ ನೇತೃತ್ವದ ಡಿಎಂಕೆ ಮೈತ್ರಿಕೂಟ ಮತ್ತೆ ಅಧಿಕಾರಕ್ಕೆ ಬರುವ ಸಾಧ್ಯತೆಯಿದೆ ಎಂದು ಭವಿಷ್ಯ ನುಡಿದಿದೆ.

ರಾಜಕೀಯದಲ್ಲಿ 2026ರ ವಿಧಾನಸಭಾ ಚುನಾವಣೆಯ ಕಾವು ಈಗಿನಿಂದಲೇ ಶುರುವಾಗಿದೆ. ಚುನಾವಣಾ ಪೂರ್ವ ಸಮೀಕ್ಷೆ ನಡೆಸುವ ‘ಲೋಕ ಪೋಲ್’ ಸಂಸ್ಥೆಯು ಇತ್ತೀಚಿನ ಸಮೀಕ್ಷಾ ವರದಿಯನ್ನು ಬುಧವಾರ ಬಿಡುಗಡೆ ಮಾಡಿದೆ. ಆಡಳಿತ ಪಕ್ಷವಾದ ಡಿಎಂಕೆ ಭರ್ಜರಿ ಗೆಲುವು ಸಾಧಿಸಲಿದ್ದು, ವಿಜಯ್ ಟಿವಿಕೆ ಬೆರಳೆಣಿಕೆ ಸ್ಥಾನಗಳೊಂದಿಗೆ ಅಲ್ಪತೃಪ್ತವಾಗಲಿದೆ. ಇನ್ನೂ ವಿರೋಧ ಪಕ್ಷ ಎಡಿಎಂಕೆ (AIADMK) ಕಡಿಮೆ ಸ್ಥಾನಗಳಿಸಲಿದೆ ಎಂದು ಹೇಳಿದೆ.

Advertisement

ಸಮೀಕ್ಷೆಯ ಪ್ರಕಾರ, ಆಡಳಿತಾರೂಢ ಡಿಎಂಕೆ ಮೈತ್ರಿಕೂಟವು ಒಟ್ಟು 234 ಸ್ಥಾನಗಳ ಪೈಕಿ 181 ರಿಂದ 189 ಸ್ಥಾನಗಳನ್ನು ಗೆಲ್ಲುವ ಮೂಲಕ ಸ್ಪಷ್ಟ ಬಹುಮತದೊಂದಿಗೆ ಅಧಿಕಾರ ಉಳಿಸಿಕೊಳ್ಳಲಿದೆ. ಈ ಮೈತ್ರಿಕೂಟವು ಶೇ. 40.1 ರಷ್ಟು ಮತ ಹಂಚಿಕೆಯನ್ನು ಪಡೆಯುವ ಅಂದಾಜಿದೆ.

Advertisement

ಎಡಿಎಂಕೆಗೆ ಹಿನ್ನಡೆ!

Advertisement

ಪ್ರತಿಪಕ್ಷವಾದ ಎಡಿಎಂಕೆ ಮೈತ್ರಿಕೂಟವು ಕೇವಲ 38 ರಿಂದ 42 ಸ್ಥಾನಗಳಿಗೆ ತೃಪ್ತಿಪಟ್ಟುಕೊಳ್ಳಬೇಕಾಗಬಹುದು ಎಂದು ಸಮೀಕ್ಷೆ ಹೇಳಿದೆ. ಎಡಿಎಂಕೆ ಮೈತ್ರಿಕೂಟದ ಮತ ಹಂಚಿಕೆಯು ಶೇ. 29 ಕ್ಕೆ ಕುಸಿಯುವ ಸಾಧ್ಯತೆಯಿದೆ.

Advertisement

ದಳಪತಿ ವಿಜಯ್ ಅವರ ಟಿವಿಕೆ ಎಂಟ್ರಿ

Advertisement

ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ದಳಪತಿ ವಿಜಯ್ ಅವರ ಹೊಸ ಪಕ್ಷ ‘ತಮಿಳಗ ವೆಟ್ರಿ ಕಳಗಂ’ (ಟಿವಿಕೆ) ಮೊದಲ ಚುನಾವಣೆಯಲ್ಲೇ ಗಮನಾರ್ಹ ಪ್ರಭಾವ ಬೀರಲಿದೆ. ಸಮೀಕ್ಷೆಯ ಪ್ರಕಾರ, ವಿಜಯ್ ಅವರ ಪಕ್ಷವು ಶೇ. 23.9 ರಷ್ಟು ಮತಗಳನ್ನು ಪಡೆಯುವ ಸಾಧ್ಯತೆಯಿದ್ದು, 8 ರಿಂದ 10 ಸ್ಥಾನಗಳನ್ನು ಗೆಲ್ಲಬಹುದು ಎಂದು ಅಂದಾಜಿಸಲಾಗಿದೆ. ಇದು ಎಡಿಎಂಕೆ ಮತಬ್ಯಾಂಕ್‌ಗೆ ದೊಡ್ಡ ಮಟ್ಟದ ಹೊಡೆತ ನೀಡುವ ಸಾಧ್ಯತೆಯನ್ನು ತೋರಿಸುತ್ತಿದೆ.

Advertisement

ಇತರೆ ಪಕ್ಷಗಳ ಸ್ಥಿತಿ ಏನು?

Advertisement

ಸೀಮಾನ್ ನೇತೃತ್ವದ ಎನ್‌ಟಿಕೆ ಶೇ. 4.9 ರಷ್ಟು ಮತಗಳನ್ನು ಪಡೆದರೂ ಯಾವುದೇ ಸ್ಥಾನಗಳನ್ನು ಗೆಲ್ಲುವಲ್ಲಿ ವಿಫಲವಾಗಬಹುದು ಎಂದು ಹೇಳಲಾಗಿದೆ. ಇತರೆ ಅಭ್ಯರ್ಥಿಗಳು ಅಥವಾ ಪಕ್ಷಗಳು ಶೇ. 2.1 ರಷ್ಟು ಮತಗಳನ್ನು ಪಡೆಯುವ ನಿರೀಕ್ಷೆಯಿದೆ.

ಲೋಕ ಪೋಲ್‌ ನಡೆಸಿದ ಪವರ್‌ಫುಲ್ ಸಿಎಂ ಸಮೀಕ್ಷೆಯಲ್ಲಿ ಯಾರಿಗೆ ಎಷ್ಟು ಮತ?

ಎಂಕೆ ಸ್ಟಾಲಿನ್ – 41%

ಇ.ಕೆ.ಪಳನಿಸ್ವಾಮಿ – 24.1%

ವಿಜಯ್ – 27.1%

ಇತರೆ – 9.8%

ಸಮೀಕ್ಷೆಯ ವಿವರ ಏನು?

ಲೋಕ ಪೋಲ್ ಈ ಸಮೀಕ್ಷೆಯನ್ನು ತಮಿಳುನಾಡಿನ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಸುಮಾರು 500 ಜನರಂತೆ ಒಟ್ಟು 1,17,000 ಜನರ ಅಭಿಪ್ರಾಯಗಳನ್ನು ಸಂಗ್ರಹಿಸಿ ಸಿದ್ಧಪಡಿಸಿದೆ. ಇದು ಕೇವಲ ಚುನಾವಣಾ ಪೂರ್ವ ಅಂದಾಜಾಗಿದ್ದು, 2026ರ ವೇಳೆಗೆ ರಾಜಕೀಯ ಸಮೀಕರಣಗಳು ಬದಲಾಗುವ ಸಾಧ್ಯತೆಗಳನ್ನೂ ಅಲ್ಲಗಳೆಯುವಂತಿಲ್ಲ.

ಕಳೆದ 2021 ರ ಚುನಾವಣೆ ಫಲಿತಾಂಶ ಯಾರಿಗೆ ಎಷ್ಟು ಸ್ಥಾನ?

ಡಿಎಂಕೆ – 133 ಸ್ಥಾನಗಳು

ಎಡಿಎಂಕೆ – 66

ಕಾಂಗ್ರೆಸ್‌ – 18

ಪಿಎಂಕೆ – 5

ಬಿಜೆಪಿ – 4

ವಿಸಿಕೆ – 4

ಸಿಪಿಐಎಂ -2

ಸಿಪಿಎಂ – 2

ಚುನಾವಣೆ ಪ್ರಮುಖ ದಿನಾಂಕಗಳು

ಮತದಾನ ದಿನಾಂಕ: 23 ಏಪ್ರಿಲ್‌.

ಮತ ಎಣಿಕೆ/ ಫಲಿತಾಂಶ: ಮೇ 4

[t4b-ticker]
error: Content is protected !!