ಅಮೆರಿಕದ ಬಲಿಷ್ಠ ಫೈಟರ್ ಜೆಟ್ ಹೊಡೆದುರುಳಿಸಿದ ಇರಾನ್: ದೃಢಪಡಿಸಿದ ಟ್ರಂಪ್ ಆಡಳಿತ

Picture of Savistara

Savistara

Bureau Report

ವಾಷಿಂಗ್ಟನ್: ಇರಾನ್ ಮೇಲೆ ಹಾರಾಟ ನಡೆಸುತ್ತಿದ್ದ ಅಮೆರಿಕದ ಯುದ್ಧ ವಿಮಾನವೊಂದನ್ನು ಹೊಡೆದು ಉರುಳಿಸಲಾಗಿದೆ ಎಂದು ಶ್ವೇತಭವನದ ಅಧಿಕಾರಿಗಳು ದೃಢಪಡಿಸಿದ್ದಾರೆ.

ವಿಮಾನದಲ್ಲಿದ್ದವರನ್ನು ರಕ್ಷಿಸಲು ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.ಈ ಮಧ್ಯೆ, ಇರಾನ್ ಕೂಡ ತನ್ನ ಸೇನೆಯನ್ನು ನಿಯೋಜಿಸಿದ್ದು, ಅಮೆರಿಕದ ಪೈಲಟ್ ಅನ್ನು ಪತ್ತೆಹಚ್ಚಲು ದೊಡ್ಡ ಮೊತ್ತದ ಬಹುಮಾನ ಘೋಷಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.ಅಮೆರಿಕದ ಬಲಿಷ್ಠವಾದ ಎರಡು ಎಫ್-35 ಸ್ಟೈಲ್ತ್ ಫೈಟರ್ ಜೆಟ್‌ಗಳನ್ನು ಇರಾನ್‌ನ ಐಆರ್‌ಜಿಸಿ 24 ಗಂಟೆಗಳಲ್ಲಿ ಹೊಡೆದುರುಳಿಸಿದೆ ಎಂದು ಇರಾನ್‌ನ ಮಾಧ್ಯಮಗಳು ವರದಿ ಮಾಡಿವೆ. ವಿಮಾನದ ಅವಶೇಷಗಳ ಚಿತ್ರಗಳನ್ನು ತನ್ನಿಮ್ ಸುದ್ದಿಸಂಸ್ಥೆ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದೆ.

‘ನೈರುತ್ಯ ಇರಾನ್‌ನಲ್ಲಿ ಅಮೆರಿಕದ ಯುದ್ಧ ವಿಮಾನದ ಪೈಲಟ್ ಒಬ್ಬರು ವಿಮಾನದಿಂದ ಜಿಗಿದಿದ್ದಾರೆ. ಅವರನ್ನು ಸೆರೆ ಹಿಡಿದು ಪೊಲೀಸ್ ಅಥವಾ ಸೇನಾ ಪಡೆಗಳಿಗೆ ಜೀವಂತವಾಗಿ ಒಪ್ಪಿಸಿದರೆ, ಅಮೂಲ್ಯವಾದ ಬಹುಮಾನ ದೊರೆಯುತ್ತದೆ’ ಎಂದು ಇರಾನ್ ಸ್ಥಳೀಯ ಮಾಧ್ಯಮ ವರದಿ ಮಾಡಿದೆ.ಆದರೆ, ಈ ಕುರಿತ ವರದಿಗಳನ್ನು ತಳ್ಳಿಹಾಕಿರುವ ಅಮೆರಿಕದ ಸೆಂಟ್ರಲ್ ಕಮಾಂಡ್, ‘ಇರಾನ್‌ನ ಐಆರ್‌ಜಿಸಿ ಈ ರೀತಿ ಅರ್ಧ ಡಜನ್‌ಗೂ ಹೆಚ್ಚು ಸುಳ್ಳು ಹೇಳಿಕೆಗಳನ್ನು ನೀಡಿದೆ’ ಎಂದಿದೆ.

News Updates

ಮಂಗಳೂರು : ಬೈಕಂಪಾಡಿ, ಕೂಳೂರು ಜಂಕ್ಷನ್ ಬಳಿ ಅಂಡರ್ ಪಾಸ್ ನಿರ್ಮಾಣಕ್ಕೆ ಕೇಂದ್ರ ಸರ್ಕಾರದಿಂದ ₹11.63 ಕೋ ರೂ. ಅಧಿಕ ಅನುದಾನ ಮಂಜೂರು | ದಕ್ಷಿಣ ಕನ್ನಡ ಜಿಲ್ಲೆಯ ಹೆದ್ದಾರಿಗಳ ಸುರಕ್ಷತೆ ಮತ್ತು ಸುಗಮ ಸಂಚಾರಕ್ಕೆ ನಮ್ಮ ಸರ್ಕಾರ ಬದ್ಧವಾಗಿದೆ : ಸಂಸದ ಕ್ಯಾ.ಬ್ರಿಜೇಶ್ ಚೌಟ

[t4b-ticker]
error: Content is protected !!