ಪುತ್ತೂರು ಜಾತ್ರೆಯ ಏಲಂನಲ್ಲಿ ದಾಖಲೆ!ಅಮ್ಯೂಸ್‌ಮೆಂಟ್ ವಿಭಾಗ 66 ಲಕ್ಷಕ್ಕೆ ಟೆಂಡರ್ | ಕಳೆದ ವರ್ಷ 17.50 ಲಕ್ಷಕ್ಕೆ ಏಲಂ ಆಗಿತ್ತು

Picture of Savistara

Savistara

Bureau Report

ಏ.10ರಿಂದ ನಡೆಯುವ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಳದ ವಾರ್ಷಿಕ ಜಾತ್ರೋತ್ಸವದ ಮಳಿಗೆ ಏಲಂ ವಿಚಾರದಲ್ಲಿ ಈ ಬಾರಿ ದಾಖಲೆ ನಿರ್ಮಿಸಿದೆ.ಜಾತ್ರಾ ಗದ್ದೆಯ ಮಳಿಗೆಗಳ ಏಲಂ ಪ್ರಕ್ರಿಯೆ ಎರಡು ದಿನಗಳಿಂದ ನಡೆಯುತ್ತಿದ್ದು, ಶುಕ್ರವಾರ ಜೈಂಟ್ ವೀಲ್ ಸೇರಿದಂತೆ ಅಮ್ಯೂಸ್‌ಮೆಂಟ್ ವಿಭಾಗದ ಏಲಂ ನಡೆಯಿತು. ಪುತ್ತೂರು ಜಾತ್ರೆಯ ಇತಿಹಾಸದಲ್ಲೇ 66 ಲಕ್ಷ ರೂ. ಮೊತ್ತಕ್ಕೆ ಅಮ್ಯೂಸ್ ಮೆಂಟ್ ವಿಭಾಗ ಏಲಂ ಆಗಿದೆ. ಕಳೆದ ವರ್ಷ ಇದು 17.50 ಲಕ್ಷಕ್ಕೆ ಏಲಂ ಆಗಿತ್ತು.ಒಳಪೆಟ್ಟು ತಪ್ಪಿಸಲು: ಜೈಂಟ್ ವೀಲ್ ಸೇರಿದಂತೆ ಅಮ್ಯೂಸ್‌ಮೆಂಟ್ ವಿಭಾಗ ಭಾರಿ ಆದಾಯ ತರುವ ಕ್ಷೇತ್ರ. ಇದನ್ನು ಕಡಿಮೆ ದುಡ್ಡಿಗೆ ಏಲಂ ಪಡೆದು ಬಳಿಕ ದೊಡ್ಡ ಮೊತ್ತದ ಲಾಭ ಮಾಡುವ

ಉದ್ದೇಶದಿಂದ ಕೆಲವೊಂದಷ್ಟು ಮಂದಿ ಸೇರಿಕೊಂಡು ಹೊಂದಾಣಿಕೆ ಮಾಡಿಕೊಳ್ಳುತ್ತಾ ಬಂದಿದ್ದಾರೆ. ಬಿಡ್ ದಾರರೇ ಹೆಚ್ಚಿನ ಮೊತ್ತಕ್ಕೆ ಏಲಂ ಹೋಗದಂತೆ ಒಳ ಒಪ್ಪಂದ ಮಾಡಿಕೊಂಡು ಕೊನೆಗೆ ತಮ್ಮೊಳಗೆ ಹೊಂದಾಣಿಕೆ ಮಾಡಿಕೊಳ್ಳುತ್ತಾ ಬಂದಿದ್ದಾರೆ. ಇದು ಗಮನಕ್ಕೆ ಬಂದಿದೆ. ಇದನ್ನು

ತಪ್ಪಿಸಿ ಪಾರದರ್ಶಕ ಮತ್ತು ನ್ಯಾಯಯುತ ಬೆಲೆಗೆ | ವಿಲಂ ಮಾಡಲು ನಿರ್ಧರಿಸಿದ್ದೇವೆ. ಅಮ್ಯೂಸ್ ಮೆಂಟ್ ವಿಭಾಗದ ಮೂಲ ಮೊತ್ತವನ್ನೇ 35 ಲಕ್ಷ ಇಟ್ಟಿದ್ದೇವೆ ಎಂದು ಕೆಲವೇ ದಿನಗಳ ಮೊದಲು| ಶಾಸಕ ಅಶೋಕ್ ರೈ ಹೇಳಿದ್ದರು.ಅದರಂತೆ ಶುಕ್ರವಾರ 35 ಲಕ್ಷ ಮೂಲ ಮೊತ್ತದಿಂದ విలం ಆರಂಭಿಸಲಾಯಿತು. ಅಂತಿಮವಾಗಿ ನವೀನ್‌ಚಂದ್ರ ನಾಯಕ್ 66 ಲಕ್ಷ ರೂ.ಗಳಿಗೆ ಬಿಡ್ ಗೆದ್ದು ಕಾಯಂಮಾಡಿಕೊಂಡರು.ಲಕ್ಷಾಂತರ ಭಕ್ತರು ಸೇರುವ ಪುತ್ತೂರು ಜಾತ್ರೆಯ ಇತಿಹಾಸದಲ್ಲಿ ಅಮ್ಯೂಸ್‌ಮೆಂಟ್ ವಿಭಾಗ ಇಷ್ಟು ದೊಡ್ಡ ಮೊತ್ತಕ್ಕೆ ವಿಲಂ ಆಗಿರುವುದು ಇದೇ ಮೊದಲು. ಈ ಬಾರಿಯ ಪುತ್ತೂರು ಜಾತ್ರೆಯಲ್ಲಿ ಎಲ್ಲ ಖರ್ಚು ಕಳೆದು 2 ಕೋಟಿ ರೂ. | ಉಳಿತಾಯ ಮಾಡುವ ಗುರಿ ಇದೆ ಎಂದು ಶಾಸಕರು ಹೇಳಿದ್ದಾರೆ.

News Updates

ಪುತ್ತೂರು ಚಲೋ ಕಾರ್ಯಕ್ರಮ ಯಶಸ್ವಿ, ಸಾವಿರ ಸಂಖ್ಯೆಯಲ್ಲಿ ಆಗಮಿಸಿದ ಹಿಂದೂ ಬಾಂಧವರು : ಓಲೈಕೆ ರಾಜಕಾರಣದ ಪರಾಕಷ್ಟೇ ಮಿತಿ ಮೀರಿದ್ದು, ಗೃಹ ಇಲಾಖೆ ಬಳಸಿಕೊಂಡು ಹಿಂದೂಗಳನ್ನು ದಮನಿಸುವ ಯತ್ನವನ್ನು ಸಹಿಸಲು ಅಸಾಧ್ಯ – ಶ್ರೀಕಾಂತ್ ಶೆಟ್ಟಿ

[t4b-ticker]
error: Content is protected !!