ಟೋಲ್‌ ಬೂತ್‌ಗಳಲ್ಲಿ ಸಂಚಾರ ಇನ್ನು ಸರಾಗ: ಏ.10 ರಿಂದ ನಗದು ಪಾವತಿ ಇಲ್ಲ

Picture of Savistara

Savistara

Bureau Report

ಹೊಸದಿಲ್ಲಿ: ಟೋಲ್‌ ಬೂತ್‌ಗಳಲ್ಲಿ ವಾಹನಗಳ ಸಾಲನ್ನು ತಪ್ಪಿಸುವ ಕ್ರಮವಾಗಿ ಈ ತಿಂಗಳ 10ರಿಂದ ನಗದು ಪಾವತಿಯನ್ನು ಸ್ಥಗಿತಗೊಳಿಸುವ ಸಂಬಂಧ ಕೇಂದ್ರ ರಸ್ತೆ ಸಾರಿಗೆ ಸಚಿವಾಲಯ ಗುರುವಾರ ಅಧಿಸೂಚನೆ ಹೊರಡಿಸಿದೆ.ಇದರಿಂದ ರಾಷ್ಟ್ರೀಯ ಹೆದ್ದಾರಿ ಮತ್ತು ಎಕ್ಸ್‌ಪ್ರೆಸ್‌ವೇ ಪ್ರಯಾಣಿಕರು ತಮ್ಮ ಗುರುತಿನ ಚೀಟಿಯನ್ನು ತೋರಿಸಿ, ಶುಲ್ಕ ವಿನಾಯ್ತಿ ಕೋರುವ ಸಂಪ್ರದಾಯ ಕೂಡಾ ಅಂತ್ಯವಾಗಲಿದೆ. ಸಾರಿಗೆ ಸಚಿವಾಲಯ ಈಗಾಗಲೇ ಸರ್ಕಾರಿ ಸಂಸ್ಥೆಗಳು ಮತ್ತು ಕಚೇರಿಗಳು ಶುಲ್ಕ ವಿನಾಯ್ತಿ ಫಾಸ್ಟಾಗ್ ಗಳನ್ನು ಪಡೆಯಲು ಅಥವಾ ವಾರ್ಷಿಕ ಫಾಸ್ಟಾಗ್ ಪಾಸ್ ಗಳನ್ನು ಪಡೆಯುವಂತೆ ಸೂಚಿಸಿದೆ. ವಿನಾಯ್ತಿ ವರ್ಗದ ಅಡಿಯಲ್ಲಿ ಬರುವ ಎಲ್ಲ ವಾಹನಗಳು ಈ ಕ್ರಮವನ್ನು ಅನುಸರಿಸಬೇಕಾಗುತ್ತದೆ. ಎಲ್ಲ* ಖಾಸಗಿ ಕಾರುಗಳಿಗೆ ವಾರ್ಷಿಕ ಪಾಸ್ ದರ 3075 ರೂಪಾಯಿ ಆಗಿರುತ್ತದೆ ಹಾಗೂ 200 ಟೋಲ್ ಪ್ಲಾಝಾಗಳನ್ನು ದಾಟಲು ಅವಕಾಶ ಇರುತ್ತದೆ.

ಇದು ಟೋಲ್ ಪ್ಲಾಝಾಗಳಲ್ಲಿ ಪ್ರಯಾಣಿಕರು ಮತ್ತು ಸಿಬ್ಬಂದಿಯ ನಡುವಿನ ಸಂಘರ್ಷವನ್ನು ಕೂಡಾ ತಪ್ಪಿಸಲಿದೆ. ಗುರುವಾರ ಸಂಜೆ ರಸ್ತೆ ಸಾರಿಗೆ ಸಚಿವಾಲಯ ಟೋಲ್ ಪಾವತಿಯಲ್ಲಿ ನಗದು ವ್ಯವಹಾರವನ್ನು ಏಪ್ರಿಲ್ 10ರಿಂದ ಕೊನೆಗೊಳಿಸುವ ಸಂಬಂಧ ಅಧಿಸೂಚನೆ ಹೊರಡಿಸಿದೆ. ಇದು ಸರಾಗ ಪ್ರಯಾಣಕ್ಕೆ ತಡೆಯಾಗುವ ರೀತಿಯಲ್ಲಿ ಟೋಲ್ ಬೂತ್‌ಗಳಲ್ಲಿ ವಾಹನಗಳ ಸರದಿ ಸಾಲು ನಿರ್ಮಾಣವಾಗುವುದನ್ನು ತಡೆಯಲಿದೆ.ಒಂದು ವೇಳೆ ವಾಹನಕ್ಕೆ ಅಧಿಕೃತ ಫಾಸ್ಟಾಗ್ ಇಲ್ಲದಿದ್ದರೆ, ಚಾಲಕ ಅಥವಾ ಮಾಲೀಕ ಟೋಲ್ ಶುಲ್ಕವನ್ನು ಯುಪಿಐ ಮೂಲಕ ಪಾವತಿಸಲು ಅವಕಾಶವಿದೆ. ಇದು ಸಾಮಾನ್ಯ ಬಳಕೆದಾರರ ಶುಲ್ಕದ 1.25 ಪಟ್ಟು ಆಗಿರುತ್ತದೆ. ಒಂದು ವೇಳೆ ಯುಪಿಐ ಮೂಲಕವೂ ಪಾವತಿಸಲು ನಿರಾಕರಿಸಿದರೆ, ಅಂಥ ವಾಹನಗಳ ವಿರುದ್ಧ ರಾಷ್ಟ್ರೀಯ ಹೆದ್ದಾರಿ ಶುಲ್ಕ ನಿಯಮಾವಳಿಯ 14ನೇ ನಿಯಮದ ಮೂಲಕ ಕ್ರಮ ಕೈಗೊಳ್ಳಲಾಗುತ್ತದೆ. ಅಂಥ ವಾಹನಗಳಿಗೆ ಟೋಲ್ ಪ್ಲಾಝಾ ಪ್ರವೇಶವನ್ನು ನಿರ್ಬಂಧಿಸಲು ಹಾಗೂ ರಾಷ್ಟ್ರೀಯ ಹೆದ್ದಾರಿ ಸೆಕ್ಷನ್ ನಿಂದ ಅದನ್ನು ತೆರವುಗೊಳಿಸಲು ಅವಕಾಶ ಇರುತ್ತದೆ.

News Updates

ಮಂಗಳೂರು : ಬೈಕಂಪಾಡಿ, ಕೂಳೂರು ಜಂಕ್ಷನ್ ಬಳಿ ಅಂಡರ್ ಪಾಸ್ ನಿರ್ಮಾಣಕ್ಕೆ ಕೇಂದ್ರ ಸರ್ಕಾರದಿಂದ ₹11.63 ಕೋ ರೂ. ಅಧಿಕ ಅನುದಾನ ಮಂಜೂರು | ದಕ್ಷಿಣ ಕನ್ನಡ ಜಿಲ್ಲೆಯ ಹೆದ್ದಾರಿಗಳ ಸುರಕ್ಷತೆ ಮತ್ತು ಸುಗಮ ಸಂಚಾರಕ್ಕೆ ನಮ್ಮ ಸರ್ಕಾರ ಬದ್ಧವಾಗಿದೆ : ಸಂಸದ ಕ್ಯಾ.ಬ್ರಿಜೇಶ್ ಚೌಟ

[t4b-ticker]
error: Content is protected !!