ಇರಾನ್ ನಿಂದ ಸುರಕ್ಷಿತವಾಗಿ ಹೊರಬಂದ ಯುಎಸ್ ಏರ್‌ಮ್ಯಾನ್

Picture of Savistara

Savistara

Bureau Report

ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ ಪಡೆಗಳ ವಿವರಗಳನ್ನು ಅಧಿಕೃತವಾಗಿ ಬಹಿರಂಗಪಡಿಸಲಾಗಿಲ್ಲ. ಆದರೆ ಅವು ವಿಶೇಷ ಕಾರ್ಯಾಚರಣೆ ಪಡೆಗಳಾಗಿರಬಹುದೆಂದು ಅಂದಾಜಿಸಲಾಗಿದೆ.ರಾತ್ರಿ ಹೊತ್ತು ಆರಂಭವಾದ ಈ ಕಾರ್ಯಾಚರಣೆ ಬೆಳಗಿನ ಜಾವ ಅಂತ್ಯಗೊಂಡಿತು. ಕಾರ್ಯಾಚರಣೆಯ ವೇಳೆ ಭಾರೀ ಗುಂಡಿನ ಚಕಮಕಿ ನಡೆದಿದ್ದು, ಏರ್‌ಮ್ಯಾನ್ ಇರುವ ಸ್ಥಳದ ಕುರಿತು ಇರಾನಿನ ಅಧಿಕಾರಿಗಳಿಗೆ ಮಾಹಿತಿ ಇತ್ತು ಎಂದು ತಿಳಿದು ಬಂದಿದೆ. ಆ ಸಿಬ್ಬಂದಿಯ ವಿವರಗಳ ಕುರಿತು ಯಾವುದೇ ಮಾಹಿತಿ ಲಭ್ಯವಾಗಿಲ್ಲ.ರಕ್ಷಣಾ ಕಾರ್ಯಾಚರಣೆ ವೇಳೆ ಭಾಗವಹಿಸಿದ್ದ ಸೈನಿಕರಿಗೆ ಸಾಕಷ್ಟು ಅಪಾಯ ಎದುರಾಗಿದ್ದರೂ, ಕಾರ್ಯಾಚರಣೆ ಯಶಸ್ವಿಯಾಯಿತು. ಈ ಸಂದರ್ಭದಲ್ಲಿ ಏರ್‌ಮ್ಯಾನ್ ಸೇರಿದಂತೆ ಇತರರು ಗಂಭೀರ ಅಪಾಯದಲ್ಲಿದ್ದರು ಎಂದು ತಿಳಿದುಬಂದಿದೆ.ಇದೀಗ ಅಮೆರಿಕದ ಅಧಿಕಾರಿಗಳು ದೃಢಪಡಿಸಿರುವಂತೆ, ರಕ್ಷಿಸಲ್ಪಟ್ಟ ಆ ವಾಯುಪಡೆಯ ಸಿಬ್ಬಂದಿ ಇರಾನ್‌ನಿಂದ ಸುರಕ್ಷಿತವಾಗಿ ಹೊರಬಂದಿದ್ದು, ಅಪಾಯದಿಂದ ಪಾರಾಗಿದ್ದಾರೆ.

News Updates

ಮಂಗಳೂರು : ಬೈಕಂಪಾಡಿ, ಕೂಳೂರು ಜಂಕ್ಷನ್ ಬಳಿ ಅಂಡರ್ ಪಾಸ್ ನಿರ್ಮಾಣಕ್ಕೆ ಕೇಂದ್ರ ಸರ್ಕಾರದಿಂದ ₹11.63 ಕೋ ರೂ. ಅಧಿಕ ಅನುದಾನ ಮಂಜೂರು | ದಕ್ಷಿಣ ಕನ್ನಡ ಜಿಲ್ಲೆಯ ಹೆದ್ದಾರಿಗಳ ಸುರಕ್ಷತೆ ಮತ್ತು ಸುಗಮ ಸಂಚಾರಕ್ಕೆ ನಮ್ಮ ಸರ್ಕಾರ ಬದ್ಧವಾಗಿದೆ : ಸಂಸದ ಕ್ಯಾ.ಬ್ರಿಜೇಶ್ ಚೌಟ

[t4b-ticker]
error: Content is protected !!