ಇರಾಕ್ ನಲ್ಲಿ ಅಪಹರಣಕ್ಕೊಳಗಾಗಿದ್ದ ಅಮೆರಿಕದ ಪತ್ರಕರ್ತೆ ಬಿಡುಗಡೆ

Picture of Savistara

Savistara

Bureau Report

ವಾಷಿಂಗ್ಟನ್/ಬಗ್ದಾದ್: ಇರಾಕ್ ನಲ್ಲಿ ಅಪಹರಣಕ್ಕೊಳಗಾಗಿದ್ದ ಅಮೆರಿಕದ ಪತ್ರಕರ್ತೆ ಶೆಲ್ಲಿ ಕಿಟೆಲ್ಸನ್ ಅವರನ್ನು ಬಿಡುಗಡೆ ಮಾಡಲಾಗಿದೆ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ತಿಳಿಸಿದ್ದಾರೆ. ಈ ಬೆಳವಣಿಗೆ ಕುರಿತು ಅವರು ಸಂತಸ ವ್ಯಕ್ತಪಡಿಸಿದ್ದಾರೆ.ಇರಾಕ್ ನಿಂದ ವರದಿ ಮಾಡುತ್ತಿದ್ದ ವೇಳೆ ಕಿಟೆಲ್ಸನ್‌ ಅವರನ್ನು ಕೆಲವು ದಿನಗಳ ಹಿಂದೆ ಅಪಹರಿಸಲಾಗಿತ್ತು. ಈ ಘಟನೆ ಅಂತರರಾಷ್ಟ್ರೀಯ ಮಟ್ಟದಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿತ್ತು.ಇರಾಕ್‌ನ ಶಿಯಾ ಸಶಸ್ತ್ರ ಸಂಘಟನೆ ಕತೈಬ್ ಹೆಬ್ಬುಲ್ವಾ ಕಿಟೆಲ್ಸನ್ ಅವರನ್ನು ಬಿಡುಗಡೆ ಮಾಡುವುದಾಗಿ ಮೊದಲು ಘೋಷಿಸಿತ್ತು. ಆದರೆ, ಅವರು ತಕ್ಷಣವೇ ಇರಾಕ್ ತೊರೆಯುವ ಷರತ್ತಿನ ಮೇಲೆ ಮಾತ್ರ ಬಿಡುಗಡೆ ಮಾಡುವುದಾಗಿ ಹೇಳಿತ್ತು.ಈ ಘೋಷಣೆಯ ಕೆಲವೇ ಗಂಟೆಗಳ ಬಳಿಕ, ಕಿಟೆಲ್ಸನ್ ಬಿಡುಗಡೆಗೊಂಡಿರುವುದಾಗಿ ರೂಬಿಯೊ ಅಧಿಕೃತವಾಗಿ ಪ್ರಕಟಿಸಿದರು.ಕಿಟಲ್ಸನ್ ಅವರ ಆರೋಗ್ಯ ಸ್ಥಿತಿ ಹಾಗೂ ಅವರು ಈಗಿರುವ ಸ್ಥಳದ ಕುರಿತು ಹೆಚ್ಚಿನ ಮಾಹಿತಿ ಇನ್ನೂ ಲಭ್ಯವಾಗಿಲ್ಲ ಎಂದು Aljazeera ವರದಿ ಮಾಡಿದೆ.

[t4b-ticker]
error: Content is protected !!