ತೆಹ್ರಾನ್‌ನಲ್ಲಿರುವ ಭಾರತೀಯರಿಗೆ ಭಾರತೀಯ ರಾಯಭಾರ ಕಚೇರಿಯಿಂದ ಪ್ರಮುಖ ಎಚ್ಚರಿಕೆ

Picture of Savistara

Savistara

Bureau Report

ನವದೆಹಲಿ : ತೆಹ್ರಾನ್‌ನಲ್ಲಿರುವ ಭಾರತೀಯರಾಯಭಾರ ಕಚೇರಿಯು ಇರಾನ್‌ನಲ್ಲಿರುವ ಭಾರತೀಯ ನಾಗರಿಕರಿಗಾಗಿ ಮಹತ್ವದ ಸಲಹೆಯನ್ನು ನೀಡಿದೆ. ಮುನ್ನೆಚ್ಚರಿಕಾ ಕ್ರಮವಾಗಿ, ಅಲ್ಲಿರುವ ಎಲ್ಲಾ ಭಾರತೀಯರು ಮುಂದಿನ 48 ಗಂಟೆಗಳ ಕಾಲ ಇರುವ ಸ್ಥಳದಲ್ಲೇ ಉಳಿಯಲು ಸೂಚಿಸಲಾಗಿದೆ. ಅದೇ ರೀತಿ ವಿದ್ಯುತ್‌ ಸ್ಥಾವರಗಳು, ಮಿಲಿಟರಿ ನೆಲೆಗಳು ಮತ್ತು ಬಹುಮಹಡಿ ಕಟ್ಟಡಗಳ ಮೇಲಿನ ಮಹಡಿಗಳಿಗೆ ಹೋಗದಂತೆ ಎಚ್ಚರಿಕೆ ನೀಡಲಾಗಿದೆ. ರಸ್ತೆಯ ಮೂಲಕ ಪ್ರಯಾಣದ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮೊದಲು ಭಾರತೀಯ ರಾಯಭಾರ ಕಚೇರಿಯನ್ನು ಸಂಪರ್ಕಿಸಬೇಕು. ರಾಯಭಾರ ಕಚೇರಿಯಿಂದ ಕಾಯ್ದಿರಿಸಿದ ಹೋಟೆಲ್‌ಗಳಲ್ಲಿ ಉಳಿದಿರುವವರು ಹೋಟೆಲ್‌ನಿಂದ ಹೊರಬರದಂತೆ ಮತ್ತು ಸಿಬ್ಬಂದಿಯೊಂದಿಗೆ ನಿರಂತರ ಸಂಪರ್ಕದಲ್ಲಿರುವಂತೆ ತಿಳಿಸಲಾಗಿದೆ. ಎಲ್ಲಾ ಭಾರತೀಯರು ರಾಯಭಾರ ಕಚೇರಿಯ ಅಧಿಕೃತ ಪ್ರಕಟಣೆಗಳನ್ನು ಗಮನಿಸುವಂತೆ ವಿನಂತಿಸಲಾಗಿದೆ.

ತೆಹ್ರಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯ ತುರ್ತು ದೂರವಾಣಿ ಸಂಖ್ಯೆಗಳು:

+989128109115

+989128109109

+989128109102

+989932179359

ಯಾವುದೇ ತುರ್ತು ನೆರವಿಗಾಗಿ ಅಥವಾ ಹೆಚ್ಚಿನ ಮಾಹಿತಿಗಾಗಿ ಭಾರತೀಯ ನಾಗರಿಕರು ಈ ಸಂಖ್ಯೆಗಳನ್ನು ಅಥವಾ ಇಮೇಲ್ ಐಡಿ cons.tehran@mea.gov.in ಸಂಪರ್ಕಿಸಬಹುದು.

[t4b-ticker]
error: Content is protected !!