BIG NEWS |ಹಾರ್ಮುಜ್ ಜಲಸಂಧಿಯಲ್ಲಿ ಹಡಗುಗಳ ಸಂಚಾರಕ್ಕೆ ಇರಾನ್ ಮತ್ತೆ ಬ್ರೇಕ್

Picture of Savistara

Savistara

Bureau Report

ಅಮೆರಿಕ-ಇಸ್ರೇಲ್-ಇರಾನ್ ಯುದ್ದಕ್ಕೆ ತಾತ್ಕಾಲಿಕ ಕದನ ವಿರಾಮದ ಬ್ರೇಕ್ ನೀಡಲಾಗಿದ್ದು, ಇದರ ಬೆನ್ನಲ್ಲೇ ಅತ್ತ ಲೆಬನಾನ್ ಮೇಲೆ ಇಸ್ರೇಲ್ ಸೇನೆ ದಾಳಿ ನಡೆಸಿದ್ದು, 300ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ಇದರಿಂದಾಗಿ ಮತ್ತೆ ಕೆರಳಿದ ಇರಾನ್ ಹಾರ್ಮುಜ್ ಜಲಸಂಧಿಯನ್ನು ಮುಚ್ಚಿದೆ.ಈಗಾಗಲೇ ಅಮೆರಿಕ, ಇರಾನ್ ಹಾಗೂ ಇಸ್ರೇಲ್ ಜೊತೆಗೂಡಿ ಷರತ್ತು ಬದ್ದಕದನ ವಿರಾಮ ಘೋಷಿಸಿದ್ದು, ಆದರೆ ಅತ್ತ ಇಸ್ರೇಲ್ ಬೈರತ್ ನಗರದ ಮೇಲೆ 100ಕ್ಕೂ ಹೆಚ್ಚು ದಾಳಿ ನಡೆಸಿದೆ . ಹೀಗಾಗಿ ಇರಾನ್ ಹಾರ್ಮುಜ್ ಜಲಸಂಧಿಯನ್ನು ಮತ್ತೆ ಮುಚ್ಚಿದೆ ಎಂದು ಇರಾನ್ ಮಾಧ್ಯಮಗಳು ವರದಿ ಮಾಡಿದೆ.ಹಲವು ತೈಲ ಹಡುಗುಗಳ ಹಾರ್ಮುಜ್ ಜಲಸಂಧಿ ಮೂಲಕ ಸಾಗಲು ಸಜ್ಜಾಗಿತ್ತು. ಆದರೆ ದಾಳಿಯಿಂದ ಇರಾನ್ ನೌಕಾ ಪಡೆ ಅಲರ್ಟ್ ಆಗಿದ್ದು, ಹಾರ್ಮುಜ್ ಜಲಸಂಧಿ ಮೂಲಕ ಹಡಗುಗಳ ಸಂಚಾರಕ್ಕೆ ತಡೆ ನೀಡಿದೆ. ಜೊತೆಗೆ ಯಾವುದೇ ಹಡಗುಗಳು ಜಲಸಂಧಿ ಮೂಲಕ ಸಾಗಲು ಪ್ರಯತ್ನಿಸಿದರೆ ಅಪಾಯ ತಪ್ಪಿದ್ದಲ್ಲ ಎಂದು ಎಚ್ಚರಿಸಿದೆ ಎಂದು ಇರಾನ್ ಮಾಧ್ಯಮಗಳು ವರದಿ ಮಾಡಿದೆ.

[t4b-ticker]
error: Content is protected !!