II PUC Result: ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ಆಳ್ವಾಸ್‌ ಕಾಲೇಜಿನ ದಿಶಾಗೆ 600 ಅಂಕ

Picture of Savistara

Savistara

Bureau Report

ಮೂಡುಬಿದಿರೆ: 2026ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಫಲಿತಾಂಶ ಗುರುವಾರ (ಏ.09) ಮಧ್ಯಾಹ್ನ ಪ್ರಕಟಗೊಂಡಿದ್ದು, ಮೂಡುಬಿದಿರೆ ಆಳ್ವಾಸ್ ಪಿಯು ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ದಿಶಾ ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನಿಯಾಗಿ ಸಾಧನೆ ಮಾಡಿದ್ದಾರೆ.ಮೂಡುಬಿದಿರೆ ಮೂಲದ ದಿಶಾ ವಾಣಿಜ್ಯ ವಿಭಾಗದಲ್ಲಿ ಒಟ್ಟು 600 ಅಂಕಗಳಿಗೆ 600 ಅಂಕಗಳನ್ನು ಪಡೆಯುವ ಮೂಲಕ ರಾಜ್ಯಕ್ಕೆ ಮೊದಲ ಸ್ಥಾನ ಪಡೆದಿದ್ದಾರೆ.ಸಾಧನೆಗಾಗಿ ಕಾಲೇಜಿನ ಆಡಳಿತ ಮಂಡಳಿ ಹಾಗೂ ಉಪನ್ಯಾಸಕರು ಅಭಿನಂದಿಸಿದ್ದಾರೆ.

ಮೊದಲ ಬಾರಿಗೆ ವಿದ್ಯಾರ್ಥಿಗಳ ಫಲಿತಾಂಶ ಪ್ರಕಟಣೆ ವೇಳೆಯೇ ಅಂಕಪಟ್ಟಿಗಳನ್ನೂ ಡಿಜಿಲಾಕರ್ ನಲ್ಲಿ ಅಪ್‌ಲೋಡ್ ಮಾಡಲಾಗಿದೆ. https://www.digilocker.gov.in ಮೂಲಕ ವಿದ್ಯಾರ್ಥಿಗಳು ತಮ್ಮ ಅಂಕಪಟ್ಟಿ ಡೌನ್‌ಲೋಡ್ ಮಾಡಿಕೊಳ್ಳಬಹುದು ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಮಾಹಿತಿ ನೀಡಿದೆ.ಅಂಕಪಟ್ಟಿ ಡಿಜಿಲಾಕರ್ ಮೂಲಕ ಯಾವ ರೀತಿ ಡೌನ್‌ಲೋಡ್ ಮಾಡಿ ಕೊಳ್ಳಬೇಕು ಎಂಬ ಮಾಹಿತಿ https://tinyurl.com/mw84wmh9 30 ತಿಳಿದುಕೊಳ್ಳಬಹುದು.

News Updates

ಇಂದು ರಾತ್ರಿ ಇಡೀ ನಾಗರಿಕತೆಯ ಸರ್ವನಾಶವಾಗಲಿದೆ : ಇರಾನ್ ಮೇಲೆ ಪ್ರಬಲ ದಾಳಿಯ ಎಚ್ಚರಿಕೆ ನೀಡಿದ ಟ್ರಂಪ್ : 48 ಗಂಟೆ ವಿದ್ಯುತ್ ಸಂಪರ್ಕ ಉಪಯೋಗಿಸದೆ ಮನೆಯೊಳಗಿರುವಂತೆ ಭಾರತೀಯರಿಗೆ ಎಚ್ಚರಿಸಿ ಸಹಾಯವಾಣಿ ತೆರೆದ ಕೇಂದ್ರ ಸರ್ಕಾರ..!

[t4b-ticker]
error: Content is protected !!