ಚಿಕ್ಕಮಗಳೂರು: ಚಂದ್ರದ್ರೋಣ ಪರ್ವತ ಟ್ರೆಕ್ಕಿಂಗ್ ನಲ್ಲಿ ನಾಪತ್ತೆಯಾದ ಬಾಲಕಿಯ ಮೃತದೇಹ ಮೂರು ದಿನಗಳ ಬಳಿಕ ಕಂದಕದಲ್ಲಿ ಪತ್ತೆ

Picture of Savistara

Savistara

Bureau Report

ಚಿಕ್ಕಮಗಳೂರಿನ ಪ್ರಸಿದ್ಧ ಪ್ರವಾಸಿ ತಾಣ ಮಾಣಿಕ್ಯಧಾರದಲ್ಲಿ ಕಳೆದ ಮೂರು ದಿನಗಳ ಹಿಂದೆ ನಾಪತ್ತೆಯಾಗಿದ್ದ ಕೇರಳ ಮೂಲದ ಬಾಲಕಿ ಶ್ರೀನಂದಾ ಅವರ ಮೃತದೇಹ ಪತ್ತೆಯಾಗುವ ಮೂಲಕ ಈ ಪ್ರಕರಣ ಅತ್ಯಂತ ದುಃಖದಾಯಕವಾಗಿ ಅಂತ್ಯಗೊಂಡಿದೆ.

ಕೇರಳದ ಪಾಲಕ್ಕಾಡ್ ಜಿಲ್ಲೆಯ ನಿವಾಸಿಯಾದ ಈ ಬಾಲಕಿ ಮಂಗಳವಾರ ಸಂಜೆ ಸುಮಾರು 5.30ರ ಹೊತ್ತಿಗೆ ಪ್ರವಾಸಿಗರ ಜನದಟ್ಟಣೆಯ ನಡುವೆ ಇದ್ದಕ್ಕಿದ್ದಂತೆ ಕಾಣೆಯಾಗಿದ್ದರು. ಮಗಳು ನಾಪತ್ತೆಯಾದ ತಕ್ಷಣವೇ ಪೋಷಕರು ಪೊಲೀಸರಿಗೆ ದೂರು ನೀಡಿದ್ದು, ಕಳೆದ ಮೂರು ದಿನಗಳಿಂದ ದಟ್ಟವಾದ ಅರಣ್ಯ ಮತ್ತು ಕಡಿದಾದ ಬೆಟ್ಟಗುಡ್ಡಗಳಲ್ಲಿ ಬಾಲಕಿಗಾಗಿ ವ್ಯಾಪಕ ಶೋಧ ಕಾರ್ಯ ನಡೆಸಲಾಗಿತ್ತು.

ಅಗ್ನಿಶಾಮಕ ದಳ, ಪೊಲೀಸ್ ಮತ್ತು ಅರಣ್ಯ ಇಲಾಖೆಯ ತಂಡಗಳು ಜಂಟಿಯಾಗಿ ಹಗಲು-ರಾತ್ರಿ ಕಾರ್ಯಾಚರಣೆ ನಡೆಸಿದ ನಂತರ ಅಂತಿಮವಾಗಿ ಆಳವಾದ ಕಂದಕವೊಂದರಲ್ಲಿ ಬಾಲಕಿಯ ಶವ ಪತ್ತೆಯಾಗಿದೆ. ಪ್ರವಾಸಕ್ಕೆಂದು ಬಂದು ತಮ್ಮ ಪ್ರೀತಿಯ ಮಗಳನ್ನು ಕಳೆದುಕೊಂಡ ಕುಟುಂಬದ ಆಕ್ರಂದನ ಮುಗಿಲುಮುಟ್ಟಿದ್ದು, ಇಡೀ ಪ್ರವಾಸದ ಸಂಭ್ರಮ ವಿಷಾದವಾಗಿ ಮಾರ್ಪಟ್ಟಿದೆ. ಬಾಲಕಿಯ ಸಾವು ಕಂದಕಕ್ಕೆ ಆಕಸ್ಮಿಕವಾಗಿ ಬಿದ್ದು ಸಂಭವಿಸಿದೆಯೇ ಅಥವಾ ಬೇರೆ ಯಾವುದಾದರೂ ಕಾರಣವಿದೆಯೇ ಎಂಬ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

News Updates

ಇಂದು ರಾತ್ರಿ ಇಡೀ ನಾಗರಿಕತೆಯ ಸರ್ವನಾಶವಾಗಲಿದೆ : ಇರಾನ್ ಮೇಲೆ ಪ್ರಬಲ ದಾಳಿಯ ಎಚ್ಚರಿಕೆ ನೀಡಿದ ಟ್ರಂಪ್ : 48 ಗಂಟೆ ವಿದ್ಯುತ್ ಸಂಪರ್ಕ ಉಪಯೋಗಿಸದೆ ಮನೆಯೊಳಗಿರುವಂತೆ ಭಾರತೀಯರಿಗೆ ಎಚ್ಚರಿಸಿ ಸಹಾಯವಾಣಿ ತೆರೆದ ಕೇಂದ್ರ ಸರ್ಕಾರ..!

[t4b-ticker]
error: Content is protected !!