ಮುಸ್ಲಿಮರ ಮತ ಹಿಜಾಬ್ ಧರಿಸುವ ಮಮತಾ ಗೆ ಹೋಗಿವೆ, ನಾನು ಹಿಂದೂಗಳಿಗಾಗಿ ಕೆಲಸ ಮಾಡುತ್ತೇನೆ: ಬಿಜೆಪಿ ನಾಯಕ ಸುವೇಂದು ಅಧಿಕಾರಿ

Picture of Savistara

Savistara

Bureau Report

ಈ ಭ್ರಷ್ಟ, ಕುಟುಂಬ ಆಧಾರಿತ ಪಕ್ಷಕ್ಕೆ ಯಾವುದೇ ಸಿದ್ಧಾಂತವಿಲ್ಲ. ಗೃಹ ಸಚಿವ ಅಮಿತ್ ಶಾ ಪ್ರಣಾಳಿಕೆಯಲ್ಲಿ ಘೋಷಿಸಿದ ಮತ್ತು ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದ ಕೆಲಸವನ್ನು ನಾವು ಮಾಡುತ್ತೇವೆ- ಸುವೇಂದು ಅಧಿಕಾರಿ

ಕೋಲ್ಕತ್ತಾ: ಭವಾನಿಪುರ ಮತ್ತು ನಂದಿಗ್ರಾಮಎರಡರಿಂದಲೂ ಗೆಲುವು ಸಾಧಿಸಿದ ನಂತರ, ಸುವೇಂದು ಅಧಿಕಾರಿ ನಂದಿಗ್ರಾಮದಲ್ಲಿ ತಮ್ಮ ಗೆಲುವಿಗೆ ಹಿಂದೂ ಮತದಾರರ ಬಲವಾದ ಬೆಂಬಲ ಕಾರಣ ಎಂದು ತೃಣಮೂಲ ಕಾಂಗ್ರೆಸ್ ಮೇಲೆ ತೀವ್ರ ದಾಳಿ ನಡೆಸಿದರು.

“ಈ ಬಾರಿ ನಾನು ಸುಮಾರು ಹತ್ತು ಸಾವಿರ ಮತಗಳಿಂದ ಚುನಾವಣೆಯಲ್ಲಿ ಗೆದ್ದೆ. ನಂದಿಗ್ರಾಮದ ಹಿಂದೂ ಜನರು ನನ್ನನ್ನು ಮತ್ತೆ ಗೆಲ್ಲಿಸಿದರು. ಅಲ್ಲಿ ಇಡೀ ಮುಸ್ಲಿಂ ಮತಗಳು ಟಿಎಂಸಿಗೆ ಹೋದವು. ನಾನು ನಂದಿಗ್ರಾಮದ ಹಿಂದೂಗಳಿಗಾಗಿ ಕೆಲಸ ಮಾಡುತ್ತೇನೆ. ಟಿಎಂಸಿ ಮುಗಿಯುತ್ತದೆ. 24 ಗಂಟೆಗಳಲ್ಲಿ ಅದು ನಾಶವಾಗುತ್ತದೆ.

ಈ ಭ್ರಷ್ಟ, ಕುಟುಂಬ ಆಧಾರಿತ ಪಕ್ಷಕ್ಕೆ ಯಾವುದೇ ಸಿದ್ಧಾಂತವಿಲ್ಲ. ಗೃಹ ಸಚಿವ ಅಮಿತ್ ಶಾ ಪ್ರಣಾಳಿಕೆಯಲ್ಲಿ ಘೋಷಿಸಿದ ಮತ್ತು ಪ್ರಧಾನಿ ನರೇಂದ್ರ ಮೋದಿ ಮತ್ತೆ ಮತ್ತೆ ಭರವಸೆ ನೀಡಿದ ಕೆಲಸವನ್ನು ನಾವು ಮಾಡುತ್ತೇವೆ. ನಾವು ಅದನ್ನು ಪೂರ್ಣಗೊಳಿಸುತ್ತೇವೆ.” ಎಂದು ಹೇಳಿದ್ದಾರೆ.

ನಂದಿಗ್ರಾಮದಲ್ಲಿ 66 ಸಾವಿರ ಮುಸ್ಲಿಮರಿದ್ದರೆ, ಭವಾನಿಪುರದಲ್ಲಿ 35 ಸಾವಿರ ಮುಸ್ಲಿಮರಿದ್ದಾರೆ.ಆದ್ದರಿಂದಲೇ ಭವಾನಿಪುರದಲ್ಲಿ ನನ್ನ ಗೆಲುವಿನ ಅಂತರ ನಂದಿಗ್ರಾಮದಲ್ಲಿ ದಾಖಲಾಗಿದ್ದಕ್ಕಿಂತ ಹೆಚ್ಚಿದೆ, ಮುಸ್ಲಿಮರು ಹಿಜಾಬಿ ಮಮತಾ ಗೆ ಮತ ಹಾಕಿದ್ದಾರೆ. ಮುಸ್ಲಿಮರು ಮಮತಾ ಬ್ಯಾನರ್ಜಿಗೆ ಮತ ಹಾಕಿದರೆ, ಹಿಂದೂಗಳು, ಬೌದ್ಧರು, ಸಿಬ್ಬರು ನನಗೆ ಮತ ಹಾಕಿದ್ದಾರೆ. ಅಷ್ಟೇ ಅಲ್ಲದೇ 10 ಸಾವಿರ ಸಿಪಿಎಂ ಮತಗಳನ್ನು ನ್ನಪರ ತಿರುಗಿಸಿದ್ದಕ್ಕಾಗಿ ತಳಮಟ್ಟದ ಸಿಪಿಎಂ ಕಾರ್ಯಕರ್ತರಿಗೂ ಧನ್ಯವಾದ ತಿಳಿಸುತ್ತೇನೆ ಎಂದು ಸುವೇಂದು ಅಧಿಕಾರಿ ಹೇಳಿದ್ದಾರೆ.

News Updates

ಎಸ್‌ಐಆ‌ರ್ ವಿಚಾರದಲ್ಲಿ ಬಿಜೆಪಿ ಕಾರ್ಯಕರ್ತರ ಬೆದರಿಸಿದರೆ ಸುಮ್ಮನಿರಲ್ಲ: ಪೊಲೀಸರಿಗೆ ಸಂಸದ ಕ್ಯಾ. ಚೌಟ ಎಚ್ಚರಿಕೆ – ಕಾಂಗ್ರೆಸ್ ತನ್ನ ಆರೋಪಗಳಿಗೆ ಸೂಕ್ತ ಸಾಕ್ಷ್ಯಾಧಾರಗಳನ್ನು ಒದಗಿಸಲಿ ಅಕ್ರಮವಾಗಿ ಮತ ರದ್ದು -ಮಾಡಲಾದ ವ್ಯಕ್ತಿಯನ್ನು ತಂದು ಚುನಾವಣಾಧಿಕಾರಿ ಮುಂದೆ ನಿಲ್ಲಿಸಲಿ: ಸಂಸದ ಸವಾಲು

[t4b-ticker]
error: Content is protected !!