ಸುಳ್ಯ:ಪ್ರತಿ ಮನೆಗೆ ನೀರು ಸರಬರಾಜು ಮಾಡುವ ಉದ್ದೇಶ ಹೊಂದಿರುವ ಕುಡಿಯುವ ನೀರು ಯೋಜನೆಯ ಪೈಪ್ ಅಳವಡಿಕೆಯಿಂದ ಸುಳ್ಯ ನಗರದಲ್ಲಿ ಆನೇಕ ಕಡೆ ಸಮಸ್ಯೆ ಉಂಟಾಗಿದೆ ಒಳ್ಳೆಯ ಉದ್ದೇಶ ಹೊಂದಿರುವ ಈ ಯೋಜನೆಯ ನಿರ್ವಹಣೆ ಯಲ್ಲಿ ವೈಫಲ್ಯ ಕಾಣುತ್ತಿದೆ.ಇದೀಗ ನೂರಾರು ಜನ ಪ್ರತಿನಿತ್ಯ ಓಡಾಡುವ ಸುಳ್ಯದ ರಥ ಬೀದಿಯ ರೋಟರಿ ಶಾಲಾ ಮುಂಭಾಗ ನೀರಿನ ಗೆಟ್ ವಾಲ್ ಅಳವಡಿಸಲಾಗಿತ್ತು ಆದರೆ ಅತಿಯಾದ ಪ್ರೆಶರ್ ಪರಿಣಾಮ ನೀರು ಪೋಲಾಗುತ್ತಿದ್ದೂ ಕೆಳಗಿನ ದೇವರ ಕಟ್ಟೆ ಬಳಿಯಿಂದ ಮುಖ್ಯ ರಸ್ತೆವರೆಗೆ ಹರಿಯುತ್ತಿದೆ ಅಲ್ಲಿನ ರಿಕ್ಷಾ ನಿಲ್ದಾಣ,ಕೆಳಗಿನ ಅಂಗಡಿ ಮಾಲಕರು ಮತ್ತು ನಿತ್ಯ ಸಂಚಾರಿಸುವ ಪಾದಚಾರಿಗಳಿಗೆ ಸಮಸ್ಯೆಯಾಗಿದೆ ತಕ್ಷಣ ಸಂಭಂದಪಟ್ಟ ಇಲಾಖೆ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.ಒಂದು ಕಡೆ ಸರ್ಕಾರ ನೀರಿನ ಮಿತ ಬಳಕೆ ಬಗ್ಗೆ ಜಾಗೃತಿ ಮೂಡಿಸುತ್ತಿರುವ ಸಂದರ್ಭದಲ್ಲಿ ಈ ರೀತಿ ನೀರು ಪೋಲಾಗುತ್ತಿರುವ ಬಗ್ಗೆ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸುಳ್ಯ ರಥಬೀದಿಯಲ್ಲಿ ಕುಡಿಯುವ ನೀರು ಪೈಪ್ ಅವ್ಯವಸ್ಥೆ | ರಥಬೀದಿ ರಸ್ತೆಯಲ್ಲಿ ಹರಿಯುತ್ತಿದೆ ನೀರು, ಪಾದಚಾರಿಗಳಿಗೆ ಸಮಸ್ಯೆ ತಕ್ಷಣ ಕ್ರಮ ಕೈಗೊಳ್ಳುವಂತೆ ಒತ್ತಾಯ
Savistara
Bureau Report
[t4b-ticker]












































