ಬೆಂಗಳೂರು:ಕರ್ನಾಟಕ ಸರ್ಕಾರವು ರಾಜ್ಯದ ವಾಹನ ಮಾಲೀಕರಿಗೆ ಶಾಕ್ ನೀಡಿದ್ದು, ಹೊಗೆ ತಪಾಸಣೆ ಪ್ರಮಾಣಪತ್ರ (PUC Certificate) ಪಡೆಯಲು ನಿಗದಿಪಡಿಸಲಾಗಿದ್ದ ಶುಲ್ಕವನ್ನು ಹೆಚ್ಚಿಸಿ ಆದೇಶ ಹೊರಡಿಸಿದೆ. ರಾಜ್ಯಾದ್ಯಂತ ಇರುವ ಅಧಿಕೃತ ಮಾಲಿನ್ಯ ತಪಾಸಣಾ ಕೇಂದ್ರಗಳಲ್ಲಿ (Authorized PUC Testing Centres) ಈ ಪರಿಷ್ಕೃತ ದರಗಳು ತಕ್ಷಣದಿಂದಲೇ ಜಾರಿಗೆ ಬರಲಿವೆ.
ಪರಿಷ್ಕೃತ PUC ಶುಲ್ಕಗಳ ವಿವರ: ವಿವಿಧ ನಮೂನೆಯ ವಾಹನಗಳಿಗೆ ಪರಿಷ್ಕರಿಸಲಾದ ನೂತನ ತಪಾಸಣಾ ಶುಲ್ಕದ ವಿವರ ಹೀಗಿದೆ: ದ್ವಿಚಕ್ರ ವಾಹನಗಳು ₹65 ರಿಂದ ₹80, ಆಟೋ ರಿಕ್ಷಾ ₹75 ರಿಂದ ₹80, ಪೆಟ್ರೋಲ್, ಎಲ್‌ಪಿಜಿ, ಸಿಎನ್‌ಜಿ ಕಾರುಗಳು₹115 ರಿಂದ ₹150, ಡೀಸೆಲ್ ವಾಹನಗಳು ₹160 80 ₹200.
ನಿಯಮ ಉಲ್ಲಂಘಿಸಿದರೆ ಭಾರಿ ದಂಡ: ಮೋಟಾರುವಾಹನ ಕಾಯ್ದೆಯಡಿ ಪ್ರತಿಯೊಂದು ವಾಹನಕ್ಕೂ ಸಿಂಧುವಾಗಿರುವ PUC ಪ್ರಮಾಣಪತ್ರ ಹೊಂದುವುದು ಕಡ್ಡಾಯವಾಗಿದೆ. ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿ ಸಂಚಾರ ಪೊಲೀಸರು ಹಾಗೂ ಸಾರಿಗೆ ಅಧಿಕಾರಿಗಳು ತಪಾಸಣೆ ಚುರುಕುಗೊಳಿಸಿದ್ದು, ಮಾನ್ಯತೆ ಇರುವ PUC ಪ್ರಮಾಣಪತ್ರ ಹೊಂದಿಲ್ಲದಿದ್ದರೆ ಭಾರೀ ದಂಡ ತೆರಬೇಕಾಗುತ್ತದೆ.ಆದ್ದರಿಂದ ವಾಹನ ಸವಾರರು ತಮ್ಮ ವಾಹನಗಳ ಮಾಲಿನ್ಯ ತಪಾಸಣೆಯ ಅವಧಿ ಮುಗಿಯುವ ಮುನ್ನವೇ ಅಧಿಕೃತ ಕೇಂದ್ರಗಳಿಗೆ ತೆರಳಿ ನೂತನ ದರವನ್ನು ಪಾವತಿಸಿ ಪ್ರಮಾಣಪತ್ರ ನವೀಕರಿಸಿಕೊಳ್ಳಲು ಸೂಚಿಸಲಾಗಿದೆ.













































