ಬೆಂಗಳೂರು: ಸಚಿವ ಸ್ಥಾನಕ್ಕೆ ರಾಜೀನಾಮೆ ಆಗ್ರಹಿ ಬಿಜೆಪಿ ನಡೆಸುತ್ತಿರುವ ಪ್ರತಿಭಟನೆ ಕುರಿತು ಬಿ.ನಾಗೇಂದ್ರ ಅವರು ಸುದ್ದಿಗೋಷ್ಠಿ ನಡೆಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಅವರು, ‘ನಾನು ಯಾರಿಗೂ ಬ್ಲಾಕ್ ಮೇಲ್ ಮಾಡಿ ಸಚಿವ ಸ್ಥಾನ ಪಡೆದಿಲ್ಲ. ನನ್ನ ಮೇಲೆ ನಂಬಿಕೆ ಇಟ್ಟು ಖಾತೆ ಕೊಟ್ಟಿದ್ದಾರೆ. ಕೂಲಂಕಷವಾಗಿ ಪರಿಶೀಲಿಸಿ ಸಚಿವ ಸ್ಥಾನ ನೀಡಿದ್ದಾರೆ. ನಾನು ದಲಿತನೇ, ಹುಟ್ಟು ದಲಿತ ಸಾಯೋದು ದಲಿತನೇ. ದೇಶದ ಅನೇಕ ಮಂತ್ರಿಗಳ ವಿರುದ್ಧ ಆರೋಪಗಳಿವೆ. 336 ಜನ ಸಚಿವರ ವಿರುದ್ಧ ಆರೋಪಗಳಿವೆ. ಬಿಜೆಪಿಯ 126 ಮಂದಿ ವಿರುದ್ಧ ಗಂಭೀರ ಪ್ರಕರಣಗಳಿವೆ’ ಎಂದಿದ್ದಾರೆ.’ಹೇಮಂತ್ ಬಿಸ್ವಾಸ್, ಸುವೇಂದು ವಿರುದ್ಧ ಗಂಭೀರ ಪ್ರಕರಣಗಳಿವೆ. ಇವರ ವಿರುದ್ಧ ಗಂಭೀರ ಆರೋಪಗಳಿರುವಾಗ ನಾನು ಯಾಕೆ ರಾಜೀನಾಮೆ ನೀಡಲಿ. ನನಗೆ ಈಗ ಬೇಲ್ ಸಿಕ್ಕಿದೆ. ನಾನು ಅಪರಾಧಿ ಅಲ್ಲಾ. ಕೇಂದ್ರದ ತನಿಖಾ ಸಂಸ್ಥೆಗಳು ಕಿರುಕುಳ ನೀಡಿವೆ. ರಾಮನ ಹುಂಡಿ ಕದ್ದರು, ಅಂತಹ ಕೃತ್ಯಕ್ಕಿಂತ ದೊಡ್ಡ ಕೃತ್ಯನಾ ?. ನಾನು ಕೂಡ ರಾಮನ ಹುಂಡಿಗೆ ದುಡ್ಡು ಹಾಕಿದ್ದೇನೆ’ ಎಂದು ಹೇಳಿಕೊಂಡಿದ್ದಾರೆ.`ಬಿಜೆಪಿಗರು ವರ್ಣಪದ್ಧತಿಯನ್ನ ತರಲು ಹೊರಟಿದ್ದಾರೆ. ದಲಿತನಿಗೆ ಹಕ್ಕುಚ್ಯುತಿ ಮಾಡುತ್ತಿದ್ದಾರೆ. ನಾನು ಬೇಲ್ ಮೇಲೆ ಇದ್ದೇನೆ. ಕೇಂದ್ರದಲ್ಲೂ ತುಂಬಾ ಜನರು ಬೇಲ್ ಮೇಲೆ ಇದ್ದಾರೆ. ಇಂದೂ ಕೂಡ ಚರ್ಚೆಗೆ ನಾವು ಸಿದ್ಧರಿದ್ದೇವೆ. ಪ್ರಕರಣ ನ್ಯಾಯಾಲಯದಲ್ಲಿದೆ, ಇವರು ನ್ಯಾಯಾಲಯಕ್ಕಿಂತ ದೊಡ್ಡವರ?. ನಾನು ನಿರಪರಾಧಿ, ನಿರಪರಾಧಿಯನ್ನ ಅಪರಾಧಿಯನ್ನಾಗಿ ಮಾಡಲು ಹೊರಟಿದ್ದಾರೆ. ದಲಿತರು, ಆದಿವಾಸಿಗಳ ವಿರುದ್ಧ ರಾಜಕೀಯ ಮಾಡಬೇಡಿ’ ಎಂದಿದ್ದಾರೆ.
“ನಮ್ಮ ಬಳ್ಳಾರಿಯ ಬಿಜೆಪಿ ನಾಯಕರು ಕೂಡ ನನ್ನದು ವೈಯಕ್ತಿಕ ಪ್ರಕರಣ ಎನ್ನುತ್ತಿದ್ದಾರೆ. ನಿಮ್ಮ ವಿರುದ್ಧ ಇರುವ ಆರೋಪದ ವಿರುದ್ಧವೂ ತನಿಖೆ ನಡೆಸುತ್ತೇವೆ. ನನಗೆ ಕೊಟ್ಟಿರುವ ಇಲಾಖೆಯಲ್ಲಿ ಉತ್ತಮ ಕೆಲಸ ಮಾಡಿಕೊಂಡು ಬರುತ್ತಿದ್ದೇನೆ. ಯುವಕರಿಗಾಗಿ ಒಳ್ಳೆಯ ಕೆಲಸ ಮಾಡಿದ್ದೇನೆ. ಆದರೂ ನನ್ನ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ನನ್ನ ಸಮುದಾಯದ ಜನತೆಗೆ ನಾನು ಬೆಳಕು ಚೆಲ್ಲಬೇಕು. ಹಗರಣದ ವಿಚಾರಕ್ಕೆ ಬಂದಾಗ, ನನ್ನ ವಿರುದ್ಧ ಘೋಷಣೆ ಕೂಗಿದಾಗ ನೋವು ಆಗುತ್ತದೆ. ಸುಳ್ಳನ್ನ ನೂರು ಬಾರಿ ಹೇಳಿ ಸತ್ಯ ಮಾಡೋಕೆ ಹೊರಟಿದ್ದಾರೆ. ಚರ್ಚೆಗೆ ಬನ್ನಿ ಎಂದರೂ ಪ್ರತಿಪಕ್ಷಗಳು ಬರುತ್ತಿಲ್ಲ ಎಂದಿದ್ದಾರೆ.ಎಲ್ಲಾ ಮಂತ್ರಿಗಳು ಕೂಡ ಚರ್ಚೆಗೆ ಸಿದ್ದರಿದ್ದೇವೆ. ವಾಲ್ಮೀಕಿ ನಿಗಮದಿಂದ ಬ್ಯಾಂಕ್‌ಗೆ ವರ್ಗವಣೆಯಾಗುತ್ತದೆ. ₹187 ಕೋಟಿ ನಮ್ಮ ನಿಗಮದಿಂದ ಬೋರ್ಡ್ ಮೀಟಿಂಗ್ ಗಮನಕ್ಕೂ ಬಾರದೆ ಹಣ ವರ್ಗಾವಣೆ ಆಗಿದೆ. ಮುಖ್ಯ ಅಧಿಕಾರಿಯ ಗಮನಕ್ಕೂ ಬಾರದೆ ಹಣ ವರ್ಗಾವಣೆ ಆಗಿದೆ. ಇಂಡಿಯನ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್ ಗೆ ವರ್ಗಾವಣೆ ಆಗಿದೆ. ಚಂದ್ರಶೇಖರ್ ಎಂಬ ವ್ಯಕ್ತಿ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. 187 ಕೋಟಿಯಲ್ಲಿ ನೂರು ಕೋಟಿ ಹಣವನ್ನು ಸೇಫ್ ಮಾಡುತ್ತೇವೆ. ಉಳಿದೆ 87 ಕೋಟಿ ಹಣ ಆಗಾಗಲೇ ವರ್ಗಾವಣೆ ಆಗಿತ್ತು. ಎಸ್‌ಐಟಿ ಮೂಲಕ ಇದರ ತನಿಖೆ ಮಾಡಲು ನಿರ್ಧರಿಸಿತು. ಎಸ್‌ಐಟಿ ರಚನೆಯಾಗಿದ್ದು ಮೇ.31ರಂದು. ಅದೇ ಇಲಾಖೆಯ ಮಂತ್ರಿಯಾಗಿದ್ದರೆ ಪ್ರಭಾವ ಬೀರಬಹುದೆಂದು ರಾಜೀನಾಮೆ ನೀಡಿದೆ’ ಎಂದು ಹೇಳಿದ್ದಾರೆ.
ನನ್ನ ಸ್ವ ಇಚ್ಛೆಯಿಂದ ರಾಜೀನಾಮೆ ನೀಡಿದೆ. ಇಡೀ ದೇಶವೇ ಮೆಚ್ಚುವಂತೆ ಎಸ್‌ಐಟಿ ಕೆಲಸ ಮಾಡಿದೆ. ಕೆಲವೇ ದಿನಗಳಲ್ಲಿ ಎಸ್‌ಐಟಿ ಹಣವನ್ನು ಮರುವಶ ಮಾಡಿಕೊಂಡಿತ್ತು. 800 ಅಕೌಂಟ್ ಗಳಿಗೆ ಹೋಗಿದ್ದ ಹಣವನ್ನು ಹಾಗೂ ₹ 79 ಕೋಟಿ ಹಣವನ್ನು ಮರುವಶ ಮಾಡಲಾಗಿದೆ. ಎಲ್ಲೂ ಕೂಡ ನನ್ನ ಅಕೌಂಟ್ ಗೆ ಹಣ ವರ್ಗಾವಣೆ ಆಗಿಲ್ಲ. ಇಡಿ ದಾಳಿ ಮಾಡಿ ನನ್ನನ್ನ ಜೈಲ್ ಗೆ ಹಾಕಿತು. ನನ್ನ ಮೇಲೆ ಕೇಂದ್ರದ ತನಿಖಾ ಸಂಸ್ಥೆಗಳು ವಿಚಾರಣೆ ನಡೆಸಿದವು. ಚರ್ಚೆಗೆ ಮುಕ್ತ ಅವಕಾಶ ಕೇಳಿದರೂ ಒಪ್ಪುತ್ತಿಲ್ಲ. ದಲಿತ, ಆದಿವಾಸಿ ಸಮುದಾಯದ ಸಚಿವನನ್ನ ಕೆಳಗಿಸಲು ಹುನ್ನಾರ ನಡೆಸುತ್ತಿದ್ದಾರೆ. ಕೇಂದ್ರ ಸರ್ಕಾರ ಯಾವ ರೀತಿ ದಲಿತರನ್ನ ನಡೆಸಿಕೊಳ್ಳುತ್ತಿದ್ದಾರೆ ಎಂದು ಇಡೀ ದೇಶ ನೋಡುತ್ತಿದೆ’ ಎಂದಿದ್ದಾರೆ.’ಮಲ್ಲಿಕಾರ್ಜುನ ಖರ್ಗೆಯವರು ಕಾರ್ಯಕ್ರಮ ಮುಗಿಸಿ ಬಂದಿದ್ದರು. ಮನುವಾದಿಗಳು ಆ ಜಾಗವನ್ನು ಶುದ್ದೀಕರಣ ಮಾಡುತ್ತಾರೆ ಎಂದರೆ ಯಾವ ಸ್ಥಿತಿಯಲ್ಲಿದ್ದೇವೆ. ಪ್ರಧಾನಿಗೆ ಸರಿಸಮನಾದ ನಾಯಕನಿಗೇ ಹೀಗೆ ಮಾಡುತ್ತಾರೆಂದರೆ ನನ್ನನ್ನು ಬಿಡುತ್ತಾರಾ?. ಅಖಂಡ ವಾಲ್ಮೀಕಿ ಸಮುದಾಯದ ಇದನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. ನಮ್ಮ ಸಮುದಾಯ ರಾಜ್ಯದಲ್ಲಿ ಬಹಳ ಶಕ್ತಿಯುತವಾಗಿದೆ. ಮುಂದಿನ ದಿನಗಳಲ್ಲಿ ಚುನಾವಣೆ ವೇಳೆ ಇದು ಗೊತ್ತಾಗುತ್ತದೆ ಎಂದು ಹೇಳಿಕೊಂಡಿದ್ದಾರೆ.ನಮ್ಮ ಪಕ್ಷ ಇದನ್ನು ಎದುರಿಸಲು ಸಿದ್ದವಿದೆ. ನನ್ನ ವಜಾ ಮಾಡಿ ಅಂತಾ ವಿಪಕ್ಷಗಳು ಕೇಳುತ್ತಿವೆ. ನನ್ನನ್ನು ಸಚಿವ ಸ್ಥಾನದಿಂದ ಯಾಕೆ ವಜಾ ಮಾಡಬೇಕು. ಅಂಬೇಡ್ಕರ್ ಕೊಟ್ಟಿರುವ ಸಂವಿಧಾನ ನಮ್ಮನ್ನ ರಕ್ಷಿಸುತ್ತೆ’ ಎಂದಿದ್ದಾರೆ.













































