‘ಸೌಜನ್ಯ’ ಪ್ರಕರಣಕ್ಕೆ ಬಿಗ್ ಆಫ್ರೇಷನ್!: ಸಿಬಿಐ ಮತ್ತು ಸಿಐಡಿಗೆ ಬಿದ್ದಿದೆ ಎಸ್ಐಟಿ ಯಿಂದ ತುರ್ತು ಪತ್ರ!

Picture of Savistara

Savistara

Bureau Report

ರಾಜ್ಯಾದ್ಯಂತ ತೀವ್ರ ಕಾತರ ಮೂಡಿಸಿರುವ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರುತನಿಖೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ರಚಿಸಿರುವ ವಿಶೇಷ ತನಿಖಾ ದಳ (SIT) ಕಾರ್ಯಾಚರಣೆ ಚುರುಕುಗೊಳಿಸಿದ್ದು, ಅತ್ಯಂತ ಮಹತ್ವದ ಹೆಜ್ಜೆಯನ್ನಿಟ್ಟಿದೆ.

ಪ್ರಕರಣದ ಹಿಂದಿನ ತನಿಖಾ ವರದಿಗಳು, ಸಂಗ್ರಹಿಸಲಾದ ಸಾಕ್ಷ್ಯಾಧಾರಗಳು ಹಾಗೂ ಸಂಪೂರ್ಣ ದಾಖಲೆಗಳನ್ನು ತಕ್ಷಣವೇ ಹಸ್ತಾಂತರಿಸುವಂತೆ ಕೋರಿ ಎಸ್‌ಐಟಿ ತಂಡವು ಕೇಂದ್ರ ತನಿಖಾ ದಳ (CBI) ಮತ್ತು ರಾಜ್ಯ ಅಪರಾಧ ತನಿಖಾ ವಿಭಾಗಕ್ಕೆ (CID) ಅಧಿಕೃತ ಪತ್ರ ಬರೆದಿದೆ.​ಈ ಹಿಂದೆ ಸೌಜನ್ಯ ಪ್ರಕರಣದ ಸುದೀರ್ಘ ತನಿಖೆಯನ್ನು ಸಿಐಡಿ ಹಾಗೂ ಸಿಬಿಐ ಅಧಿಕಾರಿಗಳು ಪ್ರತ್ಯೇಕವಾಗಿ ನಡೆಸಿದ್ದರು.

ಇತ್ತೀಚೆಗಷ್ಟೇ ಸುಪ್ರೀಂ ಕೋರ್ಟ್ (Supreme Court) ಈ ಪ್ರಕರಣದ ಮರುತನಿಖೆಗೆ ನೀಡಿದ್ದ ಐತಿಹಾಸಿಕ ಆದೇಶದ ಬೆನ್ನಲ್ಲೇ ರಚನೆಗೊಂಡಿದ್ದ ಎಸ್‌ಐಟಿ, ಇದೀಗ ತನಿಖೆಯ ಆರಂಭದಲ್ಲೇ ಹಿಂದಿನ ಏಜೆನ್ಸಿಗಳು ಸಂಗ್ರಹಿಸಿದ್ದ ಪ್ರತಿಯೊಂದು ಮಹತ್ವದ ದಾಖಲೆ ಹಾಗೂ ಡಿಜಿಟಲ್ ಸಾಕ್ಷ್ಯಗಳನ್ನು ತನ್ನ ವಶಕ್ಕೆ ಪಡೆದುಕೊಳ್ಳಲು ಮುಂದಾಗಿದೆ.​

ಹಳೆಯ ತನಿಖೆಯಲ್ಲಿನ ಲೋಪದೋಷಗಳು ಹಾಗೂ ಮುಚ್ಚಿಡಲಾದ ಪ್ರಮುಖ ಅಂಶಗಳನ್ನು ಮರುಪರಿಶೀಲಿಸಲು ಈ ದಾಖಲೆಗಳು ಅತ್ಯಂತ ಪ್ರಮುಖವಾಗಲಿವೆ. ದಾಖಲೆಗಳು ತಲುಪಿದ ತಕ್ಷಣವೇ ಎಸ್‌ಐಟಿ ಹಿರಿಯ ಅಧಿಕಾರಿಗಳು ಪ್ರಕರಣದ ಪ್ರತಿಯೊಂದು ಸಣ್ಣ ಪುಟ್ಟ ವಿವರಗಳನ್ನೂ ಸಮಗ್ರವಾಗಿ ವಿಶ್ಲೇಷಣೆ ನಡೆಸಿ, ಮುಂದಿನ ಹಂತದ ಮರುವಿಚಾರಣೆಗೆ ಸಾಕ್ಷಿಗಳಿಗೆ ಸಮನ್ಸ್ ಜಾರಿಗೊಳಿಸಲಿದ್ದಾರೆ.

[t4b-ticker]
error: Content is protected !!